Advertisement

ಅಂಗನವಾಡಿಯಲ್ಲಿ ಮಕ್ಕಳ ಕಲರವ

08:21 PM Mar 03, 2022 | Team Udayavani |

ಸುಳ್ಯ: ಕೊರೊನಾ ಕಾರಣ ದಿಂದಾಗಿ ಎರಡು ವರ್ಷಗಳಿಂದ ಪೂರ್ಣ ಪ್ರಮಾಣದಲ್ಲಿ ಪುನರಾರಂಭಗೊಂಡಿರದ ಅಂಗನ ವಾಡಿ ಕೇಂದ್ರಗಳು ರಾಜ್ಯದಲ್ಲಿ ಬುಧವಾರ ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡಿದೆ. ಇನ್ನು ಬೆಳಗ್ಗೆಯಿಂದ ಸಂಜೆ ವರೆಗೆ ಅಂಗನವಾಡಿಗಳು ಕಾರ್ಯಾಚರಿಸಲಿದ್ದು ಅಂಗನ ವಾಡಿಗಳಲ್ಲಿ ದಿನವಿಡೀ ಮಕ್ಕಳ ಕಲರವ ಕೇಳಲಿದೆ. ಕೊರೊನಾ ಮಾರ್ಗ ಸೂಚಿಯನ್ನು ಪಾಲಿಸಿಕೊಂಡು ಅಗತ್ಯ ಕ್ರಮ ಕೈಗೊಂಡು ಕೇಂದ್ರ ಕಾರ್ಯಾ ಚರಿಸಲು ಸೂಚನೆ ನೀಡಲಾಗಿದೆ.

Advertisement

ಕೊರೊನಾ ಹಿನ್ನೆಲೆಯಲ್ಲಿ ಸಂಪೂರ್ಣ ಸ್ತಬ್ಧಗೊಂಡಿದ್ದ ದೇಶದಲ್ಲಿ ಕ್ರಮೇಣವಾಗಿ ಒಂದೊಂದೆ ಚಟುವಟಿಕೆಗಳು ಆರಂಭಗೊಂಡಿತ್ತು. ಕಾಲೇಜು, ಶಾಲೆಗಳು ಆರಂಭಗೊಂಡಿದ್ದರೂ ಅಂಗನವಾಡಿ ಕೇಂದ್ರಗಳನ್ನು ತೆರೆಯಲು ಅವಕಾಶ ನೀಡಿರಲಿಲ್ಲ. ಕಳೆದ ಕೆಲವು ತಿಂಗಳಿನಿಂದ ಅಂಗನವಾಡಿ ತೆರೆದಿದ್ದರೂ ಮಧ್ಯಾಹ್ನ ವರೆಗೆ ಆಗಮಿಸಿದ ಮಕ್ಕಳಿಗೆ ಆಟವಾಡಲು ಅವಕಾಶ ಕಲ್ಪಿಸಲಾಗಿತ್ತು. ಈ ವೇಳೆ ಮಕ್ಕಳಿಗೆ ವಿತರಣೆಯಾದ ಪೌಷ್ಟಿಕ ಆಹಾರಗಳನ್ನು ಅವರ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿತ್ತು.

ಇದೀಗ ಅಂಗನವಾಡಿಗಳು ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡಿದ್ದು, ಬೆಳಗ್ಗೆ 10ರಿಂದ ಸಂಜೆ 4 ಗಂಟೆ ತನಕ ಕಾರ್ಯಾಚರಿಸಲಿದೆ. ಆಹಾರ ವಿತರ ಣೆಯೂ ನಡೆಯುತ್ತಿದೆ. ಮಧ್ಯಾಹ್ನ ಬಿಸಿಯೂಟ, ವಾರದಲ್ಲಿ 2 ಬಾರಿ ಮೊಟ್ಟೆ, ಬೆಳಗ್ಗೆ 10 ಗಂಟೆಗೆ ಹಾಲು, ಅಪರಾಹ್ನ ಕಡ್ಲೆ, ಹೆಸರುಕಾಳು ಸಹಿತ ವಿವಿಧ ಪೌಷ್ಟಿಕ ಆಹಾರ ವಿತರಣೆ ನಡೆಯಲಿದೆ. ಶೇ. 75ಕ್ಕಿಂತ ಅಧಿಕ ಸಂಖ್ಯೆಯ ಮಕ್ಕಳ ಆಗಮನವಾಗುತ್ತಿದೆ ಎನ್ನುತ್ತಾರೆ ಕೇಂದ್ರದ ನಿರ್ವಾಹಕರು.

ಮಕ್ಕಳಿಗೆ ಖುಷಿ :

ಪೂರ್ಣ ಪ್ರಮಾಣದಲ್ಲಿ ಅಂಗನವಾಡಿಗಳು ತೆರೆಯುವುದರೊಂದಿಗೆ ಪುಟಾಣಿಗಳ ಕಾರ್ಯಕ್ರಗಳಿಗೂ ಚಾಲನೆ ಸಿಗುವ ನಿರೀಕ್ಷೆಯಿದೆ. ಸದಾ ಮನೆಯಲ್ಲಿ ಇದ್ದ ಪುಟಾಣಿಗಳಿಗೆ ಇತರ ಮಕ್ಕಳೊಂದಿಗೆ ಬೆರೆಯುವ ಅವಕಾಶ ಬಂದಿರುವುದು ಅವರಿಗೂ ಖುಷಿಯನ್ನು ತಂದಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಕ್ಕಳ ಆಗಮನವಾಗುವ ನಿರೀಕ್ಷೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

Advertisement

ಉತ್ತಮ ಸ್ಪಂದನೆ :

ಪೋಷಕರ, ಮಕ್ಕಳ ಸ್ಪಂದನೆ ಉತ್ತಮವಾಗಿದೆ. ಶೇ.75ರಷ್ಟು ಮಕ್ಕಳ ಆಗಮನವಾಗುತ್ತಿದೆ. ಮುಂದಕ್ಕೆ ಇದು ಹೆಚ್ಚಾಗುವ ನಿರೀಕ್ಷೆ ಇದೆ. ಕೊರೊನಾ ಮಾರ್ಗಸೂಚಿಯಂತೆ ಕೇಂದ್ರ ನಡೆಸಲು ಸೂಚನೆ ಇದ್ದು ಅದಂತೆ ಕೇಂದ್ರಗಳು ಕಾರ್ಯಾಚರಿಸುತ್ತಿವೆ.-ಶೋಭಾ,  ಕಾರ್ಯಕ್ರಮ ಅಧಿಕಾರಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಂಗಳೂರು.

ಉತ್ತಮ ಹಾಜರಾತಿ :

ಸುಳ್ಯ ವ್ಯಾಪ್ತಿಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಸರಕಾರದ ಸವಲತ್ತುಗಳು ವಿತರಣೆಯಾಗಿದ್ದು, ಭೇಟಿ ನೀಡಿದ ಕಡೆಗಳಲ್ಲಿ ಮಕ್ಕಳ ಹಾಜರಾತಿ ಉತ್ತಮವಾಗಿತ್ತು.-ರಶ್ಮಿ ನೆಕ್ರಾಜೆ,  ಸಿಡಿಪಿಒ ಸುಳ್ಯ.

-ದಯಾನಂದ ಕಲ್ನಾರ್‌

Advertisement

Udayavani is now on Telegram. Click here to join our channel and stay updated with the latest news.

Next