ನವದೆಹಲಿ: ಸಿಂಹವನ್ನು ಕಾಡಿನ ರಾಜ ಎಂದು ಕರೆಯುತ್ತೇವೆ. ಅದೇ ರೀತಿ ಯಾವುದೇ ವನ್ಯ ಮೃಗಗಳು ಅದನ್ನು ಎದುರು ಹಾಕಿಕೊಳ್ಳುವ ಧೈರ್ಯ ಮಾಡುವುದಿಲ್ಲ. ಆದರೆ ಒಮ್ಮೊಮ್ಮೆ ಸಿಂಹ, ಹುಲಿ, ಚಿರತೆಯನ್ನು ಸಾಮಾನ್ಯ ವನ್ಯ ಮೃಗಗಳು ಅಟ್ಟಾಡಿಸುವ, ಎದುರಿಸುವ ಪ್ರಸಂಗಗಳ ಬಗ್ಗೆ ಓದಿರುತ್ತೀರಿ. ಇದೀಗ ಅದಕ್ಕೊಂದು ಸೇರ್ಪಡೆ ಎಂಬಂತೆ ಸರೋವರದ ಬಳಿ ನೀರು ಕುಡಿಯಲು ಬಂದ ಸಿಂಹವನ್ನು ನೀರು ಕುದುರೆ (ಹಿಪ್ಪೋ) ಹಿಮ್ಮೆಟ್ಟಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ಆಸ್ಟ್ರೇಲಿಯಾದಲ್ಲಿ ಮತ್ತೆ ಹಿಂದೂ ದೇಗುಲ ಧ್ವಂಸ: 2 ತಿಂಗಳ ಅವಧಿಯಲ್ಲಿ ನಡೆದ ನಾಲ್ಕನೇ ಘಟನೆ
ಈ ವಿಡಿಯೋವನ್ನು ಕ್ರುಗರ್ ಎಂಬ ಇನ್ಸ್ ಟಾಗ್ರಾಮ್ (Instagram) ಪೇಜ್ ನಲ್ಲಿ ಶೇರ್ ಮಾಡಿದ್ದು, ಸಿಂಹವೊಂದು ನಿಧಾನಕ್ಕೆ ಹೆಜ್ಜೆ ಇಡುತ್ತಾ ಸರೋವರದ ನೀರು ಕುಡಿಯಲು ಮುಂದಾಗಿತ್ತು. ಈ ಸಂದರ್ಭದಲ್ಲಿ ಅದೇ ಸರೋವರದಲ್ಲಿ ಮೂರು ನೀರು ಕುದುರೆಗಳು ಇದ್ದವು. ಅದರಲ್ಲಿ ದೊಡ್ಡ ನೀರು ಕುದುರೆ ಸಿಂಹವನ್ನೇ ನೋಡುತ್ತಿದ್ದು, ಏಕಾಏಕಿ ಸಿಂಹದತ್ತ ಮುನ್ನುಗ್ಗಿದ್ದ ಪರಿಣಾಮ ಸಿಂಹ ಓಡಿದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
Instagramನಲ್ಲಿ ಶೇರ್ ಮಾಡಿರುವ ಈ ವಿಡಿಯೋವನ್ನು ಸಾವಿರಾರು ಮಂದಿ ವೀಕ್ಷಿಸಿದ್ದು, ಹಲವರು ಪ್ರತಿಕ್ರಿಯೆಗಳನ್ನು ನೀಡಿ ನೀರು ಕುದುರೆಯ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.