ಆಂಧ್ರಪ್ರದೇಶ : ಆಕ್ಸಿಜನ್ ಪೂರೈಕೆಯಲ್ಲಿ ವ್ಯತ್ಯಯವಾದ ಪರಿಣಾಮ 11 ಜನ ಕೋವಿಡ್ ಸೋಂಕಿತರು ಸಾವನ್ನಪ್ಪಿರುವ ದುರಂತ ಘಟನೆ ಆಂಧ್ರ ಪ್ರದೇಶದಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ.
ಶ್ರೀ ವೆಂಕಟೇಶ್ವರ ರಾಮನಾರಾಯಣ ರೂಯಾ ಸರ್ಕಾರಿ ಆಸ್ಪತ್ರೆಯಲ್ಲಿ ಈ ಅವಘಡ ಸಂಭವಿಸಿದೆ. ಖಾಲಿಯಾಗಿದ್ದ ಆಕ್ಸಿಜನ್ ರಿಫೀಲಿಂಗ್ ಮಾಡುತ್ತಿದ್ದ ವೇಳೆ ಕೇವಲ 5 ನಿಮಿಷದ ಅವಧಿಯಲ್ಲಿ ಆಕ್ಸಿಜನ್ ಪೂರೈಕೆಯಲ್ಲಿ ವ್ಯತ್ಯಯವಾಗಿ ಈ ದುರಂತ ಸಂಭವಿಸಿದೆ ಎಂದು ಚಿತ್ತೋರ್ ಜಿಲ್ಲಾಧಿಕಾರಿ ಹರಿನಾರಾಯಣ ತಿಳಿಸಿದ್ದಾರೆ.
ರೋಗಿಗಳನ್ನು ಉಳಿಸಲು 30 ವೈದ್ಯರು ತಕ್ಷಣವೇ ಐಸಿಯುಗೆ ಧಾವಿಸಿದರು. ಐದು ನಿಮಿಷದಲ್ಲಿ ಮತ್ತೆ ಆಕ್ಸಿಜನ್ ಪುನಃ ಪೂರೈಕೆ ಪ್ರಾರಂಭಿಸಲಾಯಿತು ಎಂದು ಅವರು ತಿಳಿಸಿದ್ದಾರೆ.
ಇನ್ನು ಘಟನೆ ಕುರಿತು ಸಮಗ್ರ ತನಿಖೆಗೆ ಆದೇಶಿಸಿರುವ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ, ತಪ್ಪಿತಸ್ತರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.