Advertisement

ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ: ಬ್ರಹ್ಮ ರಥೋತ್ಸವ ಸಂಪನ್ನ

08:56 AM Dec 01, 2019 | sudhir |

ತೆಕ್ಕಟ್ಟೆ: ಸಾವಿರಾರು ಭಕ್ತರ ಸಮ್ಮುಖದಲ್ಲಿ ಪುರಾಣ ಪ್ರಸಿದ್ಧ ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವರ ಬ್ರಹ್ಮ ರಥೋತ್ಸವ ಶನಿವಾರ ವಿಜೃಂಭಣೆಯಿಂದ ನೆರವೇರಿತು.

Advertisement

ಬ್ರಹ್ಮ ರಥೋತ್ಸವದ ಪ್ರಯುಕ್ತ ಶ್ರೀ ದೇಗುಲವನ್ನು ಸಂಪೂರ್ಣ ಹೂವಿನಿಂದ ಅಲಂಕರಿಸಿದ್ದು, ಮುಂಜಾನೆಯಿಂದಲೂ ಸಾವಿರಾರು ಭಕ್ತರು ಶ್ರೀ ದೇಗುಲಕ್ಕೆ ಆಗಮಿಸಿ ವಿಶೇಷ ಪೂಜೆಯನ್ನು ಸಲ್ಲಿಸುವ ಮೂಲಕ ಶ್ರೀ ದೇವರ ಕೃಪೆಗೆ ಪಾತ್ರರಾದರು.

ಬ್ರಹ್ಮ ರಥೋತ್ಸವದ ಸಂದರ್ಭದಲ್ಲಿ ಪಿಲಿಕಿಲಿ ತಂಡಗಳಿಂದ ಆಕರ್ಷಕ ಕೀಲು ಕುದುರೆ, ಗೊಂಬೆಗಳ ನೃತ್ಯ, ವಿವಿಧ ವೇಷಗಳು, ತಟ್ಟಿರಾಯ, ಚಂಡೆ ವಾದನ ತಂಡಗಳಿಂದ ನಡೆದ ಚಂಡೆವಾದನ ಒಂದೆಡೆಯಾದರೆ ಮತ್ತೂಂದೆಡೆಯಲ್ಲಿ ಅಲ್ಲಲ್ಲಿ ಸೆಲ್ಫಿ ಪ್ರಿಯರು ಮೊಬೈಲ್‌ನಲ್ಲಿ ದೃಶ್ಯವಳಿಗಳನ್ನು ಸೆರೆ ಹಿಡಿಯುತ್ತಿರುವ ದೃಶ್ಯ ಸಾಮಾನ್ಯವಾಗಿಕಂಡು ಬಂತು.

ಈ ಸಂದರ್ಭ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಅನುವಂಶಿಕ ಆಡಳಿತ ಧರ್ಮದರ್ಶಿ ಕೆ. ಶ್ರೀರಮಣ ಉಪಾಧ್ಯಾಯ, ಆನುವಂಶಿಕ ಧರ್ಮದರ್ಶಿಗಳಾದ ಕೆ. ಸೂರ್ಯನಾರಾಯಣ ಉಪಾಧ್ಯಾಯ , ಕೆ.ವಿಟuಲ ಉಪಾಧ್ಯಾಯ ಹಾಗೂ ಆನುವಂಶಿಕ ಪರ್ಯಾಯ ಅರ್ಚಕರಾಗಿ ಕೆ. ಚಂದ್ರಕಾಂತ್‌ ಉಪಾಧ್ಯಾಯ ಮತ್ತು ಸಹೋದರ, ಮ್ಯಾನೇಜರ್‌ ನಟೇಶ್‌ ಕಾರಂತ್‌ ತೆಕ್ಕಟ್ಟೆ ಹಾಗೂ ಸಿಬಂದಿ ಉಪಸ್ಥಿತರಿದ್ದರು.

Advertisement

ವಿಶೇಷ ಕೇಸರಿ ಪಾನಕ ವಿತರಣೆ
ಭಕ್ತರ ದಣಿವು ನೀಗಿಸುವ ನಿಟ್ಟಿನಲ್ಲಿ ಶಿವಮೊಗ್ಗದ ದಿ| ಅಡ್ಡೆ ನಾರಾಯಣ ಭಟ್‌ ಮತ್ತು ಮಕ್ಕಳು ಸುಮಾರು 2.5 ಕ್ವಿಂಟಾಲ್‌ಗ‌ೂ ಅಧಿಕ ಸಕ್ಕರೆಯ ಕೇಸರಿ ಪಾನಕವನ್ನು ವಿತರಿಸಿದರು. ಕಳೆದ ಐವತ್ತು ವರ್ಷಗಳಿಂದಲೂ ಇವರು ಈ ಕಾರ್ಯ ನಡೆಸಿಕೊಂಡು ಬರುತ್ತಿದ್ದಾರೆ ಎನ್ನಲಾಗಿದೆ.

ಸಿಸಿ ಕೆಮರಾ ಕಣ್ಗಾವಲು
ಬ್ರಹ್ಮ ರಥೋತ್ಸವಕ್ಕೆ ಜಿಲ್ಲೆಯ ವಿವಿಧೆಡೆಯಿಂದ ಅಪಾರ ಭಕ್ತ ಸಮೂಹವೇ ಸನ್ನಿಧಿ ಹರಿದು ಬರುವುದರಿಂದ ದೇಗುಲ ಒಳಪ್ರಾಕಾರ ಹಾಗೂ ರಥ ಬೀದಿಯಲ್ಲಿ ಪೊಲೀಸ್‌ ಇಲಾಖೆ ವಿಶೇಷವಾಗಿ ಕೆಮರಾ ಅಳವಡಿಸಿ ಅನುಮಾನಾಸ್ಪದ ವ್ಯಕ್ತಿಗಳ ಚಲನ ವಲನದ ಮೇಲೆ ತೀವ್ರ ನಿಗಾ ವಹಿಸುವ ಕಾರ್ಯ ನಡೆಸಿರುವುದಾಗಿ ಕುಂದಾಪುರ ಠಾಣಾಧಿಕಾರಿ ಹರೀಶ್‌ ತಿಳಿಸಿದ್ದಾರೆ.

ಚಿತ್ರ ; ಲೋಕೇಶ್ ಆಚಾರ್ಯ ತೆಕ್ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next