Advertisement
ಈಜಿಪ್ಟ್ಗೆ ಪ್ರಥಮ ಸ್ಥಾನ, ಯುನೈಟೆಡ್ ಕಿಂಗ್‌ಡಮ್‌ಗೆ ದ್ವಿತೀಯ ಮತ್ತು ನಮ್ಮ ಭಾರತಕ್ಕೆ ತೃತೀಯ ಸ್ಥಾನ! ವಿಶ್ವಸಂಸ್ಥೆ ಇತ್ತೀಚೆಗೆ ಹೀಗೆಂದು ಘೋಷಿಸಿಬಿಟ್ಟಿತು. ಆದರೆ, ಇದಕ್ಕೆ “ಅಯ್ಯೋ, ಮೂರನೇ ಸ್ಥಾನವೇ? ಮೊದಲನೆಯದ್ದೇ ಬಂದಿದ್ದರೆ ಒಳ್ಳೆಯದಿತ್ತು’ ಎಂದು ಹಪಹಪಿಸುವ ಹಾಗಿಲ್ಲ. ಏಕೆಂದರೆ, ಇಡೀ ಪ್ರಪಂಚದಲ್ಲಿ ಪತಿಯನ್ನು ಹೊಡೆಯುವ ಪತ್ನಿಯರು ಅತಿ ಹೆಚ್ಚು ಇರುವ ದೇಶಗಳಲ್ಲಿ ನಮ್ಮ ದೇಶಕ್ಕೆ ಮೂರನೇ ಸ್ಥಾನ!
Related Articles
Advertisement
ಮಧ್ಯಮ ಮತ್ತು ಮೇಲ್ವರ್ಗದ ಮಹಿಳೆಯರ ವಿದ್ಯಾಭ್ಯಾಸ ಮಟ್ಟ ಹೆಚ್ಚಿದೆ. ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದಾರೆ. ಮನೆ-ಆಫೀಸು, ಒಳಗೆ-ಹೊರಗೆ ಎಲ್ಲವನ್ನೂ ನಿರ್ವಹಿಸುತ್ತಿದ್ದಾರೆ. ನಿಜ. ಆದರೆ, ಮಹಿಳೆಯರ ಕುರಿತಾದ ನಿರೀಕ್ಷೆಗಳೂ ಹೆಚ್ಚಿವೆ. ತನ್ನ ಕನಸನ್ನು ಸಾಧಿಸುವ ಇಚ್ಛೆ , ಸಮಾಜದ ರೂಢಿಗತ ಪಾತ್ರಕ್ಕೆ ಹೊಂದಿಕೊಳ್ಳುವ ಅನಿವಾರ್ಯತೆ ಎರಡೂ ಆಕೆಯದ್ದು. ಬಹುಪಾತ್ರಗಳನ್ನು ಮಾಡುತ್ತಾ, ತನ್ನ ಶಕ್ತಿಮೀರಿ ಕೆಲಸ ಮಾಡತೊಡಗಿದಾಗ ಆಕೆ ದಣಿಯುತ್ತಾಳೆ. ಅವಳ ಮನಸ್ಸು ಪ್ರಕ್ಷುಬ್ಧವಾಗಿ ಹೀಗೆಲ್ಲ ಆಗುತ್ತೆ.
ಮನೋವಿಜ್ಞಾನ ಹೇಳ್ಳೋದು…ಪತ್ನಿ-ಪತಿಯರು ಪರಸ್ಪರ ಪ್ರೀತಿ-ಗೌರವಗಳಿಂದ ಬಾಳಬೇಕು. ಮಕ್ಕಳಿಗೆ ಮಾದರಿಯಾಗಬೇಕು. ಮದುವೆಯು ಅಧಿಕಾರ ಸ್ಥಾಪಿಸುವ ಹೋರಾಟವಲ್ಲ. ಪರಸ್ಪರ ನಂಬಿಕೆಯಿಂದ ಕೂಡಿ ಬಾಳುವ ಸಂಬಂಧ. ಭಿನ್ನ ಕುಟುಂಬ-ಹಿನ್ನೆಲೆಯಿಂದ ಬಂದ ಪತಿ-ಪತ್ನಿಯರಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಅದನ್ನು ಪರಿಹರಿಸಿ ಮುಂದುವರಿಯುವುದು, ಸಂದರ್ಭಕ್ಕೆ ತಕ್ಕಂತೆ ರಾಜಿಯಾಗುವುದು ಉತ್ತಮ. ಮಾನಸಿಕ-ದೈಹಿಕ-ಲೈಂಗಿಕ ಹಿಂಸೆ ಯಾರು ಯಾರಿಗೆ ಮಾಡಿದರೂ ತಪ್ಪು . ಜತೆಗೇ ಸುಮ್ಮನಿದ್ದು ಸಹಿಸುವುದೂ ತಪ್ಪೇ. ಏಕೆ ಬೆಳಕಿಗೆ ಬರುತ್ತಿಲ್ಲ?
.ದೌರ್ಜನ್ಯಕ್ಕೆ ಒಳಗಾಗುವ ಶೇ. 60ಕ್ಕೂ ಹೆಚ್ಚು ಪತಿಯಂದಿರು ಇದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ.
.ಪತ್ನಿ ಹೊಡೀತಾಳೆ ಅಂದ್ರೆ ಜನ ನಂಬೋದಿಲ್ಲ.
.ಗಂಡಸಾಗಿ ಹೊಡೆಸಿಕೊಳ್ಳುತ್ತಾನೆ ಎಂಬ ಅಪಹಾಸ್ಯ ಹಬ್ಬಿಬಿಟ್ಟರೆ ಕಷ್ಟ ಅನ್ನೋ ಭಾವ.
.ಹೆಂಡತಿಗೆ ನಾಲ್ಕು ಬಿಟ್ಟು ಬುದ್ಧಿ ಕಲಿಸಲಾಗದ ಅಸಮರ್ಥ ಎಂಬ ಕನಿಕರ ಬೆರೆತ ತಿರಸ್ಕಾರ ಮೂಡಿದರೆ ಗತಿಯೇನು ಎಂಬ ಚಿಂತೆ. ಕೆ.ಎಸ್. ಚೈತ್ರಾ