ನವದೆಹಲಿ: ಭಾರತದಲ್ಲಿ ಆ್ಯಂಡ್ರಾಯ್ಡ್ ಫೋನ್‌ಗಳಲ್ಲಿ ತನ್ನ ಪ್ರಾಬಲ್ಯ ದುರ್ಬಳಕೆ ಮಾಡಿಕೊಳ್ಳುತ್ತಿರುವ ವಿಚಾರದಲ್ಲಿ ಹಗ್ಗ-ಜಗ್ಗಾಟ ನಡೆಸುತ್ತಿದ್ದ ಟೆಕ್ ದೈತ್ಯ ಗೂಗಲ್ ಕಡೆಗೂ ಮಣಿದಿದೆ. ಭಾರತದ ಆ್ಯಂಡ್ರಾಯ್ಡ್ ಫೋನ್‌ಗಳಲ್ಲಿನ ತನ್ನ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳನ್ನು ಘೋಷಿಸಿದೆ.
ಆ್ಯಂಡ್ರಾಯ್ಡ್ ವ್ಯವಸ್ಥೆ ಹೊಂದಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ವಿಡಿಯೋ ಬ್ರೌಸಿಂಗ್, ವೆಬ್ ಸರ್ಚಿಂಗ್, ವಿಡಿಯೋ ಹೋಸ್ಟಿಂಗ್‌ನಂಥ ಎಲ್ಲ ಕಾರ್ಯಾಚರಣಗಳಿಗೂ ಗೂಗಲ್ ಅಪ್ಲಿಕೇಶನ್‌ಗಳನ್ನೇ ಬಳಕೆ ಮಾಡುವ ಆಯ್ಕೆ ನೀಡಿತ್ತು. ಫೋನ್ ತಯಾರಕರ ಜತೆಗೆ ಏಕಪಕ್ಷೀಯ ಒಪ್ಪಂದದ ಮೂಲಕ, ಆ್ಯಂಡ್ರಾಯ್ಡ್ ಫೋನ್‌ಗಳಲ್ಲಿ ಗೂಗಲ್‌ನ ಅಪ್ಲಿಕೇಶನ್‌ಗಳ ಪ್ರಾಬಲ್ಯ ಖಚಿತಪಡಿಸಿಕೊಳ್ಳಲು ಸಂಸ್ಥೆ ಪ್ರಯತ್ನಿಸಿತ್ತು.
ಭಾರತದಲ್ಲಿ ಶೇ.97ರಷ್ಟು ಸ್ಮಾರ್ಟ್‌ಫೋನ್‌ಗಳು ಆ್ಯಂಡ್ರಾಯ್ಡ್ ವ್ಯವಸ್ಥೆಯನ್ನು ಹೊಂದಿದೆ. ಬಳಕೆದಾರರಿಗೆ ಬೇರೆ ಆಯ್ಕೆಗಳನ್ನು ನೀಡದ್ದರಿಂದ ಗೂಗಲ್ ಮೇಲೆ ಅವಲಂಬಿತವಾಗುವಂತಾಗಿತ್ತು. ಪ್ರಾಬಲ್ಯ ದುರ್ಬಳಕೆ ಎಂದು ಗಮನಿಸಿದ್ದ ಭಾರತದ ಸ್ಪರ್ಧಾತ್ಮಕ ಆಯೋಗ (ಸಿಸಿಐ), ಗೂಗಲ್‌ಗೆ 1,337 ಕೋಟಿ ರೂ. ದಂಡ ವಿಧಿಸಿತ್ತು. ದಂಡ ಪ್ರಶ್ನಿಸಿ, ಸುಪ್ರೀಂ ಮೆಟ್ಟಿಲೇರಿದ್ದ ಗೂಗಲ್‌ಗೆ ಹಿನ್ನಡೆಯಾಗಿತ್ತು. ಬಳಿಕ ಈಗ ಬದಲಾವಣೆಯನ್ನು ಘೋಷಿಸಿದೆ.
ಬದಲಾವಣೆ ಏನು?
ಆ್ಯಂಡ್ರಾಯ್ಡ್ ಫೋನ್ ಬಳಕೆದಾರರಿಗೆ ತಮಗೆ ಇಷ್ಟ ಬಂದ ಸರ್ಚ್ ಇಂಜಿನ್ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡುವುದರ ಜತೆಗೆ ತನ್ನ ಅಪ್ಲಿಕೇಶನ್‌ಗಳಿಗೆ ಇನ್‌ಸ್ಟಾಲೇಶನ್‌ಗೆ ಮುಂಚೆಯೇ ಪ್ರತ್ಯೇಕ ಪರವಾನಗಿ ಮಾಡಿಕೊಳ್ಳುವ ಅವಕಾಶವನ್ನೂ ಮೊಬೈಲ್ ತಯಾರಕರಿಗೆ ನೀಡಿದೆ.