Advertisement

ನೆಟ್ ವರ್ಕ್ ಗಾಗಿ ಮರಹತ್ತಿದ ಅಂತಾರಾಷ್ಟ್ರೀಯ ಅಂಪೈರ್‌! ಅಷ್ಟಕ್ಕೂ ಆಗಿದ್ದೇನು?

01:26 PM Apr 11, 2020 | keerthan |

ನವದೆಹಲಿ: ತಂತ್ರಜ್ಞಾನ ನೀಡಿದ ಸೌಲಭ್ಯಕ್ಕೆ ಇಡೀ ವಿಶ್ವ ವಶವಾಗಿದೆ. ಅದಿಲ್ಲದೇ ಬದುಕುವುದು ಜನರಿಗೆ ಈಗ ಬಹಳ ಕಷ್ಟ. ಅಂತಹದೊಂದು ಕಷ್ಟಕ್ಕೆ ಒಳಗಾಗಿರುವುದು ಭಾರತದ ಕ್ರಿಕೆಟ್‌ ಅಂಪೈರ್‌ ಅನಿಲ್‌ ಚೌಧರಿ.

Advertisement

ಅವರ ತಾಪತ್ರಯವೇನು ಗೊತ್ತಾ? ಅವರಿಗೆ ಕರೆ ಮಾಡಲು ನೆಟ್‌ವರ್ಕ್‌ ಸಿಗದೇ ಪರದಾಡುತ್ತಿದ್ದಾರೆ. ಅದಕ್ಕಾಗಿ ಅವರು ಮರಹತ್ತಿ ಅಲ್ಲಿಂದ ಮಾತಾಡಬೇಕಾದ ದುಸ್ಥಿತಿ. ಇಂತಹ ಸ್ಥಿತಿ ಬಂದಿದ್ದಾದರೂ ಯಾಕೆ? ಕಾರಣ ಕೋವಿಡ್-19 ದಿಗ್ಬಂಧನ.

ಯಾಕೆ ಹೀಗಾಗಿದ್ದು?: 55 ವರ್ಷದ ಅನಿಲ್‌ ಚೌಧರಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳಿಗೆ  ಅಂಪೈರ್‌ ಆಗಿ ಜನಪ್ರಿಯ. ಅವರು ಇದುವರೆಗೆ 20 ಏಕದಿನ, 27 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ಅಂಪೈರಿಂಗ್‌ ಮಾಡಿದ್ದಾರೆ. ಕೋವಿಡ್-19 ದಿಗ್ಬಂಧನ ಹೇರುವುದಕ್ಕಿಂತ ಮುನ್ನ ದಿನ ತಮ್ಮಿಬ್ಬರು ಪುತ್ರರನ್ನು ಕರೆದುಕೊಂಡು, ತಮ್ಮ ಹಳ್ಳಿಗೆ ಹೋಗಿದ್ದಾರೆ.

ಉತ್ತರಪ್ರದೇಶದ ಶಾಮ್ಲಿ ಜಿಲ್ಲೆಯ ದಾಂಗ್ರೆಲ್‌ ಹಳ್ಳಿಯಲ್ಲಿ ಒಂದು ವಾರವಿದ್ದು ಬರಲು ತೆರಳಿದ್ದರು. ಅಷ್ಟರಲ್ಲಿ ದಿಗ್ಬಂಧನ ಘೋಷಣೆಯಾಗಿ ಅವರಲ್ಲಿ ಸಿಕ್ಕಿಕೊಂಡರು.  ಅವರ ತಾಯಿ ಮತ್ತು ಪತ್ನಿ ದೆಹಲಿಯಲ್ಲಿದ್ದಾರೆ. ಅಪ್ಪ-ಮಕ್ಕಳು ಹಳ್ಳಿಯಲ್ಲಿ!  ಅವರಿಗೆ ದೊಡ್ಡ ಸಮಸ್ಯೆಯಾಗಿರುವುದು ನೆಟ್‌ವರ್ಕ್‌. ದೆಹಲಿಗೆ ಕೇವಲ 85 ಕಿ.ಮೀ. ದೂರವಿರುವ ಈ ಹಳ್ಳಿಯಲ್ಲಿ ನೆಟ್‌ವರ್ಕ್‌ ಇಲ್ಲ!

ಅದೇನಾದರೂ ಸಿಗಬೇಕಾದರೆ ಊರ ಹೊರಗಿನ ಮರಹತ್ತಿ ಅಲ್ಲಿಂದ ಮಾತಾಡಬೇಕು. ಅದೂ ಸಿಗುವ ಖಾತ್ರಿಯಿಲ್ಲ. ಇಲ್ಲವಾದರೆ ಮನೆ ಮೇಲೆ ಹತ್ತಬೇಕು. ಇದರಿಂದ ಸಮಯ ಕಳೆಯಲಾಗದೇ ತಾಪತ್ರಯದಲ್ಲಿದ್ದಾರೆ.

Advertisement

ಅದಕ್ಕೂ ಹೆಚ್ಚಿನ ಸಮಸ್ಯೆಯೊಂದಿದೆ! ಕೋವಿಡ್-19 ದಿಂದ ದಿಗ್ಬಂಧನ ಹೇರಲಾಗಿದ್ದರೂ ಮಕ್ಕಳಿಗೆ ಅಂತರ್ಜಾಲದ ಮೂಲಕ ತರಗತಿ ನಡೆದೇ ಇದೆ. ಅದರಲ್ಲಿ ಭಾಗವಹಿಸಲು ಮಕ್ಕಳಿಗೆ ಆಗುತ್ತಿಲ್ಲ. ವಾಪಸ್‌ ದೆಹಲಿಗೆ ಹೋಗಲೂ ಆಗುತ್ತಿಲ್ಲ. ಈ ಅವಧಿಯಲ್ಲಿ ಅನಿಲ್‌, ಹಳ್ಳಿಗರಿಗೆ ಸ್ವತ್ಛತೆಯ ಪಾಠ ಹೇಳಿ ಕೊಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next