Advertisement

ರಾಜಕಾರಣ ಮಾಡಲು ಬಂದಿಲ್ಲ

05:40 PM Mar 08, 2020 | Suhan S |

ರಾಮನಗರ: ನಾನು ರಾಜಕರಣ ಮಾಡಲು ಬಂದವಳಲ್ಲ. ರಾಜಕರಣ ಮಾಡುವುದಿದ್ದರೆ ವಿಧಾನಸೌಧಲ್ಲಿ ಕುಳಿತುಕೊಳ್ಳಬಹುದಿತ್ತು. ಜನರ ಸಮಸ್ಯೆ ಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಲು ಬಂದಿದ್ದೇನೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದರು.

Advertisement

ತಾಲೂಕಿನ ಕೈಲಾಂಚ ಹೋಬಳಿಯ ವಡ್ಡರಹಳ್ಳಿಯಲ್ಲಿ ಕೈಲಾಂಚ ಗ್ರಾಮ ಪಂಚಯ್ತಿ ಹಮ್ಮಿಕೊಂಡಿದ್ದ ಮಹಿಳಾ ಗ್ರಾಮಸಭೆ ಉದ್ಘಾಟಿಸಿ ಮಾತನಾಡಿದ ಅವರು, ರಾಮನಗರ ಕ್ಷೇತ್ರ ನಮ್ಮ ಕುಟುಂಬಕ್ಕೆ ರಾಜಕೀಯ ಶಕ್ತಿ ತುಂಬಿದೆ. ಹೀಗಾಗಿ ಈ ಕ್ಷೇತ್ರವನ್ನು ಅಭಿವೃದ್ದಿಯತ್ತ ಕೊಂಡೊಯ್ಯಲು ರಾಜಕರಣಕ್ಕೆ ಬಂದಿರುವುದಾಗಿ ತಿಳಿಸಿದರು.

ತಮಗೆ ಬಣ್ಣದ ಮಾತುಗಳನ್ನು ಆಡಲು ಬರುವುದಿಲ್ಲ. ಜನರ ಜೊತೆ ಬೆರೆತು ಅವರ ಸಮಸ್ಯೆಗೆ ಸ್ಪಂದಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿ ಮಾಡುವುದಷ್ಟೆ ತಮ್ಮ ಕರ್ತವ್ಯ ಎಂದರು. ಜನಪ್ರತಿನಿಧಿಗಳಾದವರು ಜನರ ಮಧ್ಯೆ ನಿಂತಾಗ ಸಮಸ್ಯೆಗಳ ಅರಿವಾಗುತ್ತದೆ. ಇದಕ್ಕಾಗಿಯೇ ತಾವು ಜನರೊಂದಿಗೆ ಬೆರೆತು ಸಮಸ್ಯೆಗಳಿಗೆ ಸ್ಪಂದಿಸಿ ಶಕ್ತಿ ಮೀರಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದರು. ಮಹಿಳೆಯರಿಗೆ ಇಂದು ರಾಜಕೀಯ ಪ್ರಾತಿನಿಧ್ಯ ಸಿಗಲು ಎಚ್‌ .ಡಿ.ದೇವೇಗೌಡರು ಕಾರಣ. ಯಾವುದೇ ಕ್ಷೇತ್ರವಿರಲಿ ಮಹಿಳೆಯರಿಗೆ ಕಿರುಕುಳ ಸಾಮಾನ್ಯ. ಅದೆಲ್ಲವನ್ನು ಮೀರಿ ಮುನ್ನಡೆದಾಗ ಮಾತ್ರ ಮಾದರಿ ಮಹಿಳೆಯಾಗಲು ಸಾಧ್ಯ ಎಂದರು.

ವಸತಿ ಸಚಿವರೊಂದಿಗೆ ಚರ್ಚೆ: ಕುಮಾರಸ್ವಾಮಿರವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕ್ಷೇತ್ರಕ್ಕೆ ಮಂಜೂರಾಗಿದ್ದ ಹಲವಾರು ಕಾಮಗಾರಿಗಳಿಗೆ ಅನುದಾನವನ್ನು ತಡೆಹಿಡಿಯಲಾಗಿತ್ತು. ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಅರ್ಧಕ್ಕೆ ಸ್ಥಗಿತಗೊಂಡಿದ್ದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ರಾಮನಗರ ಕ್ಷೇತ್ರಕ್ಕೆ 1,500 ಮನೆಗಳ ಅಗತ್ಯವಿದ್ದು, ವಸತಿ ಸಚಿವ ಸೋಮಣ್ಣ ಅವರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದರು.

ನೀರಿನ ಸಮಸ್ಯೆಗೆ ಒತ್ತು: ರಾಮನಗರ ಕ್ಷೇತ್ರ ವ್ಯಾಪ್ತಿಗೆ ಬರುವ ಕನಕಪುರ ತಾಲೂಕಿನ ಹಾರೋಹಳ್ಳಿ ಮತ್ತು ಮರಳವಾಡಿ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಅದನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ವಡ್ಡರಹಳ್ಳಿಯ ಏತ ನೀರಾವರಿ ಯೋಜನೆಯನ್ನು 10 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು. ನಗರ ಮತ್ತು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಹೆಚ್ಚಿನ ಒತ್ತು ಕೊಟ್ಟಿರುವುದಾಗಿ ತಿಳಿಸಿದರು.

Advertisement

ಕೈಲಾಂಚ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾಂಡುರಂಗ ಮಾತನಾಡಿ, ಕೈಲಾಂಚ ಗ್ರಾಮ ಪಂಚಾಯತಿಯನ್ನು ಕ್ಷೇತ್ರದಲ್ಲಿ ಮಾದರಿಯಾಗಿ ಮಾಡಲು ಶಾಸಕರು ಪಣತೊಟ್ಟಿದ್ದಾರೆ. ಗ್ರಾಮೀಣ ಭಾಗದ ಜನರ ಜೀವನಾಡಿ ಯಾಗಿ ಕುಮಾರಸ್ವಾಮಿ ಕೆಲಸ ಮಾಡಿ ದ್ದಾರೆ. ಗ್ರಾಮ ವಾಸ್ತವ್ಯ ಸೇರಿದಂತೆ ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ಕೊಡುಗೆಯಾಗಿ ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಗ್ರಾಪಂ ಉಪಾಧ್ಯಕ್ಷೆ ಭವ್ಯ ಸುರೇಂದ್ರ, ತಹಸೀಲ್ದಾರ್‌ ನರಸಿಂಹಮೂರ್ತಿ, ತಾಪಂ ಇಒ ಶಿವಕುಮಾರ್‌, ಪಿಡಿಒ ಸತೀಶ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next