Advertisement

ತಿರುಮಲದೊಡೆಯನಿಗೆ ‘ನವನೀತ ಸೇವೆ’ : ದೇಸಿ ಹಸುವಿನ ತಳಿಗಳನ್ನು ರಕ್ಷಿಸಲು ಟಿಟಿಡಿ ನಿರ್ಧಾರ

12:45 PM Aug 08, 2021 | Team Udayavani |

ವಿಶಾಖಪಟ್ಟಣಂ : ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ದೇಸಿ ಹಸುವಿನ ತಳಿಗಳನ್ನು ರಕ್ಷಿಸಲು ಮತ್ತು ಹಸುವಿನ ಉತ್ಪನ್ನಗಳೊಂದಿಗೆ ಸಾವಯವ ಕೃಷಿಯನ್ನು ಉತ್ತೇಜಿಸುವ ಉದ್ದೇಶದಿಂದ ‘ನವನೀತ ಸೇವೆ’ ಪರಿಚಯಿಸುವ ನಿಟ್ಟಿನಲ್ಲಿ ಯೋಜಿಸುತ್ತಿರುವುದಾಗಿ ವರದಿ ತಿಳಸಿದೆ.

Advertisement

ಈ ಬಗ್ಗೆ ಸುದ್ದಿ ಸಂಸ್ಥೆ ಟೈಮ್ಸ್ ಆಫ್ ಇಂಡಿಯಾಗೆ ಪ್ರತಿಕ್ರಿಯಿಸಿದ ಟಿಟಿಡಿಯ ಅಧ್ಯಕ್ಷ ಮತ್ತು ಅಧಿಕಾರಿ ಕೆಎಸ್ ಜವಾಹರ್ ರೆಡ್ಡಿ,   ದೇಸಿ ಹಸುವಿನ ತುಪ್ಪದಿಂದಲೇ ವೆಂಕಟೇಶ್ವರ ದೇವರಿಗೆ ಅರ್ಪಿಸುವ ಎಲ್ಲಾ ನೈವೇದ್ಯಂ (ಆಹಾರ ನೈವೇದ್ಯ) ವನ್ನು ತಯಾರಿಸುವ ಗುರಿಯನ್ನು ದೇವಾಲಯವು ಹೊಂದಿದೆ. ಇದರೊಂದಿಗೆ ಸಾವಯವ ಕೃಷಿಗೆ ಉತ್ತೇಜಿಸುವ ನಿಟ್ಟಿನಲ್ಲಿಯೂ ದೇವಸ್ಥಾನದ ಸಮಿತಿ ‘ನವನೀತ ಸೇವೆ’ ಯೋಜನೆಯನ್ನು ಆರಂಭಿಸಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಶಕೀಬ್ ಅಲ್ ಹಸನ್ ರ ಒಂದು ಓವರ್ ನಲ್ಲಿ ಐದು ಸಿಕ್ಸರ್ ಚಚ್ಚಿದ ಡ್ಯಾನ್ ಕ್ರಿಶ್ಚಿಯನ್

ನೈವೇದ್ಯವನ್ನು ತಯಾರಿಸಲು ನಮಗೆ ಪ್ರತಿದಿನ ಕನಿಷ್ಠ 30 ಕೆಜಿ ತುಪ್ಪ ಬೇಕು, ಇದಕ್ಕೆ 1000 – 1,200 ಲೀಟರ್ ಹಾಲು ಬೇಕಾಗುತ್ತದೆ. ‘ನವನೀತ ಸೇವೆ’ ಮೂಲಕ, ದೇಸಿ ಹಸುಗಳಿಂದ ಸಂಗ್ರಹಿಸಿದ ಹಾಲನ್ನು ನೈವೇದ್ಯಕ್ಕೆ ಬಳಸುವ ಗುರಿ ಹೊಂದಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಈ ಉದ್ದೇಶಕ್ಕಾಗಿ ದೇಸಿ ಹಸುಗಳನ್ನು ಭಕ್ತಾದಿಗಳಿಗೆ ದಾನ ಮಾಡಲು ಕರೆ ನೀಡಿದ ಅವರು, “ಈ ‘ನವನೀತ ಸೇವೆ’ ಗೆ ದೇಶಾದ್ಯಂತದ ಜನರು ದೇವಸ್ಥಾನಕ್ಕೆ ಹಸುಗಳನ್ನು ದೇವರ ಹೆಸರಿನಲ್ಲಿ ದಾನ ಮಾಡಬಹುದು. ಈ ಮಹಾನ್ ಕಾರ್ಯಕ್ಕೆ ಈಗಾಗಲೇ ಒಬ್ಬ ದಾನಿ, 25 ಗಿರ್ ಹಸುಗಳನ್ನು ದಾನ ಮಾಡಿದ್ದಾರೆ, ಈ ಯೋಜನೆಯನ್ನು ಶೀಘ್ರದಲ್ಲೇ ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸಲು ದೇವಸ್ಥಾನದ ಆಡಳಿತ ಮಂಡಳಿ ಕಾರ್ಯೋನ್ಮುಖವಾಗುತ್ತದೆ ಎಂದಿದ್ದಾರೆ.

Advertisement

ಇನ್ನು, ತಿರುಮಲ ಸುತ್ತಮುತ್ತಲಿನ ಪ್ರದೇಶಗಳನ್ನು ಮಾಲಿನ್ಯರಹಿತವಾಗಿಸಲು, ಇಂಧನ ಅವಲಂಬಿತ ವಾಹನಗಳನ್ನು ಬದಲಿಸಲು 35 ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಟಿಟಿಡಿ ಯೋಜಿಸುತ್ತಿದೆ.

ಹೆಚ್ಚುವರಿಯಾಗಿ, ಆಂಧ್ರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಎ ಪಿಎಸ್‌ ಆರ್‌ ಟಿಸಿ) ಬೆಟ್ಟದ ಪಟ್ಟಣಕ್ಕೆ ಹೋಗುವ ಅವಳಿ ಘಾಟ್ ರಸ್ತೆಗಳ ನಡುವೆ ಸಂಚರಿಸಲು 100 ಎಲೆಕ್ಟ್ರಿಕ್ ಬಸ್‌ ಗಳನ್ನು ಆರಂಭಿಸಲು ಸಿದ್ಧತೆ ನಡೆಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಉ. ಪ್ರ ಚುನಾವಣೆ : ರಾಜ್ಯಾದ್ಯಂತ ‘ಬೂತ್ ವಿಜಯ್ ಅಭಿಯಾನ’ ಅಡಿಯಲ್ಲಿ ಕಾರ್ಯಕ್ರಮ : ಬಿಜೆಪಿ  

Advertisement

Udayavani is now on Telegram. Click here to join our channel and stay updated with the latest news.

Next