ಅಮರಾವತಿ: ವಿಪಕ್ಷಗಳ ನಾಯಕರು ದೇಶದಲ್ಲಿ ಜಾತಿ ಗಣತಿಗೆ ಆಗ್ರಹಿಸುತ್ತಿದ್ದರೆ, ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು “ಕೌಶಲ ಗಣತಿ’ಗೆ ಮುಂದಾಗಿದ್ದಾರೆ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಕೌಶಲ ಗಣತಿ ಕಡತಕ್ಕೆ ಸಹಿಹಾಕಿದ್ದಾರೆ!
ಆಂಧ್ರ ಪ್ರದೇಶ ರಾಜ್ಯ ಕೌಶಲ ಅಭಿವೃದ್ಧಿ ನಿಗಮವು ಈ ಗಣತಿ ನಡೆಸಲಿದೆ. ವಿವಿಧ ಕೈಗಾರಿಕೆಗಳ ಅಸ್ತಿತ್ವದಲ್ಲಿರುವ ಕಾರ್ಯಪಡೆ ಮತ್ತು ಜನಸಂಖ್ಯಾ ಟ್ರೆಂಡ್‌ಗಳನ್ನು ಇದು ಒಳಗೊಂಡಿರುತ್ತದೆ.
ಯಾಕೆ ಕೌಶಲ ಗಣತಿ?: ಆಂಧ್ರ ಪ್ರದೇಶದಲ್ಲಿ ಹೆಚ್ಚುತ್ತಿ ರುವ ನಿರುದ್ಯೋಗವೇ ಕೌಶಲ ಗಣತಿ ಕೈಗೊಳ್ಳಲು ಪ್ರೇರಣೆ. ಇಡೀ ದೇಶದಲ್ಲೇ ಕೌಶಲ ಮತ್ತು ಉದ್ಯೋಗಿ ಯ ಮಧ್ಯೆ ಸಾಕಷ್ಟು ಅಂತರವಿದ್ದು, ಅದನ್ನು ತಗ್ಗಿಸುವು ದಕ್ಕಾಗಿ ಆಂಧ್ರ ಸರಕಾರವು ಕೌಶಲ ಗಣತಿ ಕೈಗೆತ್ತಿಕೊಂಡಿ ದೆ. ಅಲ್ಲದೇ ವಿವಿಧ ವಲಯಗಳ ಜನರ ಕೌಶಲ ಪತ್ತೆ ಹಚ್ಚುವುದು, ಕೌಶಲ ಮೌಲ್ಯ ಮಾಪನ, ನೀತಿ ನಿರೂಪಣೆ, ವೈಯಕ್ತಿಕ ಮಟ್ಟದಲ್ಲಿ ವ್ಯಕ್ತಿಗಳನ್ನು ಸಶಕ್ತಗೊಳಿಸಲು ಗಣತಿಯು ನೆರವಾಗಲಿದೆ ಎನ್ನಲಾಗುತ್ತಿದೆ.
ನಿರುದ್ಯೋಗ ಬಿಕ್ಕಟ್ಟು ಬಗೆಹರಿಸುವುದ ಲ್ಲ ದೇ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಈ ಗಣತಿ ನೆರವಾಗಲಿದೆ ಎಂಬುದು ಸರಕಾರದ ವಾದ.
ಗಣತಿ ಹೇಗೆ?: ವಿವಿಧ ಸಮೀಕ್ಷೆ, ಶಿಕ್ಷಣ, ಅನುಭವ, ತರಬೇತಿ ಮತ್ತು ಕೌಶಲ ಪ್ರಾವೀಣ್ಯ ಮಟ್ಟದ ಮಾಹಿತಿ ಕಲೆಹಾಕಿ ಕೌಶಲಗಳ ಪಟ್ಟಿ ಗುರುತಿಸಲಾಗುತ್ತದೆ.