Advertisement

Anegundi Utsav ಚಾಲನೆ; ಪೊಲೀಸರ ನಿರ್ಬಂಧ: ಪ್ರೇಕ್ಷಕರ ಕೊರತೆ

12:07 AM Mar 12, 2024 | Team Udayavani |

ಗಂಗಾವತಿ: ಪೊಲೀಸರ ನಿರ್ಬಂಧ ದಿಂದಾಗಿ ಆನೆಗೊಂದಿ ಉತ್ಸವದ ರಾಜಾ ಶ್ರೀರಂಗದೇವರಾಯಲು ವೇದಿಕೆಯಲ್ಲಿ ಪ್ರೇಕ್ಷಕರ ಕೊರತೆಯಿಂದಾಗಿ ಉತ್ಸವದ ಉದ್ಘಾಟನೆ ಮೂರು ತಾಸು ತಡವಾಗಿ ಆರಂಭವಾಯಿತು.

Advertisement

ಪ್ರೇಕ್ಷಕರು ಕುಳಿತುಕೊಳ್ಳಲು ಸುಮಾರು 20 ಸಾವಿರ ಕುರ್ಚುಗಳನ್ನು ಹಾಕಲಾಯಿತು. ಬಳ್ಳಾರಿ, ರಾಯಚೂರು ಜಿಲ್ಲೆಯಿಂದ ನಿಯೋಜನೆಗೊಂಡಿದ್ದ ಪೊಲೀಸರು, ಇನ್ಸ್ಪೆಕ್ಟರ್ ಗಳು ಪಾಸ್ ಇದ್ದವರನ್ನು ಮಾತ್ರ ಒಳಗೆ ಬಿಟ್ಟು ಪಾಸ್ ಇಲ್ಲದವರನ್ನು ವಾಪಸ್ ಕಳಿಸಿದ್ದರಿಂದ ಜನರು ವೇದಿಕೆ ಮುಂಭಾಗದ ರಸ್ತೆಯಲ್ಲಿ ನಿಂತಿದ್ದರಿಂದ ಪ್ರೇಕ್ಷಕರ ಕೊರತೆಯಾಯಿತು. ಬೆರಳೆಣಿಕೆಯಷ್ಟು ಪ್ರೇಕ್ಷಕರನ್ನು ಕಂಡ ಶಾಸಕ ಗಾಲಿ ಜನಾರ್ದನರೆಡ್ಡಿ ಆಪ್ತರು ಗಲಿಬಿಲಿಗೊಂಡ ಜಿಲ್ಲಾಧಿಕಾರಿ, ಎಸ್ಪಿಯವರ ಮನವರಿಕೆ ಮಾಡಿದರು. ನಂತರ ಮಾಧ್ಯಮ ಹಾಗೂ ಗಣ್ಯರ ಆಸನ ಹೊರತುಪಡಿಸಿ ಉಳಿದ ಕುರ್ಚಿಗಳಲ್ಲಿ ಪ್ರೇಕ್ಷಕರು ಕುಳಿತುಕೊಳ್ಳಲು ಸ್ಥಳೀಯ ಪೊಲೀಸರು ವ್ಯವಸ್ಥೆ ಮಾಡಿದರು. ಮೂರು ತಾಸಿನ ನಂತರ ಪ್ರೇಕ್ಷಕರು ಆಗಮಿಸಿದ ನಂತರ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಿ ವೇದಿಕೆ ಆಗಮಿಸಿ ಕಾರ್ಯಕ್ರಮ ಉದ್ಘಾಟಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next