Advertisement

ಪ್ಲಾಸ್ಟಿಕ್‌ ಬಳಸಿ ಅಂಗನವಾಡಿ ನಿರ್ಮಿಸಲು ಅಸ್ಸಾಂ ಜಿಲ್ಲಾಡಳಿತ ನಿರ್ಧಾರ

10:05 AM Feb 09, 2020 | sudhir |

ಹೈಲಾಕಂಡಿ: ಅಸ್ಸಾಂನ ಹೈಲಾಕಂಡಿ ಜಿಲ್ಲಾ ಕೇಂದ್ರದಲ್ಲಿ ಸದ್ಯದಲ್ಲೇ ನಿರ್ಮಾಣವಾಗಲಿರುವ ಅಂಗನವಾಡಿ ಕೇಂದ್ರಕ್ಕೆ ಪ್ಲಾಸ್ಟಿಕ್‌ ಹಾಗೂ ಜೈವಿಕವಾಗಿ ವಿಘಟನೀಯವಾಗದ ಸಾಮಗ್ರಿಗಳನ್ನು ಬಳಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಗರದ ಲಾಲಾ ಬ್ಲಾಕ್‌ನಲ್ಲಿರುವ ಸಿಂಘಲ್ಲಾ ಪ್ರಾಂತ್ಯದಲ್ಲಿ ಈ ಕಟ್ಟಡವನ್ನು ಜಿಲ್ಲಾಡಳಿತದ ವತಿಯಿಂದ 3.36 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತದೆ ಎಂದು ಹೈಲಾಕಂಡಿಯ ಹೆಚ್ಚುವರಿ ಜಿಲ್ಲಾಧಿಕಾರಿ ಆರ್‌.ಕೆ. ದಾಮ್‌ ತಿಳಿಸಿದ್ದಾರೆ.

Advertisement

ಈ ಯೋಜನೆಗೆ ಯುಎನ್‌ಡಿಪಿ, ರಾಜ್ಯ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಗಳೂ ಕೈ ಜೋಡಿಸಲಿವೆ ಎಂದು ಅವರು ತಿಳಿಸಿದ್ದಾರೆ. ಪ್ಲಾಸ್ಟಿಕ್‌ ಹಾಗೂ ನಾನ್‌-ಬಯೋಡೀಗ್ರೇಡಬಲ್‌ ಸಾಮಗ್ರಿಗಳನ್ನು ಬಳಸಿ ಮೊದಲಿಗೆ ಪರಿಸರ ಸ್ನೇಹಿ ಇಟ್ಟಿಗೆಗಳನ್ನು ತಯಾರಿಸಲಾಗುತ್ತದೆ. ಇವುಗಳ ಜೋಡಣೆ ಹಾಗೂ ಅವುಗಳ ಮೇಲೆ ಮೆತ್ತಲು ದ್ರವರೂಪದ ಸಿಮೆಂಟ್‌ ಬಳಸಲಾಗುತ್ತದೆ. ಇದೊಂದು ವಿಭಿನ್ನ ತಂತ್ರಜ್ಞಾನವಾಗಿದ್ದು, ಇದರಿಂದ ತಯಾರಾಗುವ ಕಟ್ಟಡ ಭೂಕಂಪವಾದರೂ ಹಾನಿಯಾಗದ ಸಾಮರ್ಥ್ಯ ಹೊಂದಿರಲಿದೆ ಎಂದು ದಾಮ್‌ ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next