Advertisement

ಅನಿಕೇತನ ಚಿತ್ರ ಕಲಾಪ್ರದರ್ಶನ ಉದ್ಘಾಟನೆ

03:50 AM Jun 09, 2018 | Team Udayavani |

ಉಡುಪಿ: ಯಾವುದೇ ಸಾಧನೆ ಮಾಡಬೇಕಾದರೆ ಬದ್ಧತೆ ಅತ್ಯಗತ್ಯ ಎಂದು ಮಂಗಳೂರು ಎಕ್ಸ್‌ಪರ್ಟ್‌ ಗ್ರೂಪ್‌ ಆಫ್ ಇನ್‌ಸ್ಟಿಟ್ಯೂಟ್‌ ನ ಚೇರ್‌ಮನ್‌ ಪ್ರೊ| ನರೇಂದ್ರ ನಾಯಕ್‌ ಅಭಿಪ್ರಾಯಪಟ್ಟರು. ಅವರು ಜೂ. 8ರಂದು ಉಡುಪಿಯ ಆರ್ಟಿಸ್ಟ್ಸ್ ಫೋರಂ ವತಿಯಿಂದ ಗ್ಯಾಲರಿ ‘ದೃಷ್ಟಿ’ಯಲ್ಲಿ ಆಯೋಜಿಸಲಾಗಿರುವ ಪವನ್‌ ಕುಮಾರ್‌ ಅತ್ತಾವರ ಅವರ ಏಕವ್ಯಕ್ತಿ ಕಲಾ ಪ್ರದರ್ಶನ ‘ಅನಿಕೇತನ’ವನ್ನು ಉದ್ಘಾಟಿಸಿ ಮಾತನಾಡಿದರು.

Advertisement

ವೃತ್ತಿಯ ಜತೆಗೆ ಪ್ರವೃತ್ತಿಯತ್ತವೂ ಗಮನ ನೀಡಬೇಕು. ಕಲೆಯಂತಹ ಉತ್ತಮ ಸಂಗತಿಗಳನ್ನು ಸಮಾಜಕ್ಕೆ ನೀಡಿದಾಗ ಸಮಾಜ ಸುಖೀಯಾಗಿರುತ್ತದೆ. ಕಲಾವಿದರನ್ನು ಕಲಾವಿದರೇ ಗುರುತಿಸುವ ಕೆಲಸ ಮೊದಲು ಆಗಬೇಕು. ಈ ನಿಟ್ಟಿನಲ್ಲಿ ಇದೊಂದು ಶ್ಲಾಘನೀಯ ಕೆಲಸ ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಣಿಪಾಲ ಮೀಡಿಯಾ ನೆಟ್‌ವರ್ಕ್‌ ಲಿ.ನ ಸಿಇಒ ವಿನೋದ್‌ ಕುಮಾರ್‌ ಮಾತನಾಡಿ, ಚಿತ್ರಕಲೆ, ಸಂಗೀತ ಮೊದಲಾದ ಕಲೆಗಳು ನಮ್ಮ ಮನಸ್ಸಿಗೆ ನೆಮ್ಮದಿಯನ್ನು ಕೊಡುತ್ತವೆ. ಎಲ್ಲರೂ ಇವುಗಳತ್ತ ಒಲವು ಬೆಳೆಸಿ ಕೊಳ್ಳಬೇಕು. ಪವನ್‌ ಕುಮಾರ್‌ ತಮ್ಮ ಕಲಾಕೃತಿಗಳಲ್ಲಿ ವಿಶೇಷವಾಗಿ ಸಂಗೀತ ಉಪಕರಣಗಳ ಜತೆಗಿನ ಆನಂದ, ಸಂಭ್ರಮವನ್ನು ಅತ್ಯಂತ ಸೊಗಸಾಗಿ ನಿರೂಪಿಸಿದ್ದಾರೆ ಎಂದರು.

ಸರಕಾರಕ್ಕೆ ಕಾಳಜಿ ಇಲ್ಲ
ಪ್ರತಿಭಾವಂತ ಕಲಾವಿದರಿದ್ದರೂ ಸೂಕ್ತ ಗ್ಯಾಲರಿ ಇಲ್ಲ. ಅಕಾಡೆಮಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ ಸರಕಾರಗಳು ಬದಲಾಗುತ್ತಿರುವಾಗ ಅಕಾಡೆಮಿಗಳ ಅಧ್ಯಕ್ಷರು ಕೂಡ ಬದಲಾಗುತ್ತಾರೆ. ಇದರಿಂದ ಸಮಸ್ಯೆಯಾಗಿದೆ. ಹಾಗಾಗಿ ಕಲಾವಿದರಾದ ನಾವೇ ನಮ್ಮ ಪ್ರಯತ್ನಗಳಿಂದ ಗ್ಯಾಲರಿಗಳನ್ನು ನಿರ್ಮಿಸಿಕೊಂಡಿದ್ದೇವೆ ಎಂದು ಅಧ್ಯಕ್ಷತೆ ವಹಿಸಿದ್ದ ಕಲಾವಿದ ರಮೇಶ್‌ ರಾವ್‌ ಹೇಳಿದರು. ಕಲಾವಿದ ಗಣೇಶ್‌ ಸೋಮಯಾಜಿ, ಮಣಿಪಾಲ್‌ ಟೆಕ್ನಾಲಜೀಸ್‌ನ ಪ್ರಾಜೆಕ್ಟ್ ಮ್ಯಾನೇಜರ್‌, ಫೋರಂನ ಸದಸ್ಯ ಸತೀಶ್‌ಚಂದ್ರ, ಪವನ್‌ ಕುಮಾರ್‌ ಅತ್ತಾವರ, ಕಲಾವಿದ ಓಂಪ್ರಕಾಶ್‌ ಉಪಸ್ಥಿತರಿದ್ದರು. ಕಲಾವಿದ ಸಕು ಪಾಂಗಾಳ ಅವರು ಕಾರ್ಯಕ್ರಮ ನಿರ್ವಹಿಸಿದರು. 

ಜೂ. 11ರವರೆಗೆ ಪ್ರದರ್ಶನ 
ಅಕ್ರಲಿಕ್‌ ಮತ್ತು ತೈಲ ಮಾಧ್ಯಮದ 24 ಕಲಾಕೃತಿಗಳು ಪ್ರದರ್ಶನಗೊಳ್ಳಲಿದ್ದು, ಜೂ. 9ರಿಂದ 11ರ ವರೆಗೆ ಬೆಳಗ್ಗೆ 10ರಿಂದ 7ರವರೆಗೆ ಇರುತ್ತದೆ. ಕಲಾಸಕ್ತರಿಗೆ ಮುಕ್ತ ಪ್ರವೇಶವಿದೆ. ಈ ಕಲಾಕೃತಿಗಳಲ್ಲಿ ವಸ್ತುವಾಗಿ ಸಂಗೀತ ಉಪಕರಣಗಳನ್ನು ಬಳಸಿದ್ದೇನೆ ಎಂದು ಕಲಾವಿದ ಪವನ್‌ ಕುಮಾರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next