ಆಂಧ್ರಪ್ರದೇಶ : 21 ವರ್ಷದ ಯುವತಿಯೊಬ್ಬಳು ಪರೀಕ್ಷೆ ಬರೆಯಲು ಪ್ರವಾಹದಿಂದ ತುಂಬಿದ್ದ ಚಂಪಾವತಿ ನದಿಯನ್ನು ಲೆಕ್ಕಿಸದೆ ಈಜಿ ಪರೀಕ್ಷೆ ಬರೆಯಲು ಬಂದ ಘಟನೆ ಆಂಧ್ರಪ್ರದೇಶದ ವಿಝಿಯಾನ ಗ್ರಾಮದಲ್ಲಿ ನಡೆದಿದೆ.
ಗಜಪತಿನಗರ ಮಂಡಲದ ಮರಿವಲಸ ಗ್ರಾಮದ ನಿವಾಸಿಯಾದ ತಡ್ಡಿ ಕಲಾವತಿ ಎಂಬ ಯುವತಿಯೇ ಈ ಸಾಹಸ ಮಾಡಿರುವವರು.
ಇಂದು (ಶನಿವಾರ) ನಡೆಯಬೇಕಿದ್ದ ಪರೀಕ್ಷೆಗೆ ಹಾಜರಾಗಲೆಂದು ಜೀವವನ್ನೇ ಪಣಕ್ಕಿಟ್ಟು ಶುಕ್ರವಾರ ಕಲಾವತಿ ತನ್ನ ಇಬ್ಬರು ಸಹೋದರರ ನೆರವಿನೊಂದಿಗೆ ಪ್ರವಾಹಕ್ಕೆ ಸಿಲುಕಿದ ಚಂಪಾವತಿ ನದಿಯನ್ನು ದಾಟಿದ್ದಾಳೆ.
ಯುವತಿ ತನ್ನ ಸಹೋದರರೊಂದಿಗೆ ನದಿ ದಾಟುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಭಾರಿ ಮೆಚ್ಚುವೆ ವ್ಯಕ್ತವಾಗಿದೆ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ, ಉತ್ತರ ಕರಾವಳಿ ಹಲವಾರು ನದಿಗಳು ತುಂಬಿ ಹರಿಯುತ್ತಿವೆ. ಪ್ರವಾಹದಿಂದ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು ಆದ ಕಾರಣ ಯುವತಿ ನದಿ ದಾಟುವ ನಿರ್ಧಾರಕ್ಕೆ ಬಂದಿದ್ದಾರೆ ಇದಕ್ಕೆ ಆಕೆಯ ಸಹೋದರರು ಸಾತ್ ನೀಡಿದ್ದಾರೆ.
ಇದನ್ನೂ ಓದಿ : ಸೇಡಂ ಬಸ್ ಡಿಪೋದಲ್ಲೇ ನಿರ್ವಾಹಕ ನೇಣು ಬಿಗಿದುಕೊಂಡು ಆತ್ಮಹತ್ಯೆ