ನವದೆಹಲಿ:ಉದ್ಯಮಿ ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ದೆಹಲಿ ಮೆಟ್ರೋ ವಿರುದ್ಧ ಹೂಡಿದ್ದ ದಾವೆಯಲ್ಲಿ ಜಯ ಸಾಧಿಸಿದೆ. ಸುಪ್ರೀಂಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳನ್ನು ಒಳಗೊಂಡ ನ್ಯಾಯಪೀಠ ಈ ಬಗ್ಗೆ ಆದೇಶ ನೀಡಿದೆ.
2008ರಲ್ಲಿ ನವದೆಹಲಿ ಏರ್‌ಪೋರ್ಟ್‌ಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಹಾಗೂ ದೆಹಲಿ ಮೆಟ್ರೋ ನಡುವೆ ಒಪ್ಪಂದವಾಗಿತ್ತು.
2012ರಲ್ಲಿ ಅನಿಲ್ ಅಂಬಾನಿ ನೇತೃತ್ವದ ಸಂಸ್ಥೆ ಒಪ್ಪಂದ ರದ್ದು ಮಾಡಿತ್ತು. ಅದರ ವಿರುದ್ಧ ದೆಹಲಿ ಮೆಟ್ರೋ ಮಧ್ಯಸ್ಥಿಕೆ ತಕರಾರು ತೆಗೆಯಿತು ಮತ್ತು ವ್ಯಾಜ್ಯ ಕೋರ್ಟ್ ಮೆಟ್ಟಿಲೇರಿತ್ತು. ಅಲ್ಲಿ ದೆಹಲಿ ಮೆಟ್ರೋ ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಗೆ 2,800 ಕೋಟಿ ರೂ. ಪಾವತಿ ಮಾಡುವಂತೆ ಸೂಚಿಸಿತ್ತು.
ದೆಹಲಿ ಹೈಕೋರ್ಟ್‌ನಲ್ಲೂ ವ್ಯಾಜ್ಯ ಬಗೆಹರಿಯದಿದ್ದಾಗ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಯಿತು.
ಇದನ್ನೂ ಓದಿ:ಲವ್ ಜಿಹಾದ್, ಮಾದಕ ಜಾಲಕ್ಕೆ ಕ್ರಿಶ್ಚಿಯನ್ ಯುವತಿಯರು ಬಲಿ
ನಾಲ್ಕು ವರ್ಷಗಳ ಕಾನೂನು ಹೋರಾಟದ ಬಳಿಕ ಸುಪ್ರೀಂಕೋರ್ಟ್ ನ್ಯಾಯಪೀಠ ದೆಹಲಿ ಮೆಟ್ರೋ, ಅನಿಲ್ ಅಂಬಾನಿ ನೇತೃತ್ವದ ಸಂಸ್ಥೆಗೆ ಬಡ್ಡಿಸಹಿತ 4,800 ಕೋಟಿ ರೂ. ಪಾವತಿ ಮಾಡಬೇಕು ಎಂದು ಸೂಚಿಸಿದೆ.