ಬಂಗಾರಪೇಟೆ: ಮಕ್ಕಳು ಆರೋಗ್ಯದಿಂದ ಸದೃಢ ವಾಗಿ ಬೆಳೆಯಬೇಕು ಮತ್ತು ಅಪೌಷ್ಟಿಕತೆ ನಿವಾರಣೆ ಉದ್ದೇಶದಿಂದ ಅಂಗನವಾಡಿಗಳಿಗೆ ಹಾಲಿನ ಪೌಡರ್ ಪೂರೈಕೆ ಮಾಡಲಾಗುತ್ತಿತ್ತು. ಆದರೆ, ಕಳೆದ ಮೂರು ತಿಂಗಳಿನಿಂದ ಜಿಲ್ಲಾದ್ಯಂತ ಹಾಲಿನ ಪೌಡರ್ ಸರಬರಾಜು ಸ್ಥಗಿತ ಗೊಂಡಿದ್ದು, ಮಕ್ಕಳು ಅಪೌಷ್ಟಿಕತೆ ಯಿಂದ ಬಳಲುವಂತಾಗಿದೆ.
ಅಪೌಷ್ಟಿಕತೆ ನಿವಾರಣೆಗಾಗಿ ಅಂಗನವಾಡಿ ಕೇಂದ್ರಗಳ ಮೂಲಕ ಮಕ್ಕಳು ಹಾಗೂ ಗರ್ಭಿಣಿ ಯರು, ಬಾಣಂತಿಯರಿಗೆ ಹಾಲು ನೀಡಲು ಕ್ಷೀರ ಭಾಗ್ಯ ಹಾಗೂ ತಾಯಂದಿರಿಗೆ ಮಾತೃಪೂರ್ಣ ಯೋಜನೆಯಡಿ, ಸರ್ಕಾರ ಹಾಲಿನ ಪುಡಿ ಪೂರೈಕೆ ಮಾಡುತ್ತಿತ್ತು. ಆದರೆ, ಕಳೆದ ಮಾರ್ಚ್ ತಿಂಗಳಿನಿಂದ ಕೇಂದ್ರಗಳಿಗೆ ಹಾಲಿನ ಪೌಡರ್ ವಿತರಣೆ ಮಾಡಿಲ್ಲ. ಬದಲಾಗಿ ಕೇವಲ ಅಕ್ಕಿ, ಬೇಳೆ, ಉಪ್ಪು ಇತ್ಯಾದಿಗಳನ್ನು ನೀಡಲಾಗುತ್ತಿದೆ.
13 ಸಾವಿರ ಫಲಾನುಭವಿಗಳು: ಅಂಗನವಾಡಿ ಕೇಂದ್ರಗಳಲ್ಲಿ ನಿತ್ಯ ಮಕ್ಕಳಿಗೆ ಹಾಲು ತರಣೆ ಮಾಡ ಲಾಗುತ್ತಿತ್ತು. ಮೂರು ತಿಂಗಳಿಂದ ಹಾಲಿನ ಪುಡಿ ಪೂರೈಕೆ ಮಾಡದ ಕಾರಣ ಮಕ್ಕಳು ನಿತ್ಯವೂ ಹಾಲು ಕೇಳುತ್ತಿವೆ. ಕೇಂದ್ರಗಳಿಗೆ ಬರುವಂತಹ ಗರ್ಭಿಣಿ ಯರು ಮತ್ತು ಬಾಣಂತಿಯರು ಸಹ ಹಾಲು ಕೊಡಿ ಎಂದು ಕೇಳುತ್ತಿರುವುದು ಸಾಮಾನ್ಯವಾಗಿದೆ. ತಾಲೂ ಕಿನಲ್ಲಿ ಗರ್ಭಿಣಿ ಮತ್ತು ಬಾಣಂತಿಯರು 2500 ಮತ್ತು ಮಕ್ಕಳು 9500 ಸೇರಿ ಒಟ್ಟು 13 ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ಫಲಾನುಭಗಳಿದ್ದಾರೆ. ಇಷ್ಟು ಮಂದಿಗೂ ಸಹ ಮಾರ್ಚ್ ತಿಂಗಳಿನಿಂದ ಹಾಲಿನ ಪುಡಿ ಕಡಿತಗೊಳಿಸಲಾಗಿದೆ. ಕಳೆದ 15 ದಿನಗಳಿಂದ ಬೇಸಿಗೆ ರಜೆ ನೀಡಲಾಗಿದ್ದು, ರಜೆ ಸಮಯದಲ್ಲಿ ಮನೆಗಳಿಗೆ ಹಾಲು ಪುಡಿ ಬಿಟ್ಟು ಇತರೆ ಸಾಮಾಗ್ರಿಗಳನ್ನು ವಿತರಣೆ ಮಾಡಲಾಗಿದೆ. ಮೇ 29 ರಂದು ಪುನಃ ಅಂಗನವಾಡಿ ಕೇಂದ್ರಗಳು ಆರಂಭವಾಗಿದ್ದು, ಶೀಘ್ರದಲ್ಲಿ ಹಾಲಿನ ಪೌಡರ್ ವಿತರಣೆ ಮಾಡಿದರೆ ಒಳ್ಳೆಯದು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಹಾಲಿನ ಪೌಡರ್ ಕೊರತೆ: ರಾಸುಗಳಿಗೆ ತಗುಲಿದ ಚರ್ಮಗಂಡು ರೋಗ ಸೇರಿ ಇತರೆ ಕಾರಣಗಳಿಂದ ಹಾಲು ಉತ್ಪಾದಕ ಸಂಘಗಳಿಂದ ಕೆಎಂಎಫ್ಗೆ ಹಾಲು ಪೂರೈಕೆ ಕಡಿಮೆಯಾಗಿದೆ. ರಾಜ್ಯಾದ್ಯಾಂತ ಹಾಲಿನ ಕೊರತೆ ಎದುರಾದ ಕಾರಣ ಹಾಲಿನ ಪುಡಿ ತಯಾರಿಕೆ ಸ್ಥಗಿತಗೊಂಡಿದೆ. ಇದರಿಂದ ಹಾಲಿನ ಪೌಡರ್ ಅಂಗನವಾಡಿ ಕೇಂದ್ರಗಳಿಗೆ ವಿತರಣೆಯಾಗಿಲ್ಲ ಎಂದು ಹೇಳಲಾಗುತ್ತಿದೆ. ಇದರ ನಡುವೆ ಕೆಎಂಎಫ್ ಸರಬ ರಾಜು ಮಾಡುವ ಹಾಲಿನ ಪೌಡರ್ ಬೆಲೆಯನ್ನು ಸಹ ಏರಿಕೆ ಮಾಡಿದ್ದು, ಬೆಲೆ ಏರಿಕೆಯ ಬಗ್ಗೆ ಹಣ ಕಾಸು ಇಲಾಖೆಯಿಂದ ಒಪ್ಪಿಗೆ ಪಡೆದ ನಂತರ ಹಾಲಿನ ಪೌಡರ್ ವಿತರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಅಂಗನವಾಡಿ ಕೇಂದ್ರಗಳಿಗೆ ಹಾಲಿನ ಪುಡಿ ಬಿಟ್ಟು ಅಕ್ಕಿ, ಬೇಳೆ, ಉಪುr ಇತ್ಯಾದಿಗಳನ್ನು ನೀಡಲಾಗಿದೆ. ಮಕ್ಕಳ ಪೊಷಕರು, ಗರ್ಭಿಣಿಯರು ಹಾಗೂ ಬಾಣಂತಿಯರು ಸಹ ಹಾಲು ಕೊಡಿ ಎಂದು ಕೇಳು ತ್ತಿರುವುದರಿಂದ ಕೆಲವು ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು ಕೈಯಿಂದ ಹಣವನ್ನು ನೀಡಿ ಮೊಟ್ಟೆ ಖರೀದಿಸಿ ವಿತರಣೆ ಮಾಡಿ ಮಾನವೀಯತೆ ಮರೆದಿದ್ದಾರೆ.
ನಾನಾ ಕಾರಣಗಳಿಂದ ಇಡೀ ರಾಜ್ಯಾದ್ಯಾಂತ ಕಳೆದ ಮೂರು ತಿಂಗಳಿಂದ ಹಾಲಿನ ಪುಡಿ ವಿತರಣೆ ಯಾಗಿಲ್ಲ. ಪೋಷಕರು ಸಹ ಮನವಿ ಯನ್ನು ಮಾಡುತ್ತಿದ್ದಾರೆ. ಹಾಲಿನ ಪುಡಿ ವಿತರಣೆಗೆ ಇಂಡೆಂಟ್ ಸಹ ಕಳುಹಿಸ ಲಾಗಿದ್ದು, ಕೇಂದ್ರಗಳು ಆರಂಭ ಆಗುತ್ತಿದ್ದಂತೆ ಸರಬರಾಜು ಆಗುವ ಸಾಧ್ಯತೆ ಇದೆ.
-ಮುನಿರಾಜು, ಸಿಡಿಪಿಒ, ಬಂಗಾರಪೇಟೆ