Advertisement

ಹಿರಿಯ ನಾಗರಿಕರಿಗೆ ಥಾಣೆಯ “ವಿ ಆರ್‌ ಫಾರ್‌ ಯು’ನೆರವು

12:31 PM May 26, 2021 | Team Udayavani |

ಥಾಣೆ: ಕಳೆದ ಕೆಲವು ದಿನಗಳಿಂದ ಥಾಣೆಯಲ್ಲಿ ಲಸಿಕೆಗಳ ಕೊರತೆಯಿಂದ ಹಿರಿಯ ನಾಗರಿಕರು ಸಮಸ್ಯೆ ಅನುಭವಿಸುತ್ತಿದ್ದು, ಲಸಿಕೆ ಪಡೆಯಲು ಹಿರಿಯ ನಾಗರಿಕರು ಮುಂಜಾನೆ 3ರಿಂದ ಕೇಂದ್ರದಲ್ಲಿ ಸರತಿ ಸಾಲಿನಲ್ಲಿ ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ.

Advertisement

ಲಸಿಕೆ ಕೇಂದ್ರದಲ್ಲಿ ಲಸಿಕೆ ಲಭ್ಯವಿಲ್ಲದ ಕಾರಣ ಮನೆಗೆ ಮರಳಬೇಕಾಗುತ್ತದೆ. ಕಳೆದ ಕೆಲವು ದಿನಗಳಿಂದ ಎಲ್ಲೆಡೆ ಲಸಿಕೆಗಳ ಕೊರತೆ ಇದೆ ಮತ್ತು ಲಸಿಕೆ ಅಭಿಯಾನದಲ್ಲಿ ಗೊಂದಲಗಳಿವೆ. ಅಲ್ಲದೆ ಎರಡನೇ ಡೋಸ್‌ ತೆಗೆದುಕೊಳ್ಳುವ ಗಡುವು ಮುಕ್ತಾಯಗೊಂಡಿರುವುದರಿಂದ ಹಿರಿಯ ನಾಗರಿಕರು ಆತಂಕಕ್ಕೊಳಗಾಗಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿರುವ “ವಿ ಆರ್‌ ಫಾರ್‌ ಯು’ ಸಂಸ್ಥೆ ಹಿರಿಯ ನಾಗರಿಕರ ನೆರವಿಗೆ ಬಂದಿದೆ.

ಸಂಸ್ಥೆಯ ಸ್ವಯಂಸೇವಕರು ಬೆಳಗ್ಗೆ ಕೇಂದ್ರಗಳಿಗೆ ತೆರಳಿ ಹಿರಿಯ ನಾಗರಿಕರಿಗಾಗಿ ಸರತಿ ಸಾಲಿನಲ್ಲಿ  ನಿಲ್ಲುತ್ತಾರೆ. ಆದ್ದರಿಂದ ಹಿರಿಯ ನಾಗರಿಕರು ಮುಂಜಾನೆಯಿಂದ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ. ಲಸಿಕೆಗಾಗಿ ಅವರು ಹಿರಿಯ ನಾಗರಿಕರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

40 ಮಂದಿ ಸ್ವಯಂಸೇವಕರು

ಸಹಾಯವಾಣಿಗೆ ಪ್ರತೀದಿನ 150ರಿಂದ 200 ಕರೆಗಳು ಬರುತ್ತವೆ. ವ್ಯಾಕ್ಸಿನೇಷನ್‌ಗಾಗಿ ಅವರ ಸಂಖ್ಯೆ ಹತ್ತಿರದಲ್ಲಿದ್ದರೆ ಸ್ವಯಂಸೇವಕರು ಹಿರಿಯರನ್ನು ಕೇಂದ್ರಕ್ಕೆ ಕರೆತರುತ್ತಾರೆ. ಈ ಸಂಘಟನೆಯ ಒಟ್ಟು 40 ಮಂದಿ ಸ್ವಯಂಸೇವಕರು ನಗರದ ವಿವಿಧ ಭಾಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

Advertisement

ವಿವಿಧ ನಗರಗಳಲ್ಲಿ ಸೇವೆ

ನಗರದ ವಿವಿಧ ಭಾಗಗಳಾದ ನೌಪಾಡಾ, ಘೋಡ್‌ ಬಂದರ್‌, ಯಶೋದನಗರ, ಸಾವರ್ಕರ್‌ ನಗರದ ಹಿರಿಯ ನಾಗರಿಕರ ಮಕ್ಕಳು ವಿದೇಶದಲ್ಲಿ ನೆಲೆಸಿರುವುದರಿಂದ ಹಿರಿಯ ನಾಗರಿಕರು ಏಕಾಂಗಿಯಾಗಿ ಬದುಕಬೇಕಾಗಿದೆ. ವ್ಯಾಕ್ಸಿನೇಶನ್‌ ಅವಧಿಯಲ್ಲಿ ಈ ಹಿರಿಯ ನಾಗರಿಕರು  ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಅಂತಹ ಹಿರಿಯ ನಾಗರಿಕರನ್ನು ಥಾಣೆ ಯಲ್ಲಿರುವ ವಿ ಆರ್‌ ಫಾರ್‌ ಯು ನೋಡಿಕೊಳ್ಳುತ್ತಿದೆ. ಕಳೆದ ಒಂದೂವರೆ ವರ್ಷಗಳಿಂದ ಅವರಿಗೆ ಸಹಾಯ ಮಾಡುತ್ತಿದ್ದೇವೆ. ಸಹಾಯ ಮಾಡುವುದರ ಜತೆಗೆ ಈ ಸ್ವಯಂಸೇವಕರು ಲಸಿಕೆ ನೀಡುವ ಬಗ್ಗೆ ಸಮಾಲೋಚನೆ ಮತ್ತು ಸೂಕ್ತ ಮಾರ್ಗದರ್ಶನವನ್ನೂ ನೀಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next