Advertisement

ಆಮ್ಲಜನಕವಿಲ್ಲದೇ ಬದುಕೋ ಜೀವಿ! ; ವಿಜ್ಞಾನಿಗಳ ಇದುವರೆಗಿನ ನಂಬಿಕೆಯೇ ತಲೆಕೆಳಗು

09:32 AM Feb 28, 2020 | Hari Prasad |

ಜೆರುಸಲೇಮ್‌: ಇಸ್ರೇಲ್‌ನ ಟೆಲ್‌ಅವಿವ್‌ ವಿಶ್ವವಿದ್ಯಾಲಯದ ವಿಜ್ಞಾನಿಗಳು ಅಪೂರ್ವ ಸಂಶೋಧನೆಯೊಂದನ್ನು ಮಾಡಿದ್ದಾರೆ. ಇದುವರೆಗೆ ಪ್ರಾಣಿಗಳು ಜೀವಂತವಾಗಿರಲು ಆಮ್ಲಜನಕವನ್ನು ಉಸಿರಾಡುವುದು ಅನಿವಾರ್ಯ ಎಂಬ ಸಿದ್ಧಾಂತ ಚಾಲ್ತಿಯಲ್ಲಿದೆ. ಈಗ ಆ ನಂಬಿಕೆಯನ್ನೇ ತಲೆಕೆಳಗು ಮಾಡುವಂತೆ, ಮೀನಿನ ಜಾತಿಗೆ ಸೇರಿದ ಅತಿಸಣ್ಣ, ಬರೀ 10 ಜೀವಕೋಶಗಳುಳ್ಳ ಪರಾಶ್ರಿತ ಜೀವಿಯೊಂದು ಆಮ್ಲಜನಕ ಉಸಿರಾಡದೇ ಬದುಕುತ್ತದೆ ಎಂದು ಗೊತ್ತಾಗಿದೆ. ವಿವಿ ಪ್ರೊಫೆಸರ್‌ ಡೊರೊಥಿ ಹಚನ್‌ ಇದನ್ನು ಬಹಿರಂಗಪಡಿಸಿದ್ದಾರೆ.

Advertisement

ಇದೊಂದು ಪರಾಶ್ರಿತ ಜೀವಿ. ಇದನ್ನು ಹೆನ್ನೆಗುಯ ಸಲ್ಮನಿಕೊಲ ಎಂದು ಹೆಸರಿಸಲಾಗಿದೆ. ಜೆಲ್ಲಿಫಿಶ್‌ (ಅತಿಸಣ್ಣ ಜಾತಿಯ ಮೀನು) ಅಥವಾ ಸಮುದ್ರದಲ್ಲಿರುವ ಕೋರಲ್‌ಗ‌ಳಿಗೆ ಸನಿಹದ ಸಂಬಂಧಿಯಾಗಿದೆ. ಮೀನುಗಳ ಒಳಭಾಗದಲ್ಲಿರುವ ಸಾಲ್ಮನ್‌ ಮಾಂಸಖಂಡಗಳಲ್ಲಿರುತ್ತದೆ.

ಇದು ಬೆಳೆದಂತೆ ಆಮ್ಲಜನಕವನ್ನು ಉಸಿರಾಡುವುದನ್ನೇ ನಿಲ್ಲಿಸುತ್ತದೆ. ಆದರೆ ಇದು ಶಕ್ತಿ ಪಡೆದುಕೊಳ್ಳುವುದಕ್ಕೆ ಯಾವ ಮಾರ್ಗ ಅನುಸರಿಸುತ್ತದೆ ಎಂದು ಗೊತ್ತಾಗಿಲ್ಲ. ಉಸಿರಾಡದೆಯೂ ಬದುಕಬಹುದು ಅಥವಾ ಆಮ್ಲಜನಕದ ಅಗತ್ಯವಿಲ್ಲದೆಯೂ ಜೀವಿಸಲು ಸಾಧ್ಯ ಎಂಬುದನ್ನು ಈ ಸಂಶೋಧನೆ ತೋರಿಸಿಕೊಟ್ಟಿದೆ.

ಶಕ್ತಿಗೆ ಏನು ಮಾಡುತ್ತದೆ?: ಆಮ್ಲಜನಕವನ್ನು ಬಳಸಿಕೊಳ್ಳುವುದೇ ಇಲ್ಲವಾದರೆ ಇದು ಶಕ್ತಿ ಗಳಿಸಲು ಏನು ಮಾಡುತ್ತದೆ? ವಿಜ್ಞಾನಿಗಳ ಊಹೆ ಪ್ರಕಾರ, ತಾನು ಆಶ್ರಯಿಸಿರುವ ಜೀವಿಯ ಜೀವಕೋಶದಿಂದ ಶಕ್ತಿ ಪಡೆಯಬಹುದು ಅಥವಾ ಉಸಿರಾಟ ಪದ್ಧತಿಯೇ ಬೇರೆಯಿರಬಹುದು.

ಆದರೆ ವಿಜ್ಞಾನಿಗಳು ಇದನ್ನು ಪತ್ತೆಹಚ್ಚಿದ್ದು ಮಾತ್ರ ಅಚಾನಕ್ಕಾಗಿ. ಪ್ರಾಣಿಗಳ ಜೀವಕೋಶದಲ್ಲಿ ಮೈಟೊಕಾಂಡ್ರಿಯ ಎಂಬ ಭಾಗವಿರುತ್ತದೆ. ಅದು ಆಮ್ಲಜನಕ ಹಿಡಿದಿಟ್ಟುಕೊಂಡು ಶಕ್ತಿ ಉತ್ಪಾದಿಸುತ್ತದೆ. ಅದೆ ಹೆನೆಗುಯದಲ್ಲಿ ಇಲ್ಲ ಎನ್ನುವುದು ಗೊತ್ತಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next