Advertisement

Andhra Pradesh: ಬಂಧನ ವಿರೋಧಿಸಿ ಸೀಟಿ ಊದಿದ ಶಾಸಕ ನಂದಮೂರಿ ಬಾಲಕೃಷ್ಣ

12:36 AM Sep 23, 2023 | Team Udayavani |

ಅಮರಾವತಿ/ವಿಜಯವಾಡ: ಕೌಶಲಾ ಭಿವೃದ್ಧಿ ಮಂಡಳಿ ಹಗರಣದಲ್ಲಿ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಬಂಧನ ಖಂಡಿಸಿ ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಟಿಡಿಪಿ ಶಾಸಕ ನಂದಮೂರಿ ಬಾಲಕೃಷ್ಣ ಸೀಟಿ ಊದಿ ಗದ್ದಲ ಎಬ್ಬಿಸಿದ್ದಾರೆ. ಇದರ ಜತೆಗೆ ಅವರ ಪಕ್ಷದ ನಾಯಕರು ಕಲಾಪ ನಡೆಯಲು ಅವಕಾಶ ಕೊಡದೆ ಗಲಾಟೆ ಮಾಡಿದ್ದಾರೆ. ಹೀಗಾಗಿ ಅವರನ್ನೆಲ್ಲ ಗುರುವಾರ ಒಂದು ದಿನದ ಅವಧಿಗೆ ಕಲಾಪದಿಂದ ಅಮಾನತು ಮಾಡಲಾಗಿದೆ. ಶಿಕ್ಷೆಗೆ ಗುರಿಯಾದ ಶಾಸಕರ ಪೈಕಿ ಇಬ್ಬರು ವೈಎಸ್‌ಆರ್‌ಸಿಪಿಯ ಭಿನ್ನಮತೀಯ ಶಾಸಕರೂ ಸೇರಿದ್ದಾರೆ.

Advertisement

ಶಾಸಕ ನಂದಮೂರಿ ಬಾಲಕೃಷ್ಣ ಶುಕ್ರವಾರ ಕೂಡ ಸದನಕ್ಕೆ ಆಗಮಿಸಿ ಸೀಟಿ ಊದಿದ್ದಾರೆ. ಪ್ರಶ್ನೋತ್ತರ ವೇಳೆಯಲ್ಲಿ ಗದ್ದಲ ಎಬ್ಬಿಸಿದ್ದಕ್ಕೆ ಇಬ್ಬರನ್ನು ಅಮಾನತು ಮಾಡಲಾಗಿದೆ.

ಕಸ್ಟಡಿ ವಿಸ್ತರಣೆ: ಮತ್ತೂಂದೆಡೆ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಸಿಐಡಿಯಿಂದ ಬಂಧಿತರಾಗಿ ರುವ ಮಾಜಿ ಸಿಎಂ ಚಂದ್ರ ಬಾಬು ನಾಯ್ಡು ಅವರ ಕಸ್ಟಡಿಯನ್ನು ಇನ್ನೂ 2 ದಿನ ವಿಸ್ತರಿಸಲಾಗಿದೆ. ಇದೇ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್‌ ವಜಾ ಮಾಡಬೇಕು ಎಂದು ಕೋರಿದ್ದ ಅರ್ಜಿಯನ್ನು ಆಂಧ್ರಪ್ರದೇಶ ಹೈಕೋರ್ಟ್‌ ವಜಾ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next