Advertisement

ಟೆನಿಸ್‌ ವಿದಾಯದತ್ತ ಆ್ಯಂಡಿ ಮರ್ರೆ

12:30 AM Jan 12, 2019 | Team Udayavani |

ಮೆಲ್ಬರ್ನ್: ಸೊಂಟ ನೋವಿನಿಂದ ಬಳಲುತ್ತಿರುವ ವಿಶ್ವದ ಮಾಜಿ ನಂ. ವನ್‌ ಟೆನಿಸಿಗ, ಬ್ರಿಟನ್ನಿನ ಆ್ಯಂಡಿ ಮರ್ರೆ “ಆಸ್ಟ್ರೇಲಿಯನ್‌ ಓಪನ್‌’ ಕೂಟದ ಆನಂತರ ಟೆನಿಸ್‌ಗೆ ವಿದಾಯ ಹೇಳುವುದಾಗಿ ತಿಳಿಸಿದ್ದಾರೆ.

Advertisement

ವಿಂಬಲ್ಡನ್‌ ಕೂಟದ ಬಳಿಕ ನಿವೃತ್ತಿ ಹೇಳುವ ಯೋಜನೆಯಲ್ಲಿದ್ದ 3 ಬಾರಿಯ ಗ್ರ್ಯಾನ್‌ಸ್ಲಾಮ್‌ ಚಾಂಪಿಯನ್‌ ಮರ್ರೆ, ಆಸ್ಟ್ರೇಲಿಯನ್‌ ಓಪನ್‌ ತನ್ನ ಕೊನೆಯ ಕೂಟ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಬಹಳ ಭಾವುಕರಾಗಿ ಗೋಚರಿಸಿದರು.

ಸೊಂಟ ನೋವಿನೊಂದಿಗೆ ಸೆಣಸಾಟ
“ಸೊಂಟ ನೋವಿನೊಂದಿಗೆ ಸೆಣಸಾಡುತ್ತಿದ್ದೇನೆ. ಮುಂದಿನ ನಾಲ್ಕೈದು ತಿಂಗಳು ಆಡಲು ಸಾಧ್ಯವೇ ಎಂಬ ಬಗ್ಗೆ ನನಗೆ ತಿಳಿದಿಲ್ಲ. ನೋವು ತೀರಾ ಹೆಚ್ಚಾಗುತ್ತಿದೆ. ಹೀಗಾಗಿ ಆಟವನ್ನು ಮುಂದುವರಿಸಲು ನನ್ನಿಂದ ಸಾಧ್ಯವಿಲ್ಲ. ಈ ನೋವು ನನಗೆ ಸ್ಪರ್ಧಿಸಲು, ತರಬೇತಿ ಪಡೆಯಲು ಬಿಡುತ್ತಿಲ್ಲ. ಇದು ಯಾವಾಗ ಶಮನವಾಗುವುದೆಂದೇ ನನಗೆ ತಿಳಿದಿಲ್ಲ. ಹೀಗಾಗಿ ನಿವೃತ್ತಿ ನಿರ್ಧಾರ ತೆಗೆದುಕೊಂಡಿದ್ದೇನೆ. ವಿಂಬಲ್ಡನ್‌ ವರೆಗೆ ಮುಂದುವರಿಯಲು ಸಾಧ್ಯವೇ ಎಂದು ಗಮನ ಹರಿಸುತ್ತೇನೆ’ ಎಂದು ಮರ್ರೆ ಹೇಳಿದರು. ಅವರು “ಮೆಲ್ಬರ್ನ್ ಪಾರ್ಕ್‌’ನಲ್ಲಿ 5 ಸಲ ರನ್ನರ್‌ ಅಪ್‌ ಆಗಿದ್ದಾರೆ.

ಮರ್ರೆ ಒಂದು ವರ್ಷದ ಹಿಂದೆ ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಕಳೆದ ಜೂನ್‌ನಲ್ಲಿ ಮತ್ತೆ ಟೆನಿಸಿಗೆ ಮರಳಿದರೂ 2018 ಋತುವಿನಲ್ಲಿ ಪೂರ್ತಿಯಾಗಿ ಆಡಲು ಸಾಧ್ಯವಾಗಲಿಲ್ಲ.

ಸೋಮವಾರ ಆರಂಭವಾಗಲಿರುವ “ಆಸ್ಟ್ರೇಲಿಯನ್‌ ಓಪನ್‌’ ಟೂರ್ನಿಯ ಮೊದಲ ಪಂದ್ಯದಲ್ಲಿ ಮರ್ರೆ ಸ್ಪೇನ್‌ನ ರಾಬರ್ಟೊ ಬಟಿಸ್ಟ ಅಗುಟ್‌ ಅವರನ್ನು ಎದುರಿಸಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next