Advertisement

ಪಂಜಾಬ್ ಕಿಂಗ್ಸ್ ಕೋಚ್ ಹುದ್ದೆಯಿಂದ ಅನಿಲ್ ಕುಂಬ್ಳೆ ಬದಲಾವಣೆ ಸಾಧ್ಯತೆ

02:13 PM Aug 19, 2022 | Team Udayavani |

ಮೊಹಾಲಿ: ಐಪಿಎಲ್ – 2023 ಸೀಸನ್‌ಗೆ ಮೊದಲು ಪಂಜಾಬ್ ಕಿಂಗ್ಸ್ ಕೋಚ್ ಅನಿಲ್ ಕುಂಬ್ಳೆ ಅವರನ್ನು ಫ್ರಾಂಚೈಸಿ ಬದಲಾಯಿಸಬಹುದು ಎಂದು ವರದಿಯೊಂದು ಹೇಳಿದೆ.

Advertisement

2020ರ ಋತುವಿನ ಆರಂಭದಲ್ಲಿ ಪಂಜಾಬ್ ಕಿಂಗ್ಸ್ ತಂಡದ ಕೋಚ್ ಆಗಿ ಕುಂಬ್ಳೆ ನೇಮಕಗೊಂಡಿದ್ದರು. ಅವರು 42 ಪಂದ್ಯಗಳಿಗೆ ತಂಡದ ಕೋಚ್ ಆಗಿದ್ದು ಅದರಲ್ಲಿ ಕೇವಲ 19 ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಗಿದೆ. 2020 ಮತ್ತು 2021 ರಲ್ಲಿ ಕೆ.ಎಲ್. ರಾಹುಲ್ ತಂಡವನ್ನು ಮುನ್ನೆಡೆಸಿದ್ದು,2022 ರಲ್ಲಿ ಮಯಾಂಕ್ ಅಗರ್ವಾಲ್ ನಾಯಕನಾಗಿ ಆಯ್ಕೆಯಾಗಿದ್ದರು.

ಈ ಸೆಪ್ಟೆಂಬರ್‌ನಲ್ಲಿ ಕೊನೆಗೊಳ್ಳುವ ಅನಿಲ್ ಕುಂಬ್ಳೆ ಅವರ ಮೂರು ವರ್ಷಗಳ ಒಪ್ಪಂದವನ್ನು ನವೀಕರಿಸದಿರಲು ಪಂಜಾಬ್ ಕಿಂಗ್ಸ್ ತಂಡವು ಸ್ಪಷ್ಟವಾಗಿ ನಿರ್ಧರಿಸಿದೆ. ಈಗಾಗಲೇ ಹೊಸ ಕೋಚ್ ಹುಡುಕಾಟದಲ್ಲಿರುವ ತಂಡ ಇಯಾನ್ ಮಾರ್ಗನ್, ಟ್ರೆವರ್ ಬೇಲಿಸ್ ಮತ್ತು ಒಬ್ಬ ಮಾಜಿ ಭಾರತದ ಕೋಚ್ ಅವರನ್ನು ಸಂಪರ್ಕಿಸಿದ್ದಾರೆ ಎಂದು ತಿಳಿದುಬಂದಿದೆ. ಅಂತಿಮವಾಗಿ ಅವರಲ್ಲಿ ಒಬ್ಬರು ಆಯ್ಕೆಯಾಗಬಹುದು ಎಂದು ಪಂಜಾಬ್ ಕಿಂಗ್ಸ್ ಅಧಿಕಾರಿಯೊಬ್ಬರು ಅವರು ಒಂದು ವಾರದ ಸಮಯದಲ್ಲಿ ನಿರ್ಧರಿಸುತ್ತಾರೆ ಎಂದು ಕ್ರಿಕ್‌ಬಜ್ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next