Advertisement
ಅಧ್ಯಕ್ಷತೆ ವಹಿಸಿದ್ದ ಅಸೋಸಿಯೇಶನ್ ಅಧ್ಯಕ್ಷ ಹರೀಶ್ ಜಿ. ಅಮೀನ್ ಮಾತನಾಡಿ, ಬಿಲ್ಲವರ ಅಸೋಸಿಯೇಶನ್ ಕೊರೊನಾ ಮಹಾಮಾರಿಯಿಂದ ತೊಂದರೆಗೀಡಾದ ಕುಟುಂಬದವರಿಗೆ ಆರಂಭ ದಿಂದಲೂ ವಿವಿಧ ರೂಪಗಳಲ್ಲಿ ಸಹಕರಿಸಿದೆ. ಈ ವರೆಗೆ 900 ಮಂದಿಗೆ ಆಹಾರದ ಕಿಟ್ ನೀಡಿದ್ದೇವೆ. ಈ ಕಾರ್ಯಕ್ರಮಗಳಿಗೆ ಎಲ್ಲ ದಾನಿಗಳ ಅಪಾರ ಸಹಕಾರ ದೊರಕಿದೆ. ಅಸೋಸಿಯೇಶನಿನ 89 ವರ್ಷಗಳ ಇತಿಹಾಸದಲ್ಲಿ ಜನಪರ ಸೇವೆಯಲ್ಲಿ ಲಕ್ಷಾಂತರ ಜನರಿಗೆ ದಾರಿದೀಪವಾಗಿದೆ. ಸಂದರ್ಭ ಒದಗಿದಾಗ ಅಸೋಸಿಯೇಶನಿನ ಪದಾಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸಿದ್ದಾರೆ. ದಿ| ಜಯ ಸಿ. ಸುವರ್ಣ ಅವರು ನಮಗೆ ಸ್ಫೂರ್ತಿದಾಯಕರಾಗಿದ್ದು, ಅವರ ಮಾರ್ಗದರ್ಶನ ನಮಗೆ ಸಮಾಜ ಸೇವೆಗೆ ಉತ್ತೇಜನ ನೀಡಿದೆ. ಬಡವರ ಕಣ್ಣೀರೊರೆಸುವ ಕಾರ್ಯವೇ ನಮ್ಮ ಮುಖ್ಯ ಧ್ಯೇಯ. ನಿಮ್ಮ ಸಹಕಾರ ನಮಗೆ ಸದಾ ಸಿಗುತ್ತಿರಲಿ. ಭವಿಷ್ಯದಲ್ಲೂ ನಮ್ಮಿಂದ ಸಾಧ್ಯವಾದಷ್ಟು ಸಹಕಾರ ನೀಡಲಿದ್ದೇವೆ. ಜು. 24ರಂದು ಬಿಲ್ಲವ ಭವನದಲ್ಲಿ ರಕ್ತದಾನ ಶಿಬಿರ ಜರಗಲಿದೆ. ಇದಕ್ಕೆ ತಾವೆಲ್ಲರೂ ಸಹಕಾರ ನೀಡಬೇಕೆಂದು ವಿನಂತಿಸಿದರು.
Related Articles
Advertisement
ಸ್ಥಳೀಯ ಕಚೇರಿಯ ಮಾಜಿ ಕಾರ್ಯಾಧ್ಯಕ್ಷ, ಭಾರತ್ ಬ್ಯಾಂಕ್‌ನ ನಿರ್ದೇಶಕರಾದ ಗಂಗಾಧರ ಜೆ. ಪೂಜಾರಿ ಅವರು ನೂತನ ಅಧ್ಯಕ್ಷರಾದ ಹರೀಶ್ ಜಿ. ಅಮೀನ್ ಅವರನ್ನು ಅಭಿನಂದಿಸಿದರು. ನಿಶಿತಾ ಎಸ್. ಸುವರ್ಣ ಹಾಗೂ ಅವರ ಪತಿ ಸೂರ್ಯಕಾಂತ್ ಜಯ ಸುವರ್ಣ ಅವರನ್ನು ಸ್ಥಳೀಯ ಕಚೇರಿಯ ಜತೆ ಕಾರ್ಯದರ್ಶಿ ಸಬಿತಾ ಜಿ. ಪೂಜಾರಿ, ಕಾರ್ಯಕರ್ತರಾದ ವಾರಿಜಾ ಶೇಖರ್ ಕರ್ಕೇರ, ಹರೀಶ್ ಜಿ. ಅಮೀನ್ ಅಭಿನಂದಿಸಿದರು.
ಉಪಸ್ಥಿತರಿದ್ದ ಬಿಲ್ಲವರ ಅಸೋಸಿಯೇಶನ್‌ನ ಉಪಾಧ್ಯಕ್ಷ ಶಂಕರ್ ಡಿ. ಪೂಜಾರಿ, ಜತೆ ಕಾರ್ಯದರ್ಶಿ ಹರೀಶ್ ಜಿ. ಸಾಲ್ಯಾನ್, ಕೇಶವ ಕೆ. ಕೋಟ್ಯಾನ್, ಕಾಂದಿವಲಿ ಸ್ಥಳೀಯ ಕಚೇರಿಯ ಪ್ರತಿನಿಧಿ ಹರೀಶ್ ಪೂಜಾರಿ, ಮಾಜಿ ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ್ ಅಂಚನ್, ಯುವಕ ವಿಭಾಗದ ಮಾಜಿ ಕಾರ್ಯಾಧ್ಯಕ್ಷ ನೀಲೇಶ್ ಪಲಿಮಾರ್, ಅತಿಥಿ ದೀಪಕ್ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಂದಿವಲಿಯ ಸ್ಥಳೀಯ ಕಚೇರಿ ಯ ಗೌರವ ಕಾರ್ಯಾಧ್ಯಕ್ಷ ಭಾಸ್ಕರ್ ಎಂ. ಪೂಜಾರಿ, ಕೋಶಾಧಿಕಾರಿ ರಮೇಶ ಬಂಗೇರ, ಕಾರ್ಯಕರ್ತ ರಾದ ವಿಲಾಸ್ ಪೂಜಾರಿ, ಶೈಲೇಶ್ ಪೂಜಾರಿ,
ಯಮುನಾ ಸಾಲ್ಯಾನ್, ಸುಜಾತಾ ಪೂಜಾರಿ. ಜಯರಾಮ್ ಪೂಜಾರಿ, ವಿದ್ಯಾ ಆರ್. ಅಮೀನ್, ಅನಿತಾ ಪೂಜಾರಿ ಮೊದಲಾದವರು ಸಹಕರಿಸಿದರು.