Advertisement
ಅಹಮದಾಬಾದ್ ನಲ್ಲಿ ನಡೆದ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಅವರು ತನ್ನ ಸ್ಟ್ರೈಕ್ ರೇಟ್ ಬಗ್ಗೆ ಮಾತನಾಡುವವರ ವಿರುದ್ಧ ಮಾತನಾಡಿದ್ದರು. “ಸ್ಟ್ರೈಕ್-ರೇಟ್ ಗಳ ಬಗ್ಗೆ ಮತ್ತು ನಾನು ಸ್ಪಿನ್ ಚೆನ್ನಾಗಿ ಆಡುತ್ತಿಲ್ಲ ಎನ್ನುವ ಬಗ್ಗೆ ಜನರು ಮಾತನಾಡುತ್ತಾರೆ. ಆದರೆ ನನಗೆ, ತಂಡಕ್ಕಾಗಿ ಪಂದ್ಯಗಳನ್ನು ಗೆಲ್ಲುವುದು ಮುಖ್ಯ. 15 ವರ್ಷಗಳಿಂದ ಇದನ್ನೇ ಮಾಡುತ್ತಿದ್ದೇನೆ. ನೀವು ಈ ಪರಿಸ್ಥಿಯಿಲ್ಲಿ ಇರದಿದ್ದರೆ ನೀವು ಬಾಕ್ಸ್ ನಲ್ಲಿ ಕುಳಿತು ಮಾತನಾಡಲು ಆಗದು. ಜನರು ಕುಳಿತು ಅವರ ಅಂದಾಜಿನಲ್ಲಿ ಮಾತನಾಡುತ್ತಾರೆ. ಆದರೆ ಪ್ರತಿದಿನ ಮೈದನಾದಲ್ಲಿ ಆಡುತ್ತಿರುವವರಿಗೆ ಮಾತ್ರ ಇಲ್ಲಿ ಏನಾಗುತ್ತಿದೆ ಎನ್ನುವುದು ಗೊತ್ತಿದೆ” ಎಂದು ಹೇಳಿದ್ದರು.
Related Articles
Advertisement
” ನಮಗೆ ಹೊರಗಿನ ಮಾತುಗಳ ಬಗ್ಗೆ ಕಾಳಜಿ ಇಲ್ಲ ಎಂದು ಈ ಹುಡುಗರೆಲ್ಲ ಮಾತನಾಡುತ್ತಾರೆ. ಹೌದಾ! ಹಾಗಾದರೆ ನೀವು ಯಾವುದೇ ಹೊರಗಿನ ಟೀಕೆಗಳಿಗೆ ಯಾಕೆ ಉತ್ತರಿಸುತ್ತಿದ್ದೀರಿ. ನಾವೆಲ್ಲರೂ ಬಹಳಷ್ಟು ಅಲ್ಲದಿದ್ದರೂ ಕ್ರಿಕೆಟ್ ಆಡಿದ್ದೇವೆ. ನಮಗೆ ಯಾವುದೇ ಅಜೆಂಡಾಗಳಿಲ್ಲ. ನಾವು ನೋಡುವ ವಿಷಯಗಳ ಬಗ್ಗೆ ನಾವು ಮಾತನಾಡುತ್ತೇವೆ, ನಮಗೆ ನಮ್ಮ ಇಷ್ಟಗಳು ಮತ್ತು ಇಷ್ಟವಿಲ್ಲದಿದ್ದರೂ ಸಹ, ನಾವು ವಾಸ್ತವವಾಗಿ ಏನು ನಡೆಯುತ್ತಿದೆ ಎಂಬುದರ ಕುರಿತು ಮಾತನಾಡುತ್ತೇವೆ” ಎಂದು ವಿರಾಟ್ ಹೆಸರು ಹೇಳದೆ ಟೀಕೆ ಮಾಡಿದರು.