Advertisement
ಹಿನ್ನೆಲೆನಾವುಂದ-ಯರುಕೋಣೆ., ಎಲ್ಲೂರು ಮಖ್ಯ ರಸ್ತೆಯ ಯರುಕೋಣೆ ಪೇಟೆಯ ಸರಕಾರಿ ಜಾಗದಲ್ಲಿ ಮುಂದುವರಿಕಾ ಕಲಿಕಾ ಕಟ್ಟಡ ಇತ್ತು, ನಂತರ ಈ ಕಟ್ಟಡದಲ್ಲಿ ಅಂಗನವಾಡಿ ಆರಂಭಿಸಲಾಗಿತ್ತು. ಸುಮಾರು 15 ವರ್ಷ ಅಂಗನವಾಡಿ ಕಾರ್ಯ ನಿರ್ವಹಿಸಿದೆ. ಬಳಿಕ ಕಟ್ಟಡ ಶಿಥಿಲಗೊಂಡಿದ್ದು ಕಟ್ಟಡ ದುರಸ್ತಿಗೊಳಿಸುವ ಕಾರ್ಯ ನಡೆಯಲಿಲ್ಲ. ಬಳಿಕ ಈ ಅಂಗನವಾಡಿ ಕೇಂದ್ರವನ್ನು ಪೇಟೆಯಿಂದ ಸುಮಾರು 4 ಕಿ.ಮೀ. ದೂರದ ಆಲಗದ್ದೆ ಕೇರಿಗೆ ಸ್ಥಳಾಂತರಿಸಲಾಗಿದೆ.
ಯರುಕೋಣೆಯ ಪೇಟೆ ಪರಿಸರದಲ್ಲಿ 35ಕ್ಕೂ ಹೆಚ್ಚು ಮನೆಗಳಿವೆ. ಅಂಗನವಾಡಿಗೆ ಹೋಗುವ ವಯಸ್ಸಿನ 17 ಮಕ್ಕಳಿದ್ದಾರೆ. ಸಮೀಪದ ಅಂಗನವಾಡಿಯನ್ನು ದೂರದ ಊರಿಗೆ ಸ್ಥಳಾಂತರಿಸಿದ್ದರಿಂದ ಹೆತ್ತವರು ನಿತ್ಯ ಸಮಸ್ಯೆ ಎದುರಿಸುವಂತಾಗಿದೆ. ಆಲಗದ್ದೆಕೇರಿ ಅಂಗನವಾಡಿಗೆ ಮಕ್ಕಳನ್ನು ಕಳುಹಿಸಲು ಕಷ್ಟಕರವಾಗಿದ್ದರಿಂದ ಕೆಲವರು 2.5 ಕಿ.ಮೀ. ದೂರದ ಹೇರೂರು ಮಠದ ಶಾಲೆ ಅಂಗನವಾಡಿಗೆ ಬಿಟ್ಟುಬರುತ್ತಾರೆ. ಆದರೆ ಅಂಗನವಾಡಿ ಕೇಂದ್ರಕ್ಕೆ ಸರಕಾರದಿಂದ ಸಿಗುವ ಸೌಲಭ್ಯಗಳು ಪೂರ್ಣಪ್ರಮಾಣದಲ್ಲಿ ಲಭ್ಯವಾಗುವುದು ಆಲಗದ್ದೆಕೇರಿಗೆ. ಇದರಿಂದ ಮಕ್ಕಳು ವಿವಿಧ ಸೌಲಭ್ಯಗಳಿಂದ ವಂಚಿತರಾಗುವ ಭೀತಿಯು ಹೆತ್ತವರನ್ನು ಕಾಡುತ್ತಿದೆ. ಮಳೆಗಾಲದಲ್ಲಿ ದೂರದ ಅಂಗನವಾಡಿಗೆ ಕರೆದುಕೊಂಡು ಹೋಗಲು ಕಷ್ಟವಾಗುತ್ತಿದೆ. ಕೆಲಸಕ್ಕೂ ಅಡಚಣೆಯಾಗುತ್ತದೆ. ಇದರಿಂದ ಮಕ್ಕಳನ್ನು ಕಳಿಸದೇ ಇರುವ ತೀರ್ಮಾನ ಮಾಡಿದ್ದಾಗಿ ಚಂದ್ರ ಯರುಕೋಣೆ ಹೇಳುತ್ತಾರೆ. ಜಾಗ ಒತ್ತುವರಿ ತೆರವಿಗೆ ಆಗ್ರಹ
ಇಲ್ಲಿನ ಅಂಗನವಾಡಿಯ ಹಳೆಯ ಕಟ್ಟಡದ ಹಂಚಿನ ಮಾಡನ್ನು ಕೆಡವಿ ಒತ್ತುವರಿ ಮಾಡಿದ ಬಗ್ಗೆ ಮತ್ತು ಸನಿಹದ ಸರಕಾರಿ ಸಮಾಜ ಮಂದಿರಕ್ಕೆ ಮೀಸಲಿಟ್ಟ ಸರಕಾರಿ ಜಾಗವನ್ನೂ ಒತ್ತುವರಿ ಮಾಡಿದ ಬಗ್ಗೆ ಸ್ಥಳೀಯರು ಆರೋಪಿಸಿದ್ದಾರೆ. ಇದನ್ನು ತೆರವುಗೊಳಿಸಲೂ ಇಲಾಖೆಗಳು, ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾಗಿ ತಿಳಿಸಿದ್ದಾರೆ.
Related Articles
ಜನರ ಮನವಿಯಂತೆ ಎರಡು ವರ್ಷಗಳ ಹಿಂದೆ ಅದೇ ಅಂಗನವಾಡಿ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ಶಿಶು ಅಭಿವೃದ್ಧಿ ಇಲಾಖೆಗೆ ಅನುದಾನಕ್ಕಾಗಿ ಮನವಿ ಮಾಡಲಾಗಿದೆ. ಇದುವರೆಗೆ ಸರಕಾರ ಯಾವುದೇ ಅನುದಾನ ಮಂಜೂರುಗೊಳಿಸಿಲ್ಲ.
– ಪ್ರಕಾಶ, ಪಿಡಿಒ ಹೇರೂರು ಗ್ರಾ.ಪಂ.
Advertisement
ಪರಿಶೀಲಿಸಿ ಕ್ರಮಒತ್ತುವರಿಯ ಬಗ್ಗೆ ದೂರು ಬಂದಿದ್ದು ಈ ಕುರಿತು ನೋಟಿಸ್ ಜಾರಿಗೊಳಿಸಿದ್ದೇವೆ. ವಿಚಾರಣೆ ಹಂತದಲ್ಲಿ ಇದೆ. ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಲಾಗುವುದು.
– ಬಸಪ್ಪ ಪೂಜಾರ್, ಬೈಂದೂರು ತಾ| ತಹಶೀಲ್ದಾರ್