ಬೆಂಗಳೂರು : ಸಂವಿಧಾನಕ್ಕೆ ಅಪಚಾರ ಮಾಡಿರುವ ಅನಿಲ್ ಲಾಡ್ ಅವರನ್ನುಬಂಧಿಸಬೇಕು, ಅವರ ವಿರುದ್ಧ ಕಾಂಗ್ರೆಸ್ ಕ್ರಮ ಕೈಗೊಳ್ಳಲಿ ಎಂದು ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಚಲವಾದಿ ನಾರಾಯಣ ಸ್ವಾಮಿ ಆಗ್ರಹಿಸಿದ್ದಾರೆ.
ಸೋಮವಾರ ಬಿಜೆಪಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಟಿ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿ,ಸಂವಿಧಾನ ರಚಿಸಿದ್ದು ಇಂದಿರಾಗಾಂಧಿ, ರಾಹುಲ್ ಗಾಂಧಿ ಅಂತ ಹೇಳಿದ್ದ ಕಾಂಗ್ರೆಸ್ ಮುಖಂಡ ಅನಿಲ್ ಲಾಡ್ ಅವರ ವೈರಲ್ ವಿಡಿಯೋ ವಿಚಾರಕ್ಕೆ ಪ್ರತಿಕ್ರಿಯಿಸಿ, ಅನಿಲ್ ಲಾಡ್ ಸುಳ್ಳು ಹೇಳಿದ್ದಾರೆ, ಸಂವಿಧಾನಕ್ಕೆ ಅಪಚಾರ ಮಾಡಿದ್ದಾರೆ,ಅವರ ವಿರುದ್ಧ ಕಾಂಗ್ರೆಸ್ ಕ್ರಮ ಕೈಗೊಳ್ಳಲಿ. ಅನಿಲ್ ಲಾಡ್ ರನ್ನು ಬಂಧಿಸಬೇಕು ಎಂದು ಚಲವಾದಿ ನಾರಾಯಣ ಸ್ವಾಮಿ ಆಗ್ರಹಿಸಿದರು.
ಸಂವಿಧಾನದ ಬಗ್ಗೆ ಸಂಸತ್ ನಲ್ಲಿ, ವಿಶೇಷ ಚರ್ಚೆಗಳನ್ನು ಪ್ರಾರಂಭಿಸಿದ್ದೇ ಮೋದಿಯವರು. ನನ್ನಂಥವನು ಪ್ರಧಾನಿಯಾಗಿದ್ದೂ ಸಂವಿಧಾನ ಕೊಟ್ಟ ಅವಕಾಶದಿಂದ ಅಂದವರು ಮೋದಿ. ಈ ರೀತಿಯ ಒಂದು ಮಾತನ್ನೂ ಕಾಂಗ್ರೆಸ್ ನವರು ಹೇಳಿಲ್ಲ. ಅಂಬೇಡ್ಕರ್ ವಿರೋಧಿ ಯಾರು ಹಾಗಿದ್ದರೆ ಎಂದು ಚಲವಾದಿ ನಾರಾಯಣ ಸ್ವಾಮಿ ಪ್ರಶ್ನಿಸಿದರು.
ನವೆಂಬರ್ 26 ರಂದು ಸಂಸತ್ ನ ಸೆಂಟ್ರಲ್ ಹಾಲ್ ನಲ್ಲಿ ಪ್ರಧಾನಿ ಮೋದಿಯವರು ಸಂವಿಧಾನ ದಿನ ಆಚರಿಸಲು ಕರೆದಿದ್ದಸಭೆಯನ್ನು 16 ವಿಪಕ್ಷಗಳು ಬಹಿಷ್ಕರಿಸಿದ್ದವು, ಹೀಗಿದ್ದರೂ ಕಾಂಗ್ರೆಸ್ ಬಿಜೆಪಿಗೆ ಸಂವಿಧಾನ ವಿರೋಧಿ ಪಕ್ಷ ಅನ್ನುತ್ತಿದೆ ಎಂದು ನಾರಾಯಣ ಸ್ವಾಮಿ ಕಿಡಿಕಾರಿದ್ದಾರೆ.
ಇದನ್ನೂ ಓದಿ :ನಲಪಾಡ್ ಹೆಸರು ಬಹಿರಂಗವಾದ ಬಳಿಕ ಕಾಂಗ್ರೆಸ್ ಮೌನ : ಅಶ್ವಥ್ ನಾರಾಯಣ
ಅಂಬೇಡ್ಕರ್ ಚುನಾವಣೆಗೆ ಸ್ಪರ್ಧೆಗೆ ಕಾಂಗ್ರೆಸ್ ಅಡ್ಡಿ ಹಾಕಿತ್ತು. ಅವರ ಸಹಾಯಕನಿಗೆ ಚುನಾವಣೆಯಲ್ಲಿ ನಿಲ್ಲಲು ಕಾಂಗ್ರೆಸ್ ಅವಕಾಶ ನೀಡಿತು. ವಿ.ಪಿ. ಸಿಂಗ್ ಸರ್ಕಾರ ಬರೋವರೆಗೂ ಅಂಬೇಡ್ಕರ್ ಗೆ ಭಾರತ ರತ್ನ ಸಿಕ್ಕಿರಲಿಲ್ಲ.