Advertisement
ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯನ್ನು ಸ್ಥಾಪನೆ ಮಾಡಲಾಗಿದ್ದು, ಅದರ ಪೂರ್ಣ ಪ್ರಮಾಣದ ಆಡಳಿತ ಮಂಡಳಿಯ ಸಭೆ ಇಂದು ವಿಕಾಸಸೌಧದಲ್ಲಿ ನಡೆಯಿತು. ಸಭೆಯಲ್ಲಿ ಮಾತನಾಡಿದ ಸಚಿವರು. 2019 ರಂದು ಮಂಡಳಿ ನೋಂದಣಿಯಾಗಿದ್ದು, ಸದ್ಯ ನಮ್ಮರಾಜ್ಯದಲ್ಲಿ 85.22 ಲಕ್ಷದನ, 29.98 ಲಕ್ಷಎಮ್ಮೆ, 110.91 ಲಕ್ಷ ಕುರಿ, 61.96ಲಕ್ಷ ಮೇಕೆ , 3.26 ಲಕ್ಷ ಹಂದಿ ಮತ್ತು 617 ಲಕ್ಷ ಕೋಳಿಗಳಿವೆ. ಈ ಎಲ್ಲಾ ಜಾನುವಾರುಗಳ ಆರೋಗ್ಯರಕ್ಷಣೆಗಾಗಿ 4214 ಪಶುವೈದ್ಯಕೀಯ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.
Related Articles
Advertisement
– ಪ್ರಾಣಿಗಳಿಗಾಗಿ ಶೆಡ್ಡುಗಳು, ನೀರಿನ ತೊಟ್ಟಿಗಳ ನಿರ್ಮಾಣವನ್ನು ಪ್ರೋತ್ಸಾಹಿಸುವುದು.
– ಪ್ರಾಣಿಗಳನ್ನು ಕರುಣೆಯಿಂದ ನೋಡಿಕೊಳ್ಳಲು ಸಾರ್ವಜನಿಕರಲ್ಲಿಅರಿವು ಮೂಡಿಸುವುದು.
– ಪ್ರಾಣಿಗಳಿಗೆ ಸಾಗಾಣಿಕೆ, ಪ್ರಾಣಿಗಳಿಗೆ ಉಂಟಾಗುವ ಅನವಶ್ಯಕ ನೋವು ಅಥವಾ ಯಾತನೆಯನ್ನು ತಡೆಗಟ್ಟುವ ನಿಟ್ಟಿನಲ್ಲಿಕ್ರಮ ಕೈಗೊಳ್ಳುವುದು.
ಮಂಡಳಿಯ ಮೇಲ್ವಿಚಾರಣೆ ಮತ್ತು ಮಾರ್ಗದರ್ಶನದ ಅಡಿಯಲ್ಲಿ ಈ ಎಲ್ಲ ಕಾರ್ಯಗಳು ನಡೆಯಲಿವೆ.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ಜಿಲ್ಲಾ ಪ್ರಾಣಿದಯಾ ಸಂಘಗಳ ಅಧ್ಯಕ್ಷರಾಗಿದ್ದು, ಪಶುಸಂಗೋಪನೆ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.
ಮಂಡಳಿಗೆ ವಿವಿಧ ಕ್ಷೇತ್ರಗಳ ಅನುಭವಿಗಳನ್ನು ಸದಸ್ಯರನ್ನಾಗಿ ನೇಮಿಸಿದ್ದು, ಸದಸ್ಯರು ತಮ್ಮ ಜವಾಬ್ದಾರಿಯನ್ನು ಅರಿತು, ಪ್ರಾಣಿಗಳ ಯೋಗಕ್ಷೇಮಕ್ಕಾಗಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು, ಪ್ರಾಣಿಗಳಿಗೆ ಯಾರಿಂದಲೂ, ಯಾವುದೇ ರೀತಿಯ ನೋವು, ಯಾತನೆ ಸಂಭವಿಸುವುದನ್ನು ತಡೆಯಬೇಕು ಎಂದು ಸಚಿವರು ಸಲಹೆ ನೀಡಿದರು.
ಸಭೆಯಲ್ಲಿ ಪಶುಸಂಗೋಪನೆ ಇಲಾಖೆಯ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್, ಆಯುಕ್ತರಾದ ನಟೇಶ್, ನಿರ್ದೇಶಕರಾದಎಂ.ಟಿ. ಮಂಜುನಾಥ ಹಾಗೂ ಕರ್ನಾಟಕ ಪ್ರಾಣಿಕಲ್ಯಾಣ ಮಂಡಳಿಯ ಎಲ್ಲ ಸದಸ್ಯರು ಹಾಜರಿದ್ದರು.