Advertisement

Animal: ರಣ್ಬೀರ್‌ ಜೊತೆ ಲಿಪ್‌ ಲಾಕ್‌ ಕಿಸ್‌ ಮಾಡಿದ ರಶ್ಮಿಕಾ;‌ ಪೋಸ್ಟರ್‌ ವೈರಲ್

12:18 PM Oct 10, 2023 | Team Udayavani |

ಮುಂಬಯಿ: ಸೂಪರ್‌ ಸ್ಟಾರ್ ರಣ್ಬೀರ್‌ ಕಪೂರ್‌ –  ರಶ್ಮಿಕಾ ಮಂದಣ್ಣ ಅಭಿನಯದ ʼಅನಿಮಲ್‌ʼ ಚಿತ್ರದ ಟೀಸರ್‌ ರಿಲೀಸ್‌ ಆಗಿ ಇತ್ತೀಚೆಗೆ ಸದ್ದು ಮಾಡಿತ್ತು. ಇದೀಗ ಸಿನಿಮಾದ ಕುರಿತು ಮತ್ತೊಂದು ಅಪ್ಡೇಟ್‌ ಹೊರಬಿದ್ದಿದೆ.

Advertisement

ಸಂದೀಪ್‌ ರೆಡ್ಡಿ ವಂಗಾ ನಿರ್ದೇಶನ ʼಅನಿಮಲ್‌ʼ ಸಿನಿಮಾದಲ್ಲಿ ʼರಾಕ್‌ ಸ್ಟಾರ್‌ʼ ರಣ್ಬೀರ್‌ ಕಪೂರ್‌ ವಿಭಿನ್ನ ಲುಕ್‌ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಸೌತ್‌ ಬೆಡಗಿ ರಶ್ಮಿಕಾ ಮಂದಣ್ಣ ಅವರು ʼಗೀತಾಂಜಲಿʼ  ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸಿನಿಮಾದ ಮಾಸ್‌ ಟೀಸರ್‌ ಇತ್ತೀಚೆಗೆ ರಿಲೀಸ್‌ ಆಗಿದೆ. ಇದರಲ್ಲಿ ಸಿರಿವಂತನ ಹುಡುನೊಬ್ಬನ ರಗಡ್‌ ಅವತಾರವನ್ನು ತೋರಿಸಲಾಗಿದೆ. ಇದೀಗ ಸಿನಿಮಾದ ಹಾಡೊಂದು ರಿಲೀಸ್‌ ಆಗುವುದರ ಕುರಿತ ಅಪ್ಡೇಟ್‌ ವೊಂದನ್ನು ಚಿತ್ರತಂಡ ನೀಡಿದೆ.

“ಹುವಾ ಮೈನ್” ಎನ್ನುವ ಮೊದಲ ಹಾಡು ನಾಳೆ ರಿಲೀಸ್‌ (ಅ.11 ರಂದು) ರಿಲೀಸ್‌ ಆಗುವುದಾಗಿ ಪೋಸ್ಟರ್‌ ವೊಂದನ್ನು ರಿಲೀಸ್‌ ಮಾಡಿದೆ. ಈ ಪೋಸ್ಟರ್‌ ನಲ್ಲಿ ಹೆಲಿಕಾಪ್ಟರ್‌ ಯೊಳಗೆ ಕೂತಿರುವ ರಶ್ಮಿಕಾ ಹಾಗೂ ರಣ್ಬೀರ್‌ ಲಿಪ್‌ ಲಾಕ್‌ ಮಾಡಿಕೊಂಡಿರುವುದನ್ನು ಕಾಣಬಹುದು. ಸದ್ಯ ಅಭಿಮಾನಿಗಳ ವಲಯದಲ್ಲಿ ಈ ಪೋಸ್ಟರ್‌ ವೈರಲ್‌ ಆಗಿದೆ.

ಹಿಂದಿಯಲ್ಲಿ ‘ಹುವಾ ಮೈನ್’, ತೆಲುಗಿನಲ್ಲಿ ‘ಅಮ್ಮಾಯಿ’, ತಮಿಳಿನಲ್ಲಿ ‘ನೀ ವಾಡಿ’, ಮಲಯಾಳಂನಲ್ಲಿ ‘ಪೆನ್ನಾಲೆ’ ಮತ್ತು ಕನ್ನಡದಲ್ಲಿ ‘ಓ ಬಾಲೆ’ ಎನ್ನುವ ಟೈಟಲ್‌ ನ್ನು ಹಾಡಿಗೆ ಇಡಲಾಗಿದೆ.

Advertisement

ರಣ್ಬೀರ್‌ ಕಪೂರ್‌  ಅವರೊಂದಿಗೆ ಬಾಬಿ ಡಿಯೋಲ್, ಅನಿಲ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ʼಅನಿಮಲ್‌ʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೇ ಡಿಸೆಂಬರ್‌ 1 ರಂದು ಪ್ಯಾನ್‌ ಇಂಡಿಯಾ ಭಾಷೆಯಲ್ಲಿ ಸಿನಿಮಾ ರಿಲೀಸ್‌ ಆಗಲಿದೆ.

View this post on Instagram

 

A post shared by anilskapoor (@anilskapoor)

Advertisement

Udayavani is now on Telegram. Click here to join our channel and stay updated with the latest news.

Next