Advertisement

ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಗೋವಿನ ನಾಗಭಕ್ತಿ

11:39 PM Feb 27, 2020 | Sriram |

ಕುಂಭಾಸಿ: ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ನಿತ್ಯ ಬ್ರಾಹ್ಮಿ ಮುಹೂರ್ತದಲ್ಲಿಯೇ ನಡೆ ಯುವ ಪೂಜಾ ಕೈಂಕರ್ಯದ ವೇಳೆಗೆ ಗೋವೊಂದು ಶ್ರೀ ನಾಗ ದೇವರ ಕಟ್ಟೆಯ ಎದುರಿನ ಮೆಟ್ಟಿಲನ ಮಧ್ಯದಲ್ಲಿ ಶಿರಬಾಗಿ ನಮಿಸುತ್ತಿದೆ.

Advertisement

ಕಳೆದ ಹಲವು ದಿನಗಳಿಂದಲೂ ನಡೆ ಯುತ್ತಿರುವ ಈ ವಿದ್ಯಮಾನ ನೋಡಿದ ದೇಗುಲಕ್ಕೆ ಆಗಮಿಸುವ ಭಕ್ತರು ಬೆರಗಾಗಿದ್ದಾರೆ.

ಶಿರಭಾಗಿ ನಮಿಸುವ ಗೋವು
ಪ್ರತಿ ದಿನ ಮುಂಜಾನೆ ದೇವಳದ ಶ್ರೀನಾಗ ದೇವರ ಕಟ್ಟೆಯಲ್ಲಿ ಎದುರು ಬಂದು ನಿಲ್ಲುವ ಈ ಗೋವು ಅಪರಾಹ್ನದ ದೇಗುಲದಲ್ಲಿ ನಡೆಯುವ ಮಹಾಪೂಜೆಯ ವರೆಗೂ ಕೂಡಾ ನಿಂತ ಸ್ಥಳವನ್ನು ಬಿಟ್ಟು ತೆರಳದೆ ಇರುವುದನ್ನು ನೋಡಿದ ಭಕ್ತರು ಬಾಳೆಹಣ್ಣು , ಹೂ ನೀಡಿ ನಮಸ್ಕರಿಸುವ ದೃಶ್ಯಗಳು ಸಾಮಾನ್ಯವಾಗಿದೆ.

ವೀಡಿಯೋ ವೈರಲ್‌
ಭಕ್ತರು ದೇಗುಲಕ್ಕೆ ಆಗಮಿಸಿ ಶ್ರೀದೇವರ ದರ್ಶನ ಪಡೆದು ಹಿಂದಿ ರುಗುವ ಸಂದರ್ಭ ಮೊಬೈಲ್‌ನಲ್ಲಿ ಸೆರೆಹಿಡಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ದೇವಾಲಯದ ಪರಿಸರಗಳು ಗೋವುಗಳಿಗೆ ಪ್ರಶಸ್ತವಾದ ಸ್ಥಳವಾಗಿದ್ದು ಇಲ್ಲಿ ಸುತ್ತಮುತ್ತಲ ಪರಿಸರದ ಗೋವುಗಳು ಇಲ್ಲಿನ ಹಣ್ಣು, ವಾಹನ ಪೂಜೆಯ ಸಂದರ್ಭದಲ್ಲಿ ಸಿಗುವ ತೆಂಗಿನಕಾಯಿ ಹಾಗೂ ಮಧ್ಯಾಹ್ನದ ಅನ್ನಪ್ರಸಾದವನ್ನು ಅರಸಿ ಬರುತ್ತವೆ. ಆದರೆ ಕಳೆದ ಹಲವು ದಿನಗಳಿಂದಲೂ ಗೋವೊಂದು ನಾಗ ದೇವರ ಕಟ್ಟೆಯ ಎದುರು ನಿಲ್ಲುತ್ತಿರುವುದು ಆಶ್ಚರ್ಯ ಮೂಡಿಸಿದೆ.
-ಕೆ.ಶ್ರೀರಮಣ ಉಪಾಧ್ಯಾಯ, ಆಡಳಿತ ಧರ್ಮದರ್ಶಿಗಳು, ಆನೆಗುಡ್ಡೆ ಶ್ರೀ ವಿನಾಯಕ ದೇಗುಲ

Advertisement

ಕಳೆದ ಹಲವು ದಿನಗಳಿಂದಲೂ ದೇಗುಲದ ಶ್ರೀ ನಾಗ ದೇವರ ಕಟ್ಟೆಯ ಎದುರಿನ ಮೆಟ್ಟಿಲಿನ‌ ಮಧ್ಯದಲ್ಲಿ ಶಿರಭಾಗಿ ನಮಿಸುವ ಭಂಗಿಯಲ್ಲಿ ನೋಡುವುದೇ ಒಂದು ವಿಶೇಷ. ಪ್ರತಿ ದಿನ ಮುಂಜಾನೆ ಕ್ಲಪ್ತ ಸಮಯಕ್ಕೆ ಆಗಮಿಸುವ ಗೋವು ಮಧ್ಯಾಹ್ನದ ವರೆಗೂ ಕೂಡಾ ನಿಂತ ಜಾಗದಲ್ಲಿ ಯೇ ತಟಸ್ಥವಾಗಿ ನಿಲ್ಲುತ್ತಿದೆ. ಇದನ್ನು ನೋಡಿದ ಅದೆಷ್ಟೋ ಭಕ್ತರು ಹಣ್ಣು ನೀಡಿ ನಮಸ್ಕರಿಸುವ ಜತೆಗ ೆಈ ಅಪರೂಪದ ಕ್ಷಣವನ್ನು ತಮ್ಮ ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿದ್ದಾರೆ.
– ಜಗದೀಶ್‌ ಸಾಲಿಗ್ರಾಮ, ದೇಗುಲದ ಸೆಕ್ಯೂರಿಟಿ ಗಾರ್ಡ್‌

Advertisement

Udayavani is now on Telegram. Click here to join our channel and stay updated with the latest news.

Next