Advertisement

100 ಕೋಟಿ ಲಂಚ ಆರೋಪ : ಗೃಹ ಮಂತ್ರಿ ಸ್ಥಾನದಿಂದ ಅನಿಲ್ ದೇಶ್ ಮುಖ್ ಔಟ್..?  

12:23 PM Mar 21, 2021 | Team Udayavani |

ನವ ದೆಹಲಿ  : ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್ ಮುಖ್ ಅವರ ಮೇಲಿರುವ ಗಂಬೀರ ಭ್ರಷ್ಟಾಚಾರದ ಕಾರಣದಿಂದಾಗಿ ಹೊರ ಹೋಗಬೇಕಾಗಬಹುದು ಎಂದು ಮಹಾರಾಷ್ಟ್ರ ವಿಕಾಸ್ ಅಘಾಡಿ ಮೈತ್ರಿ ಪಕ್ಷದ ಪ್ರಮುಖ ನಾಯಕರು ಅಭಿಪ್ರಾಯ ಪಟ್ಟಿದ್ದಾರೆ ಎಂಬ ವರದಿಯಾಗಿದೆ.

Advertisement

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೂಡ ಇದೇ ಅಭಿಪ್ರಾಯವನ್ನು ಹೊಂದಿದ್ದು, ಇಂದು(ಆದಿತ್ಯವಾರ, ಮಾ.21) ಸಂಜೆ ಶಿವಸೇನಾ ನಾಯಕರೊಂದಿಗೆ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ನಾಯಕ ಶರದ್ ಪವಾರ್ ಅವರೊಂದಿಗೆ ಸಭೆ ನಡೆಸಲಾಗುವುದು ಎಂದು ನಾಯಕರು ಹೇಳಿದ್ದಾರೆ.

ಓದಿ :  ನನಗಾಗ 35, ನಾನು ಮಕ್ಕಳನ್ನು ಬಯಸುತ್ತಿದ್ದೆ, ಆತ ಇನ್ನೂ 20ರ ಹರೆಯದಲ್ಲಿದ್ದ : ಪ್ರಿಯಾಂಕ

ಮುಂಬೈನ ಖಾಸಗಿ ಹೋಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಸಂಸದ ಮೋಹನ್ ದೇಲ್ಕರ್ ಸಾವಿಗೂ ಮಹಾರಾಷ್ಟ್ರ ಗೃಹ ಮಂತ್ರಿ ಅನಿಲ್ ದೇಶ್ ಮುಖ್ ಅವರ ಹೆಸರು ಥಳುಕು ಹಾಕಿಕೊಂಡಿದ್ದಲ್ಲದೇ, ಮುಕೇಶ್ ಅಂಬಾನಿ ಮನೆ ಮುಂದೆ ಸ್ಪೋಟಕ ಹೊತ್ತಿದ್ದ ಕಾರು ಪತ್ತೆ ಪ್ರಕರಣ ರೋಚಕ ತಿರುವ ಪಡೆದಿತ್ತು, ಸಸ್ಪೆಂಡ್ ಆಗಿರುವ ಎಎಸ್ಐ ಸಚಿನ್ ವಾಜೆ ಬಳಿ ಮಹಾರಾಷ್ಟ್ರ ಗೃಹ ಮಂತ್ರಿ ಅನಿಲ್ ದೇಶ್ ಮುಖ್, ಬಾರ್ ಹಾಗೂ ರೆಸ್ಟೋರೆಂಟ್ ಗಳಿಂದ ಪ್ರತಿ ತಿಂಗಳು 100 ಕೋಟಿ ಹಣ ವಸೂಲಿ ಮಾಡುವಂತೆ ಒತ್ತಡ ಹೇರಿದ್ದರು ಎಂದು ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಬರೆದ ಪತ್ರದಲ್ಲಿ ಆರೋಪಿಸಿದ್ದರು. ಈ ಗಂಭೀರ ಆರೋಪದಿಂದ ಮಹಾರಾಷ್ಟ್ರ ಶಿವಸೇನೆ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಮೈತ್ರಿಕೂಟದ ಸರ್ಕಾರಕ್ಕೆ ಭಾರಿ ಮುಖಭಂಗವಾಗಿತ್ತು.

ಸದ್ಯ, ಭ್ರಷ್ಟಾಚಾರದ ಆರೋಪ ಮಾಡಿದ್ದಕ್ಕಾಗಿ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಗೃಹ ಮಂತ್ರಿ ಅನಿಲ್ ದೇಶ್ ಮುಖ್ ಹೇಳಿ, ಆರೋಪವನ್ನು ನಿರಾಕರಿಸಿದ್ದಾರೆ.

Advertisement

ಇನ್ನೊಂದೆಡೆ, ಮಹಾರಾಷ್ಟ್ರದ ವಿರೋಧ ಪಕ್ಷ ಬಿಜೆಪಿ ದೇಶ್ ಮುಖ್ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಒತ್ತಾಯ ಮಾಡಿದೆ. ಗೃಹ ಮಂತ್ರಿ ರಾಜಿನಾಮೆ ನೀಡಬೇಕು, ಅವರು ರಾಜಿನಾಮೆ ಕೊಡುವುದಿಲ್ಲವೆಂದಾದಲ್ಲಿ ಮುಖ್ಯಮಂತ್ರಿ ರಾಜಿನಾಮೆ ಕೊಡಿಸಬೇಕು ಎಂದು ಬಿಜೆಪಿ ನಾಯಕ ದೇವೆಂದ್ರ ಫಡ್ನವಿಸ್ ಹೇಳಿದ್ದಾರೆ. ನಿಷ್ಪಕ್ಷಪಾತವಾಗಿ ತನಿಖೆಗೆ ನಡೆಯಬೇಕು ಎಂದು ಹೇಳಿದ್ದೇವೆ. ಈ ಬಗ್ಗೆ ಮುಖ್ಯಮಂತ್ರಿಯವರಿಗೆ ಪತ್ರದ ಮೂಲಕ ಮೊದಲೇ ತಿಳಿಸಿದ್ದೇವೆ. ಠಾಕ್ರೆ ಯಾಕೆ ಈ ಬಗ್ಗೆ ಚರ್ಚಿಸುತ್ತಿಲ್ಲ ಎಂದು ಫಡ್ನವಿಸ್ ಪ್ರಶ್ನೆ ಮಾಡಿದ್ದಾರೆ.

ಓದಿ :  75 ಮಿಲಿಯನ್ ಭಾರತೀಯರು ಬಡತನ ರೇಖೆಯಿಂದ ಕೆಳಕ್ಕೆ : ಪ್ಯೂ ವರದಿ

Advertisement

Udayavani is now on Telegram. Click here to join our channel and stay updated with the latest news.

Next