Advertisement

‘ಪ್ರಾಣಿ-ಪಕ್ಷಿಗಳಿಗೂ ಇದೆ ಬದುಕುವ ಹಕ್ಕು’

04:49 PM Apr 02, 2018 | |

ಪುಂಜಾಲಕಟ್ಟೆ: ಪ್ರಕೃತಿದತ್ತ ಸಂಪತ್ತಿನಿಂದ ಕೂಡಿರುವ ಈ ದೇಶದಲ್ಲಿ ಜನರ ಅತಿಯಾಸೆ ಮತ್ತು ಸ್ವಾರ್ಥ ಮನೋಭಾವದಿಂದ ಪರಿಸರ ಸಂರಕ್ಷಣೆಗೆ ಧಕ್ಕೆಯಾಗುತ್ತಿದೆ. ಇದರಿಂದಾಗಿ ನಿಸರ್ಗದಲ್ಲಿ ಮನುಷ್ಯರಂತೆ ಸ್ವತ್ಛಂದವಾಗಿ ಬದುಕುವ ಹಕ್ಕು ಇದ್ದರೂ ಅದೆಷ್ಟೋ ಪ್ರಾಣಿ ಪಕ್ಷಿಗಳು ವಲಸೆ ಹೋಗುವುದನ್ನು ತಪ್ಪಿಸುವ ಮಹತ್ತರ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಪರಿಸರ ಪ್ರೇಮಿ ನಿತ್ಯಾನಂದ ಶೆಟ್ಟಿ ಬೈದ್ಯಾರು ಹೇಳಿದರು.

Advertisement

ಬಂಟ್ವಾಳ ತಾಲೂಕಿನ ರಾಯಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ‘ಗುಬ್ಬಚ್ಚಿ ಗೂಡು’ ಅಳಿವಿನಂಚಿನಲ್ಲಿರುವ ಪಕ್ಷಿ ಸಂಕುಲ ಉಳಿವಿಗೆ, ಸಸ್ಯರಾಶಿ ಗಳ ಮಹತ್ವ ಬಗ್ಗೆ ಜಾಗೃತಿ ಕಾರ್ಯಾ ಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು. ನಿವೃತ್ತ ಶಿಕ್ಷಕ ಸೋಮಪ್ಪ ಮಡಿವಾಳ ಶುಭ ಹಾರೈಸಿದರು. ರಾಯಿ ಗ್ರಾ.ಪಂ. ಮತ್ತು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಿ. ದಯಾನಂದ ಸಪಲ್ಯ, ಸದಸ್ಯ ಪದ್ಮನಾಭ ಗೌಡ, ಎಲ್ ಐಸಿ ಅಭಿವೃದ್ಧಿ ಅಧಿಕಾರಿ ಮಧ್ವರಾಜ್‌ ಕಲ್ಮಾಡಿ ಮತ್ತಿತರರು ಉಪಸ್ಥಿತರಿದ್ದರು.

ಸಹಾಯಕಿ ರಮ್ಯಾ ಪ್ರಸ್ತಾವಿಸಿ, ಮನೆಯಲ್ಲಿ ಅನಗತ್ಯವಾಗಿ ಚೆಲ್ಲುವ ಆಹಾರ ಮತ್ತು ನೀರನ್ನು ಪಕ್ಷಿಗಳಿಗಾಗಿ ವಿನಿಯೋಗಿಸುವಂತೆ ಅವರು ಸಲಹೆ ನೀಡಿದರು. ಮುಖ್ಯ ಶಿಕ್ಷಕ ಜಯರಾಮ ಪಡ್ರೆ ಸ್ವಾಗತಿಸಿದರು. ಶಿಕ್ಷಕ ವಸಂತ ವಂದಿಸಿದರು.

ಜನ ಜಾಗೃತಿ, ಸಲಕರಣೆ ವಿತರಣೆ
ತಾಲೂಕಿನ ಸ್ಥಳೀಯ ಶಾಲೆಗಳಿಗೆ ತೆರಳಿ ಗುಬ್ಬಚ್ಚಿ ಮತ್ತು ಪತಂಗ ಸಹಿತ ಅವುಗಳ ಉಳಿವಿನ ಬಗ್ಗೆ ಜನ ಜಾಗೃತಿ ಮೂಡಿಸುವುದರ ಜತೆಗೆ ಅವುಗಳಿಗೆ ಆಹಾರ ಮತ್ತು ನೀರುಣಿಸಲು ಉಚಿತವಾಗಿ ಮಣ್ಣಿನ ಗೂಡು ಮತ್ತಿತರ ಸಲಕರಣೆ ವಿತರಿಸಲಾಗುತ್ತಿದೆ.
ನಿತ್ಯಾನಂದ ಶೆಟ್ಟಿ ಬೈದ್ಯಾರು,
   ಪರಿಸರ ಪ್ರೇಮಿ

Advertisement

Udayavani is now on Telegram. Click here to join our channel and stay updated with the latest news.

Next