Advertisement

ಹಿಂದ್‌ಮಾತಾ ತಗ್ಗು ಪ್ರದೇಶದ  ರಸ್ತೆ ಎತ್ತರ ಹೆಚ್ಚಳ ಕಾರ್ಯಕ್ಕೆ ಚಾಲನೆ

01:09 PM Jun 26, 2021 | Team Udayavani |

ಮುಂಬಯಿ : ನಗರದ ಡಾ| ಬಾಬಾಸಾಹೇಬ್‌ ಅಂಬೇಡ್ಕರ್‌ ರಸ್ತೆಯಲ್ಲಿರುವ ಹಿಂದ್‌ಮಾತಾ ಫ್ಲೈಓವರ್‌ ಮತ್ತು ಪರೇಲ್‌ ಟಿಟಿ ಫ್ಲೈಓವರ್‌ ನಡುವಿನ ರಸ್ತೆಯ ಎತ್ತರವನ್ನು ಹೆಚ್ಚಿಸುವ ಕಾರ್ಯಕ್ಕೆ ಪರಿಸರ ಸಚಿವ ಆದಿತ್ಯ ಠಾಕ್ರೆ ಅವರು ಶುಕ್ರವಾರ ಚಾಲನೆ ನೀಡಿದರು.

Advertisement

ಈ ಸ್ಥಳದಲ್ಲಿ ರಸ್ತೆಯ ಎತ್ತರ ಹೆಚ್ಚಿಸುವುದರಿಂದ  ತಗ್ಗು ಪ್ರದೇಶ ಜಲಾವೃತಗೊಳ್ಳುವ ಸಮಸ್ಯೆ ಪರಿಹರಿ ಸಲು ಸಹಾಯವಾಗುವುದು ಎಂದು ಸಚಿವ ಆದಿತ್ಯ  ಠಾಕ್ರೆ ತಿಳಿಸಿದರು.

ಕಾರ್ಯಕ್ರಮದಲ್ಲಿ  ಮುಂಬಯಿ ಮೇಯರ್‌ ಕಿಶೋರಿ ಪೆಡೆ°àಕರ್‌, ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತ ಪಿ. ವೇಲರಸು, ಜಿÇÉಾಧಿಕಾರಿ ವಿಜಯ್‌ ಬಾಲಂವಾರ್‌ ಮೊದಲಾದವರು ಉಪಸ್ಥಿತರಿದ್ದರು.

ಹಿಂದ್‌ಮಾತಾ ತಗ್ಗು ಪ್ರದೇಶಗಳಲ್ಲಿ ಡಾ| ಬಾಬಾಸಾಹೇಬ್‌ ಅಂಬೇಡ್ಕರ್‌ ರಸ್ತೆಯಲ್ಲಿ

ಭಾರೀ ಮಳೆಯಿಂದಾಗಿ ಸಂಚಾರ ದಟ್ಟಣೆ ಸಮಸ್ಯೆ ಯಾಗಿತ್ತು. ಆದುದರಿಂದ ನಿಗಮವು 180  ಮೀಟರ್‌ ರಸ್ತೆಯ ಎತ್ತರವನ್ನು ಪ್ರಸ್ತುತ ಮಟ್ಟದಿಂದ 1.2 ಮೀಟರ್‌ ಹೆಚ್ಚಿಸಲಿದೆ.

Advertisement

ಈ ವೇಳೆ ಮಹಾತ್ಮಾ ಗಾಂಧಿ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಮಿನಿ ಪಂಪಿಂಗ್‌ ಸ್ಟೇಷನ್‌ ಕಾಮಗಾರಿಗಳನ್ನೂ ಸಚಿವರು ಪರಿಶೀಲಿಸಿದರು. ಇದರ ಸಾಮರ್ಥ್ಯ ನಿಮಿಷಕ್ಕೆ 2.33 ಲಕ್ಷ ಲೀಟರ್‌ ಆಗಿದೆ. ಈ ಪಂಪಿಂಗ್‌ ಸ್ಟೇಷನ್‌ ಕೆಲಸವನ್ನು ಆದಷ್ಟು ಬೇಗ ಪೂರ್ಣಗೊಳಿಸಲು ನಿರ್ದೇಶನ ನೀಡಿದ್ದು, ಪ್ರವಾಹ ಪರಿಸ್ಥಿತಿಯಿಂದ ಉಂಟಾಗುವ ಸಮಸ್ಯೆಗಳನ್ನು ಪರಿಹರಿಸಲು  ಸಹಾಯ ಮಾಡುತ್ತದೆ ಎಂದು ಸಚಿವ ಆದಿತ್ಯ ಠಾಕ್ರೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next