Advertisement

ಕುಲ್ಗಾಂವ್‌-ಬದ್ಲಾಪುರ ಪುರಸಭೆ ಶಾಲೆಗಳಲ್ಲಿ ಹೊಸದಾಗಿ 336 ವಿದ್ಯಾರ್ಥಿಗಳ ಪ್ರವೇಶ  

01:19 PM Jul 21, 2021 | Team Udayavani |

ಬದ್ಲಾಪುರ: ಒಂದೆಡೆ ಪುರಸಭೆ ಶಾಲೆಗಳ ಗುಣಮಟ್ಟ ಕ್ಷೀಣಿಸುತ್ತಿದ್ದು, ಮರಾಠಿ ಶಾಲೆಗಳನ್ನು ಮುಚ್ಚಲಾಗುತ್ತಿದ್ದರೆ, ಈ ವರ್ಷ ಕುಲ್ಗಾಂವ್‌-ಬದ್ಲಾಪುರ ಪುರಸಭೆಯ ಶಾಲೆಗಳಲ್ಲಿ ಹೊಸದಾಗಿ 336 ವಿದ್ಯಾರ್ಥಿಗಳು ಪ್ರವೇಶ ಪಡೆದಿರುವುದು ವಿಶೇಷತೆಯಾಗಿದೆ.

Advertisement

ಈ ಪೈಕಿ 27 ವಿದ್ಯಾರ್ಥಿಗಳು ಪ್ರತಿಷ್ಠಿತ ಆಂಗ್ಲ ಮಾಧ್ಯಮ ಶಾಲೆಗಳಿಂದ ಬಂದವರಾಗಿದ್ದಾರೆ. ಲಾಕ್‌ಡೌನ್‌ ಆರ್ಥಿಕ ಸಂಕಷ್ಟದಿಂದಾಗಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಹೆಚ್ಚಿದ ಶುಲ್ಕಗಳಿಂದ ವಿದ್ಯಾರ್ಥಿಗಳ ವಜಾ ಮತ್ತು ಆರ್ಥಿಕ ಸಂಕಷ್ಟದ ಕಾರಣದಿಂದಾಗಿ ನಗರದಲ್ಲಿ ಹೆತ್ತವರು ಮಕ್ಕಳನ್ನು ಪುರಸಭೆಯ ಶಾಲೆಗಳಿಗೆ ಪ್ರವೇಶ ಬಯಸುತ್ತಿರು

ವುದು ಕಂಡುಬರುತ್ತಿದೆ. ಪುರಸಭೆ ಆಡಳಿತವು ಆನ್‌ಲೈನ್‌ ಶಿಕ್ಷಣದ ಜತೆಗೆ ಪರ್ಯಾಯ ಅಭ್ಯಾಸ ಪುಸ್ತಕಗಳನ್ನು ವಿತರಿಸುವ ಮೂಲಕ ಕೋರ್ಸ್‌ ಅನ್ನು ಪ್ರಾರಂಭಿಸಿದೆ.

ಮನೆಗೆ ಮನೆಗೆ ಭೇಟಿ ನೀಡಿ ಅಭಿಯಾನ

ಪುರಸಭೆಯ ಶಿಕ್ಷಕರು ಇತ್ತೀಚೆಗೆ ನಗರಾದ್ಯಂತ ವಿದ್ಯಾರ್ಥಿಗಳ ಪ್ರವೇಶಕ್ಕೆ ಅಭಿಯಾನವನ್ನು ಪ್ರಾರಂಭಿಸಿದರು. ಪ್ರತಿಯೊಬ್ಬ ಶಿಕ್ಷಕರನ್ನು ಅವರ ಶಾಲಾವಾರು ತರಗತಿಗೆ ನಿಯೋಜಿಸಲಾಯಿತು. ಅದರಂತೆ ಶಿಕ್ಷಕನು ತನ್ನ ತರಗತಿಯ ಪ್ರತಿಯೊಬ್ಬ ವಿದ್ಯಾರ್ಥಿಯ ಮನೆಗೆ ಭೇಟಿ ನೀಡಬೇಕಾಗಿತ್ತು. ಲಾಕ್‌ಡೌನ್‌ ಬಳಿಕ ಅನೇಕ ಹೆತ್ತವರು ನಗರವನ್ನು ತೊರೆದಿರುವುದರಿಂದ ಕುಲ್ಗಾಂವ್‌-ಬದ್ಲಾಪುರ ನಗರದಲ್ಲಿ ಪುರಸಭೆಯ ಶಾಲೆಯ ಎಷ್ಟು ವಿದ್ಯಾರ್ಥಿಗಳು ವಾಸವಾಗಿ¨ªಾರೆ ಎಂಬುದನ್ನು ಪರಿಶೀಲಿ ಸುವುದು ಅಗತ್ಯವಾಗಿತ್ತು. ನಾಲ್ಕು ವಾರಗಳ ಅಭಿಯಾನದ ಬಳಿಕ ಹೆಚ್ಚಿನ ಸಂಖ್ಯೆಯ ಹೊಸ ವಿದ್ಯಾರ್ಥಿಗಳು ಕಂಡುಬಂದಿದ್ದಾರೆ.

Advertisement

2,000 ಮೀರಿದ ವಿದ್ಯಾರ್ಥಿಗಳ ಸಂಖ್ಯೆ

ಲಾಕ್‌ಡೌನ್‌ ಸಮಯದಲ್ಲಿ ಹುಟ್ಟೂ ರಿಗೆ ಹೋದ ವಿದ್ಯಾರ್ಥಿಗಳನ್ನೂ ಈ ಅವಧಿಯಲ್ಲಿ ಸಂಪರ್ಕಿಸಲಾಗಿದೆ. ಸಮೀಕ್ಷೆ ಯಲ್ಲಿ ಪುರಸಭೆಯ ಶಾಲೆಗಳಿಗೆ ಹೊಸದಾಗಿ 336 ವಿದ್ಯಾರ್ಥಿಗಳನ್ನು ದಾಖಲಿಸಲಾಗಿದೆ. ಪುರಸಭೆಯ ಶಾಲೆಯಲ್ಲಿ ಈ ವರ್ಷ ಆಂಗ್ಲ ಮಾಧ್ಯಮ ಮತ್ತು ಖಾಸಗಿ ಶಾಲೆಗಳ 27 ವಿದ್ಯಾರ್ಥಿಗಳು ಪ್ರವೇಶ ಪಡೆದಿ¨ªಾರೆ. ಇದರಿಂದಾಗಿ ಪುರಸಭೆಯ ಶಾಲೆಗಳಲ್ಲಿನ ವಿದ್ಯಾರ್ಥಿಗಳ ಸಂಖ್ಯೆ 2,000ಕ್ಕಿಂತ ಹೆಚ್ಚಾಗಿದೆ. ಪುರಸಭೆಯ ಶಿಕ್ಷಣ ವಿಭಾಗವು ಈ ವಿದ್ಯಾರ್ಥಿಗಳ ಸಂಖ್ಯೆಯನ್ನು 3,000ಕ್ಕೆ ಹೆಚ್ಚಿಸುವ ಗುರಿ ಹೊಂದಿದೆ.

336 ವಿದ್ಯಾರ್ಥಿಗಳ ಸೇರ್ಪಡೆ

ಒಂದೆಡೆ ಪುರಸಭೆಯ ಶಾಲೆಗಳಲ್ಲಿ ಕಳಪೆ ಸ್ಥಿತಿಯ ಬಗ್ಗೆ ದೂರುಗಳಿದ್ದು, ಮರಾಠಿ ಮಾಧ್ಯಮ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಅನೇಕ ಹೆತ್ತವರು ಆಂಗ್ಲ ಮಾರ್ಧಯಮ ಮತ್ತು ಅರೆ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಪ್ರವೇಶ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಕುಲ್ಗಾಂವ್‌-ಬದ್ಲಾಪುರ ಪುರಸಭೆ ಸಿಬಂದಿ ಮತ್ತು ಶಿಕ್ಷಕರ ಪ್ರಯತ್ನದಿಂದಾಗಿ ಒಂದೇ ವರ್ಷದಲ್ಲಿ 336 ಹೊಸ ವಿದ್ಯಾರ್ಥಿಗಳನ್ನು ಶಾಲೆಯಲ್ಲಿ ದಾಖಲಿಸಲಾಗಿದೆ.

ನವೀಕರಣಗೊಂಡ 16 ಶಾಲೆಗಳು

ಕುಲ್ಗಾಂವ್‌-ಬದ್ಲಾಪುರ ಪುರಸಭೆ ಇತ್ತೀಚೆಗೆ ನಗರದ ಎಲ್ಲ 16 ಶಾಲೆಗಳಿಗೆ ಬಣ್ಣ ಬಳಿದಿದೆ. ಎರಡು ಹೊಸ ಶಾಲಾ ಕಟ್ಟಡಗಳನ್ನು ನಿರ್ಮಿಸಿದೆ. ಮೂರು ವರ್ಷಗಳ ಹಿಂದೆ ಪುರಸಭೆ ಒಂಬತ್ತನೇ ಮತ್ತು ಹತ್ತನೇ ತರಗತಿಗಳನ್ನು ಪ್ರಾರಂಭಿಸಿತು. ಆದ್ದರಿಂದ 1ರಿಂದ 10ನೇ ತರಗತಿಯವರೆಗೆ ಶಿಕ್ಷಣವು ನಗರದಲ್ಲಿ ಉಚಿತವಾಗಿ ಲಭ್ಯವಿದೆ. ಕಾಲಕಾಲಕ್ಕೆ ಪುರಸಭೆಯ ಶಾಲೆಗಳ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದ್ದು, ಇದು ಅವರ ದಕ್ಷತೆಯನ್ನು ಹೆಚ್ಚಿಸಿರುವುದಲ್ಲದೆ, ಅವರು ಹೊಸ ಬೋಧನಾ ವಿಧಾನಗಳನ್ನು ಅಭಿವೃದ್ಧಿಪಡಿಸಿದ್ದಾರೆ ಅಧಿಕಾರಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next