ಮೂಡುಬಿದಿರೆ: “ಅಷ್ಟಾವ ಧಾನ ಮತ್ತು ಅನ್ನದಾನದಿಂದ ಶ್ರೀ ದೇವಿಗೆ ಸಂತೃಪ್ತಿ; ನಡೆಸಿಕೊಡುವವ ರಿಗೆ ಪುಣ್ಯಫಲಪ್ರಾಪ್ತಿ. ಶ್ರೀ ದೇವಿಯ ಸನ್ನಿಧಿಯಲ್ಲಿ ಅಷ್ಟಾವಧಾನಕ್ಕಾಗಿ ಸಭಾಂಗಣ, ಅನ್ನದಾನಕ್ಕಾಗಿ ಅನ್ನಛತ್ರ ನಿರ್ಮಾಣ ನಿಜಕ್ಕೂ ಔಚಿತ್ಯಪೂರ್ಣ, ಪುಣ್ಯಪ್ರದ’ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಶ್ರೀ ಕ್ಷೇತ್ರ ಇರುವೈಲು ಶ್ರೀ ದುರ್ಗಾಪರಮೇಶ್ವರೀ ಸನ್ನಿಧಿಯಲ್ಲಿ ನೂತನ ವಾಗಿ ನಿರ್ಮಿಸಲಾಗಿರುವ ಶ್ರೀ ದುರ್ಗಾಪರಮೇಶ್ವರೀ ಸಭಾಭವನ ಮತ್ತು ಅನ್ನಛತ್ರದ ಉದ್ಘಾಟನ ಸಮಾ ರಂಭದಲ್ಲಿ ಅವರು ಮಾತನಾಡಿದರು.
ಶತಾಯುಷಿ ಮಿಜಾರುಗುತ್ತು ಆನಂದ ಆಳ್ವ ಅವರು ಸಭಾಂಗಣವನ್ನು ಉದ್ಘಾಟಿಸಿದರು. “ಇರುವೈಲು ಕ್ಷೇತ್ರವು ಶ್ರೀ ದೇವಿಯ ಕಾರಣಿಕದ ತಾಣ ವಾಗಿದೆ. ಕ್ಷೇತ್ರದ ಭಕ್ತ ದಿ| ಚಂದು ಪೂಜಾರಿ ಅವರು ತಮ್ಮ ಹೆಸರಲ್ಲಿದ್ದ 7 ಎಕ್ರೆ ಭೂಮಿಯನ್ನು ದೇವಿಗೊಪ್ಪಿಸಿ, ಅದರ ಆರ್ಥಿಕ ಆಧಾರ ದಿಂದ ಅವರ ಕುಟುಂಬಸ್ಥರು ಈ ಸಭಾಭವನ ಮತ್ತು ಅನ್ನಛತ್ರವನ್ನು ನಿರ್ಮಿಸಿ ಒಪ್ಪಿಸಿದ್ದು ಚಂದು ಪೂಜಾರಿ ಅವರ ಹೆಸರು ಅಜರಾಮರವಾಗಿ ಉಳಿಯು ವಂತಾಗಿದೆ’ ಎಂದು ಹೇಳಿದರು.
ಮಾಜಿ ಸಚಿವ ಕೆ. ಅಭಯಚಂದ್ರ ಅವರು ಅನ್ನಛತ್ರವನ್ನು ಉದ್ಘಾಟಿಸಿ ದರು. ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಸಭಾ ಕಾರ್ಯಕ್ರಮ ಉದ್ಘಾಟಿಸಿ, “ಭಕ್ತಿ ಮತ್ತು ಒಗ್ಗಟ್ಟಿದ್ದಾಗ ಕ್ಷೇತ್ರ ಬೆಳಗುವುದು ಎಂಬುದಕ್ಕೆ ಈ ದೇವಸ್ಥಾನ ಸಾಕ್ಷಿ; ಮುಂದಿನ ಎಪ್ರಿಲ್‌ನಲ್ಲಿ ನಡೆಯಲಿರುವ ಬ್ರಹ್ಮಕಲಶಾಭಿ ಷೇಕದ ಯಶಸ್ಸಿಗೂ ಭಕ್ತಾದಿಗಳು ಸಹಕಾರ ನೀಡಬೇಕು’ ಎಂದು ವಿನಂತಿಸಿದರು.
ರಾಜ್ಯಧಾರ್ಮಿಕ ಪರಿಷತ್‌ನ ಸದಸ್ಯ ಪದ್ಮನಾಭ ಕೋಟ್ಯಾನ್, ಡಾ| ಐ. ಶ್ರೀನಿವಾಸ ಆಸ್ರಣ್ಣ, ಕಿನ್ನಿಗೋಳಿ, ನ್ಯಾಯವಾದಿ ಶರತ್ ಶೆಟ್ಟಿ ಡಿ., ಜಯಶ್ರೀ ಅಮರನಾಥ ಶೆಟ್ಟಿ, ವಿಜಯ್ ಬೆಳುವಾಯಿ ಉಪಸ್ಥಿತರಿದ್ದರು. ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪೂವಪ್ಪ ಸಾಲಿಯಾನ್ ಸ್ವಾಗತಿಸಿದರು. ಗೌರವಾಧ್ಯಕ್ಷ ಭುಜಂಗ ಆರ್. ಶೆಟ್ಟಿ ದೊಡ್ಡಗುತ್ತು ಪ್ರಸ್ತಾವನೆಗೈದರು. ಸದಸ್ಯೆ ಸುಜಾತಾ ಜೆ. ಶೆಟ್ಟಿ ವಂದಿಸಿದರು.ನಿತೇಶ್ ಕುಮಾರ್ ಮಾರ್ನಾಡ್, ಪ್ರಸಾದ್ ಕೆ. ಶೆಟ್ಟಿ ಇರುವೈಲು ನಿರೂಪಿಸಿದರು.
ಸಮ್ಮಾನ
ಶತಾಯುಷಿ ಮಿಜಾರುಗುತ್ತು ಆನಂದ ಆಳ್ವ, ದಾನಿ, ದಿ| ಚಂದು ಪೂಜಾರಿ ಅವರ ಸಹೋದರ ಕಾಂತಪ್ಪ ಪೂಜಾರಿ, ಸಂಕುಮಜಲು, ನೂಯಿ ಇರುವೈಲು, ಬೆಂಗಳೂರಿನ ಉದ್ಯಮಿ ಡಾ| ಐ. ಶ್ರೀನಿವಾಸ ಆಸ್ರಣ್ಣ ಕಿನ್ನಿಗೋಳಿ, ಗುತ್ತಿಗೆದಾರ ಮಂಗಳೂರು ದಿವಾಕರ ಕನ್‌ಸ್ಟ್ರಕ್ಷನ್‌ನ ದಿವಾಕರ ಪೂಜಾರಿ, ಗುರುಪುರ ಕಾರಮೊಗರು ರೂಫಿಂಗ್‌ನಮನೋಜ್ ಶೆಟ್ಟಿ, ಒಟ್ಟು ಯೋಜನೆ ಯಲ್ಲಿ ಮುಖ್ಯಪಾತ್ರ ವಹಿಸಿರುವ ಸತೀಶ್ಚಂದ್ರ ಸಾಲ್ಯಾನ್ ಪಾಣಿಲ ಅವರನ್ನು ಸಮ್ಮಾನಿಸಲಾಯಿತು. ಕಾಮಗಾರಿಯ ಮೇಲ್ವಿಚಾರಕ ಭವಾನಿಶಂಕರ ಅವರನ್ನು ಗೌರವಿಸ ಲಾಯಿತು.