Advertisement

ಶಸ್ತ್ರಚಿಕಿತ್ಸೆಗೆ ಒಳಗಾದ ಆ್ಯಂಡಿ ಮರ್ರೆ

04:40 AM Jan 30, 2019 | Team Udayavani |

ಲಂಡನ್‌: ಮಾಜಿ ನಂ. ವನ್‌ ಇಂಗ್ಲೆಂಡ್‌ನ‌ ಆ್ಯಂಡ್ರಿ ಮರ್ರೆ ಮಂಗಳವಾರ ಮತ್ತೆ ಸೊಂಟದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

Advertisement

ಕಳೆದ ವರ್ಷ ಸೊಂಟ ನೋವಿಗೆ ಶಸ್ತ್ರಚಿಕಿತ್ಸೆ ಪಡೆದ ಬಳಿಕ ಫಾರ್ಮ್ಗೆ ಬರಲು ಸಾಕಷ್ಟು ಕಷ್ಟ ಅನುಭವಿಸಿದ ಮರ್ರೆ ಆಸ್ಟ್ರೇಲಿಯನ್‌ ಓಪನ್‌ ಕೂಟದಲ್ಲಿ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದರು. ಈ ಸೋಲಿನ ಆಘಾತದಿಂದ ಟೆನಿಸ್‌ಗೆ ನಿವೃತ್ತಿ ಹೇಳುತ್ತೇನೆ ಎಂದು ತಿಳಿಸಿದ್ದರು.

31 ವರ್ಷದ ಮರ್ರೆ ಶಸ್ತ್ರಚಿಕಿತ್ಸೆಯ ವಿಷಯವನ್ನು ಟ್ವೀಟರ್‌ನಲ್ಲಿ ಪ್ರಕಟಿಸಿ “ಸೊಂಟದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಸ್ವಲ್ಪ ಸಮಾಧಾನವಾಗಿದೆ. ಆದಷ್ಟು ಬೇಗ ಶಮನಗೊಳ್ಳುತ್ತದೆ ಎಂದು ನಂಬಿದ್ದೇನೆ’ ಎಂದು ಮರ್ರೆ ಬರೆದುಕೊಂಡಿದ್ದಾರೆ.

ಮೂರು ಬಾರಿಯ ಗ್ರ್ಯಾನ್‌ಸ್ಲಾಮ್‌ ವಿಜೇತ ಮರ್ರೆ  2018ರ ಜನವರಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಜೂನ್‌ನಲ್ಲಿ ಮತ್ತೆ ಟೆನಿಸ್‌ ಕೋರ್ಟ್‌ಗೆ ಮರಳಿದ ಅವರು ಒಟ್ಟು 15 ಪಂದ್ಯಗಳನ್ನು ಆಡಿದ್ದಾರೆ.  ಮರ್ರೆ ಮುಂದಿನ ತಿಂಗಳು ನಡೆಯಲಿರುವ ಮರ್ಸಿಲ್ಲೆ ಓಪನ್‌ನಲ್ಲಿ ಪಾಲ್ಗೊಳ್ಳಬೇಕಾಗಿತ್ತು. ಆದರೆ ಕಳೆದ ವಾರ ಈ ಕೂಟದಿಂದ ಹಿಂದೆ ಸರಿಯುವ ನಿರ್ಧಾರ ಪ್ರಕಟಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next