Advertisement

ಬೇಡಿಕೆ ಈಡೇರಿಕೆಗೆ ಅಂಗನವಾಡಿ ಕಾರ್ಯಕರ್ತೆಯರ ಆಗ್ರಹ

05:31 PM Jul 27, 2022 | Shwetha M |

ಮುದ್ದೇಬಿಹಾಳ: ತಾಲೂಕಿನಲ್ಲಿ ಐದು ವರ್ಷಗಳಿಂದ ಅಂಗನವಾಡಿ ಬಾಡಿಗೆಯನ್ನು ಮಾಲೀಕರಿಗೆ ಕೊಡದೇ ಇರುವುದು, ಜು.2019ರ ಗೌರವಧನ ಕಾರ್ಯಕರ್ತೆಯರು, ಸಹಾಯಕಿಯರಿಗೆ ಮುಟ್ಟದೇ ಇರುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಮಂಗಳವಾರ ತಾಲೂಕಾಡಳಿತಕ್ಕೆ ಮನವಿ ಸಲ್ಲಿಸಿದರು.

Advertisement

ರಾಜ್ಯ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಸೇವಾ ಸಂಘದ ಅಧ್ಯಕ್ಷ ನೀಲಮ್ಮ ಬೋರಾವತ್‌ ಮಾತನಾಡಿ, ತಾಲೂಕಿನ ತಂಗಡಗಿ ಭಾಗದಲ್ಲಿ 2019ರಲ್ಲಿ ಏಳು ತಿಂಗಳ ಮೊಟ್ಟೆ ಬಿಲ್‌ ಬಾಕಿ ತೆಗೆಯಬೇಕು.ಅಲ್ಲದೇ ಸರ್ವಿಸ್ಸಾದ ಕಾರ್ಯಕರ್ತೆಯರನ್ನು ಮೇಲ್ವಿಚಾರಕಿ ಎಂದು ಬಡ್ತಿ ನೀಡಬೇಕು. ನಿವೃತ್ತರಾದ ಅಂಗನವಾಡಿ ನೌಕರರಿಗೆ ಎನ್‌ಪಿಎಸ್‌ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.

ನಿಂಬೆಕ್ಕ ಕಾಳಾಪುರ, ಅಯ್ಯಮ್ಮ ವಣಕ್ಯಾಳ, ಶೋಭಾ ಕಾಖಂಡಕಿ, ಶಿವಮ್ಮ ಅಂಗಡಗೇರಿ, ಗೌರಮ್ಮ ಕರ್ಜಗಿ, ಈರಮ್ಮ ಹಿರೇಮಠ, ಯಮನಕ್ಕ ವಡ್ಡರ, ಸುರೇಖಾ ಕುಲಕರ್ಣಿ, ಅಂಬುಜಾ ಕುಲಕರ್ಣಿ, ಕಾಶೀಬಾಯಿ ತುಂಬಗಿ, ಗುರುಬಾಯಿ ಕಲಬುರ್ಗಿ, ಲೀಲಾವತಿ ಕುಂಟೋಜಿ, ವಿದ್ಯಾ ಪಾಟೀಲ ಸೇರಿದಂತೆ ತಾಲೂಕಿನ ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ಕಾರ್ಯಕರ್ತೆಯರು, ಸಹಾಯಕಿಯರು ಇದ್ದರು.

ಇದೇ ವೇಳೆ ಬ.ಸಾಲವಾಡಗಿಯ ಅಂಗನವಾಡಿ ಸಹಾಯಕಿ ಶಾಂತಮ್ಮ ಮೇಟಿ ನಿಧನ ಹಿನ್ನೆಲೆಯ ಕಾರ್ಯಕರ್ತೆಯರು ಮನವಿ ಸಲ್ಲಿಕೆಗೂ ಮುನ್ನ ನಡೆಸಲು ಉದ್ದೇಶಿಸಿದ್ದ ಪ್ರತಿಭಟನಾ ರ್ಯಾಲಿ ಕೈ ಬಿಟ್ಟು ನೇರವಾಗಿ ತಹಶೀಲ್ದಾರ್‌ ಕಚೇರಿಗೆ ಆಗಮಿಸಿ ಶಿರಸ್ತೇದಾರ್‌ ತೊನಶ್ಯಾಳ ಅವರಿಗೆ ಮನವಿ ಸಲ್ಲಿಸಿದರು. ಇದಕ್ಕೂ ಮುನ್ನ ಅಂಗನವಾಡಿ ಸಹಾಯಕಿಯ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next