Advertisement

ಐಸಿಸಿ ತಾಂತ್ರಿಕ ಸಮಿತಿಗೆ ಕುಂಬ್ಳೆ ಮತ್ತೂಮ್ಮೆ  ಮುಖ್ಯಸ್ಥ

03:46 AM Mar 04, 2019 | |

ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್‌ ತಾಂತ್ರಿಕ ಸಮಿತಿಗೆ ಮುಖ್ಯಸ್ಥರಾಗಿ ಮಾಜಿ ಕ್ರಿಕೆಟಿಗ, ಸ್ಪಿನ್‌ ದಂತಕಥೆ ಅನಿಲ್‌ ಕುಂಬ್ಳೆ ಸತತ 3ನೇ ಬಾರಿಗೆ ಆಯ್ಕೆಯಾಗಿದ್ದಾರೆ. 2012ರಲ್ಲಿ ಅನಿಲ್‌ ಕುಂಬ್ಳೆ ಮೊದಲ ಬಾರಿಗೆ ಐಸಿಸಿ ತಾಂತ್ರಿಕ ಸಮಿತಿಗೆ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದರು.

Advertisement

ಇದಾದ ಬಳಿಕ 2016ರಲ್ಲಿ ಮತ್ತೂಂದು ಬಾರಿಗೆ ಐಸಿಸಿ ತಾಂತ್ರಿಕ ಸಮಿತಿಗೆ ಮುಖ್ಯಸ್ಥರಾಗಿ ಪುನರಾಯ್ಕೆಯಾಗಿದ್ದರು. ಕ್ರಿಕೆಟ್‌ನಲ್ಲಿ ಹಲವಾರು ಹೊಸ ಬದಲಾವಣೆಗಳನ್ನು ತಂದು ಹೊಸತನದ ಸ್ಪರ್ಶವನ್ನು ನೀಡುವಲ್ಲಿ ಕುಂಬ್ಳೆ ನೀಡಿದ ಕೊಡುಗೆ ಅಪಾರ. ಹೀಗಾಗಿಯೇ ಮೂರನೇ ಬಾರಿಗೆ ಅವರನ್ನು ದುಬೈನಲ್ಲಿ ನಡೆದ ಐಸಿಸಿ ಸಭೆಯಲ್ಲಿ ಮುಖ್ಯಸ್ಥರನ್ನಾಗಿ ಮುಂದುವರಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು.

ಮೂರು ಸಲಕ್ಕಿಂತ ಹೆಚ್ಚು ಐಸಿಸಿ ತಾಂತ್ರಿಕ ಸಮಿತಿಗೆ ಮುಖ್ಯಸ್ಥರಾಗಿ ಒಬ್ಬ ವ್ಯಕ್ತಿ ಮುಂದುವರಿಯುವಂತಿಲ್ಲ. ಕುಂಬ್ಳೆ ಅಧಿಕಾರವಧಿ 2021ಕ್ಕೆ ಅಂತ್ಯವಾಗಲಿದೆ. ಬಳಿಕ ಐಸಿಸಿ ತಾಂತ್ರಿಕ ಸಮಿತಿಗೆ ಹೊಸ ಮುಖ್ಯಸ್ಥರ ಆಯ್ಕೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next