ಸ್ಟಟ್‌ಗಾರ್ಟ್: ವಿಶ್ವದ ಮಾಜಿ ನಂ.1 ಆಟಗಾರ, ಬ್ರಿಟನ್ನಿನ ಆ್ಯಂಡಿ ಮರ್ರೆ ಬಹಳ ಕಾಲದ ಬಳಿಕ ದೊಡ್ಡ ಗೆಲುವನ್ನು ಒಲಿಸಿಕೊಂಡಿದ್ದಾರೆ.
ಸ್ಟಟ್‌ಗಾರ್ಟ್‌ನಲ್ಲಿ ನಡೆಯುತ್ತಿರುವ “ಬಾಸ್ ಓಪನ್’ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ಗ್ರೀಸ್‌ನ ಸ್ಟೆಫನಸ್ ಸಿಸಿಪಸ್ ಅವರನ್ನು 7-6 (7-4), 6-3 ಅಂತರದಿಂದ ಮಣಿಸಿದರು.
ಇದು 2016ರ ಬಳಿಕ ವಿಶ್ವದ ನಂಬರ್ ಐದರೊಳಗಿನ ಆಟಗಾರರ ವಿರುದ್ಧ ಮರ್ರೆ ಸಾಧಿಸಿದ ಮೊದಲ ಗೆಲುವು. ಕೊನೆಯ ಸಲ 2016ರ ಎಟಿಪಿ ಫೈನಲ್ಸ್‌ನಲ್ಲಿ ನೊವಾಕ್ ಜೊಕೋವಿಕ್ ಅವರನ್ನು ಮಣಿಸಿದ್ದರು.
ಸೆಮಿಫೈನಲ್‌ನಲ್ಲಿ ಆ್ಯಂಡಿ ಮರ್ರೆ ಎದುರಾಳಿ ಆಸ್ಟ್ರೇಲಿಯದ ನಿಕ್ ಕಿರ್ಗಿಯೋಸ್. ಎದುರಾಳಿ ಮಾರ್ಟನ್ ಫುಸ್ಕೋವಿಕ್ಸ್ ಕ್ವಾರ್ಟರ್ ಫೈನಲ್ ಪಂದ್ಯದ ವೇಳೆ ಗಾಯಾಳಾಗಿ ಹಿಂದೆ ಸರಿದ ಕಾರಣ ಕಿರ್ಗಿಯೋಸ್‌ಗೆ ಮುನ್ನಡೆ ಲಭಿಸಿತು.
ಆಗ ಕಿರ್ಗಿಯೋಸ್ 7-6 (7-3), 3-0 ಲೀಡ್‌ನಲ್ಲಿದ್ದರು.ಇಟಲಿಯ ಮ್ಯಾಟಿಯೊ ಬರೆಟಿನಿ ಕೂಡ ಸೆಮಿಫೈನಲ್ ತಲುಪಿದ್ದಾರೆ. ಅವರು ತಮ್ಮದೇ ದೇಶದ ಲೊರೆಂಜೊ ಸೊನೆಗೊ ವಿರುದ್ಧ 3-6, 6-3, 6-4 ಅಂತರದ ಗೆಲುವು ಸಾಧಿಸಿದರು.