ಗಡ್ಜಿರೋಲಿ,: ತೆಲಂಗಾಣದ ಮೆಡಿಗಟ್ಟಾ ಯೋಜನೆಯಿಂದ ಮತ್ತು ಮಧ್ಯಪ್ರದೇಶದ ಸಂಜಯ್ ಸರೋವರದಿಂದ ನೀರು ಬಿಡುಗಡೆ ಮಾಡುವಾಗ ಮತ್ತು ನಿರ್ಬಂಧಿಸುವಾಗ ಗಡ್ಜಿರೋಲಿ ಜಿಲ್ಲಾಡಳಿತಕ್ಕೆ ಮುನ್ಸೂಚನೆ ನೀಡಬೇಕು. ಹೀಗೆ ಮುನ್ಸೂಚನೆ ನೀಡುವುದರಿಂದ ಸಿರೊಂಚ ತಾಲೂಕಿನ ನಿವಾಸಿಗರನ್ನು ಮತ್ತು ಗೋದಾವರಿ ನದಿಯ ದಡದಲ್ಲಿರುವ ಗ್ರಾಮಗಳ ಜನರನ್ನು ಸಮಯದಲ್ಲಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬಹುದು ಎಂದು ಗಡಿcರೋಲಿ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ನಗರಾಭಿವೃದ್ಧಿ ಸಚಿವ ಏಕನಾಥ ಶಿಂಧೆ ಹೇಳಿದ್ದಾರೆ.
ಜಲಸಂಪನ್ಮೂಲ ಸಚಿವ ಜಯಂತ್ ಪಾಟೀಲ್ ಅಧ್ಯಕ್ಷತೆಯಲ್ಲಿ ಗೋಸಿಖದ್ì ಅಣೆಕಟ್ಟಿನ ಸ್ಥಿತಿಗತಿ ಕುರಿತು ನಡೆದ ಪರಿಶೀಲನ ಸಭೆಯಲ್ಲಿ ಅವರು ಮಾತನಾಡಿ, ಕಳೆದ ವರ್ಷ ಹಠಾತ್ತನೆ ನೀರು ಬಿಡುಗಡೆಯಾಗಿದ್ದರಿಂದ ಮತ್ತು ಜಿÇÉಾಡಳಿತಕ್ಕೆ ಯಾವುದೇ ಮುನ್ಸೂಚನೆ ನೀಡದ ಕಾರಣ ಗೋಸಿಖುರ್ಡ್‌ನಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು, ವಿದರ್ಭದಲ್ಲಿ ಪ್ರವಾಹಕ್ಕೆ ಕಾರಣವಾಯಿತು. ಇದರಿಂದ ಕೃಷಿಗೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಯಿತು. ಆದ್ದರಿಂದ ಈ ವರ್ಷ ಅಂತಹ ಪರಿಸ್ಥಿತಿ ಉದ್ಭವಿಸಬಾರದು ಎಂದು ಸೂಚಿಸಿದರು.
ಮಧ್ಯಪ್ರದೇಶದ ಸಂಜಯ್ ಸರೋವರದ ನೀರನ್ನು ಗೋಸಿಖುದ್ìಗೆ ಹರಿಸುವುದರಿಂದ ಅಣೆಕಟ್ಟಿನ ನೀರನ್ನು ಬಿಡುಗಡೆ ಮಾಡಬೇಕಾ ಗುತ್ತದೆ. ಇದರ ಪರಿಣಾಮವಾಗಿ ವೈಣ್‌ಗಂಗಾ ಮತ್ತು ಪ್ರಣಿತಾ ಎಂಬ ಎರಡು ನದಿಗಳ ತೀರದಲ್ಲಿರುವ ಹಳ್ಳಿಗಳು ಪ್ರವಾಹದಲ್ಲಿ ಸಿಲುಕುತ್ತಿವೆ. ಗೋಸಿಖುದ್ì ನಿಂದ ಬಿಡುಗಡೆಯಾದ ಬಳಿಕ ನೀರು ಗಡಿcರೋಲಿಯನ್ನು ತಲುಪಲು ಹದಿನೈದು ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ಮಧ್ಯಪ್ರದೇಶ ಮತ್ತು ತೆಲಂಗಾಣ ಸರಕಾರಗಳು ನೀರನ್ನು ಬಿಡುಗಡೆ ಮಾಡುವಾಗ ಮತ್ತು ನಿಲ್ಲಿಸುವಾಗ ಗಡಿcರೋಲಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು. ಇದರಿಂದ ಯೋಜನೆ ಸರಿಯಾಗಿ ಆಗಬಹುದು ಎಂದು ಶಿಂಧೆ ಸ್ಪಷ್ಟಪಡಿಸಿದ್ದಾರೆ.
ಏಕನಾಥ್ ಶಿಂಧೆ ಅವರ ಸಲಹೆಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದು. ಮುಂದಿನ 8ರಿಂದ 10 ದಿನಗಳಲ್ಲಿ ಮಧ್ಯಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರದ ಕಾರ್ಯ ದರ್ಶಿಗಳ ಸಭೆ ನಡೆಸಲಾಗುವುದು. ಈ ಸಲಹೆಗಳನ್ನು ಮಂಡಿಸಲಾಗುವುದು ಮತ್ತು ಅವುಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಜಲಸಂಪನ್ಮೂಲ ಸಚಿವ ಜಯಂತ್ ಪಾಟೀಲ್ ತಿಳಿಸಿದರು. ಜಿÇÉಾ ಮಟ್ಟದಲ್ಲಿ ಪ್ರವಾಹ ಪರಿಸ್ಥಿತಿ ಬಗ್ಗೆ ಕಾಳಜಿ ವಹಿಸಲು ಕ್ರಮ ಕೈಗೊಳ್ಳಲು ಜಿÇÉಾಧಿಕಾರಿ, ಜಲಸಂಪನ್ಮೂಲ ಇಲಾಖೆ ಮತ್ತು ಕಂದಾಯ ಇಲಾಖೆಯ ಸಭೆ ನಡೆಸಲಾಗುವುದು ಎಂದು ಪಾಟೀಲ್ ಹೇಳಿದ್ದಾರೆ.