Advertisement

7 ಲಕ್ಷ ರೂ.ಚೆಕ್‌ ವಾಪಸ್‌ ಕೊಟ್ಟ ಅನಿತಾ ಕುಟುಂಬ

07:25 AM Sep 05, 2017 | Harsha Rao |

ಚೆನ್ನೈ: ನೀಟ್‌ ಪರೀಕ್ಷೆ ವಿರೋಧಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದ ದಲಿತ ವಿದ್ಯಾರ್ಥಿನಿ ಅನಿತಾ ಆತ್ಮಹತ್ಯೆ ಪ್ರಕರಣ ತಮಿಳುನಾಡಿನಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಸೋಮವಾರವೂ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ, ನೀಟ್‌ ರದ್ದು ಮಾಡುವಂತೆ ಆಗ್ರಹಿಸಿವೆ. ಮತ್ತೂಂದು ಬೆಳವಣಿಗೆಯಲ್ಲಿ, ರಾಜ್ಯ ಸರ್ಕಾರವು ಪರಿಹಾರದ ರೂಪದಲ್ಲಿ ನೀಡಿರುವ 7 ಲಕ್ಷ ರೂ.ಗಳ ಚೆಕ್‌ ಅನ್ನು ಅನಿತಾ ಕುಟುಂಬವು ಸರ್ಕಾರಕ್ಕೇ ವಾಪಸ್‌ ನೀಡಿದೆ.

Advertisement

ಅರಿಯಲೂರು ಜಿಲ್ಲಾಧಿಕಾರಿ ಜಿ.ಲಕ್ಷ್ಮಿ ಪ್ರಿಯಾ ಅವರು ಸೋಮವಾರ ಅನಿತಾ ಮನೆಗೆ ತೆರಳಿ ಅವಳ ಹೆತ್ತವರಿಗೆ ಪರಿಹಾರ ಚೆಕ್‌ ವಿತರಿಸಿದರು. ಆದರೆ, ಅದನ್ನು ಮರಳಿಸಿದ ಅನಿತಾ ಸಹೋದರ ಮಣಿರತ್ನಂ, “ಅನಿತಾ ಸತ್ತಿದ್ದು ನೀಟ್‌ ಪರೀಕ್ಷೆಯಿಂದ ವಿನಾಯ್ತಿ ಬೇಕೆಂದೇ ಹೊರತು, ಸರ್ಕಾರದ ಪರಿಹಾರಕ್ಕಾಗಿ ಅಲ್ಲ,’ ಎಂದು ಆಕ್ರೋಶದಿಂದ ನುಡಿದಿದ್ದಾರೆ. 

ಈ ನಡುವೆ, ಪುದುಚೇರಿಯಲ್ಲಿಯೂ ನೀಟ್‌ ವಿರೋಧಿಸಿ ಸೋಮವಾರ ಹಲವು ವಿದ್ಯಾರ್ಥಿ ಸಂಘಟನೆಗಳು ಪ್ರತಿ ಭಟನೆ ನಡೆಸಿವೆ. ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ, “ನಮ್ಮ ಸಹನೆಯನ್ನು ಪರೀಕ್ಷಿಸಬೇಡಿ’ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next