Advertisement

ದೊಡ್ಡವಳ ಜೀವ ಉಳಿಸಲು10,000ರೂ.ಗೆ ಚಿಕ್ಕವಳ ಮಾರಾಟ : ಅಪ್ರಾಪ್ರೆ ಖರೀದಿಸಿ ಮದುವೆಯಾದ ಕೀಚಕ

08:38 PM Feb 27, 2021 | Team Udayavani |

ಆಂಧ್ರಪ್ರದೇಶ : ಬಡತನ ಎಂತಹ ನಿಕೃಷ್ಟ ಕೆಲಸಕ್ಕೂ ದೂಡುತ್ತೆ. ಹಾಗೂ ಹಣದ ಮದ ಎಂತಹ ನೀಚ ಕೃತ್ಯವನ್ನು ಮಾಡಿಸುತ್ತೆ ಎನ್ನುವುದಕ್ಕೆ ಆಂಧ್ರ ಪ್ರದೇಶದ ನೆಲ್ಲೂರಿನಲ್ಲಿ ನಡೆದ ಈ ಘಟನೆ ಜೀವಂತ ಸಾಕ್ಷಿಯಾಗಿದೆ.

Advertisement

ಮಗಳ ಚಿಕಿತ್ಸೆಗೆ ಹಣ ಹೊಂದಿಸಲು ಹೆಣಗಾಡುತ್ತಿದ್ದ ಬಡಕುಟುಂಬವೊಂದು ತಮ್ಮ ಮತ್ತೊಂದು ಮಗಳನ್ನ ಕೇವಲ 10,000 ರೂಪಾಯಿಗೆ ಮಾರಾಟ ಮಾಡಿದೆ. ಇವರ ಬಡತನ ಸ್ಥಿತಿಯನ್ನೇ ದುರುಪಯೋಗ ಪಡಿಸಿಕೊಂಡ 46 ವರ್ಷದ ಧುರುಳನೋರ್ವ 12 ವರ್ಷದ ಬಾಲೆಯನ್ನ ಖರೀದಿಸಿ ಮದುವೆಯಾಗಿದ್ದಾನೆ.

ದಿನಗೂಲಿ ಮಾಡಿಕೊಂಡು ಬದುಕಿನ ಬಂಡಿ ಸಾಗಿಸುತ್ತಿದ್ದ ಕುಟುಂಬ ದೊಡ್ಡ ಮಗಳ ಉಸಿರಾಟದ ಕಾಯಿಲೆಗೆ ಚಿಕಿತ್ಸೆ ಕೊಡಿಸಲೆಂದು 10,000 ರೂಪಾಯಿಗೆ ತನ್ನ12 ವರ್ಷದ ಮಗುವನ್ನು ಮಾರಾಟ ಮಾಡಿದೆ. ಇವರಿಂದ ಅಪ್ತಾಪ್ತೆಯನ್ನು ಖರೀದಿಸಿದ ಚಿನ್ನಾ ಸುಬ್ಬಯ್ಯ ಹೆಸರಿನ ಕೀಚಕ ಮರುದಿನವೇ ಏನೂ ಅರಿಯದ ಆ ಪುಟ್ಟ ಕಂದನ ಜತೆ ಮದುವೆಯಾಗಿ, ಸಂಬಂಧಿಕರ ಮನೆಗೆ ಕರೆದೊಯ್ದಿದ್ದಾನೆ.

ಭಯದಿಂದ ಕಣ್ಣೀರು ಹಾಕುತ್ತಿದ್ದ ಅಪ್ರಾಪ್ತೆಯಿಂದ ನಿಜ ಸಂಗತಿ ತಿಳಿದು, ಆತನ ಸಂಬಂಧಿಕರು ಸ್ಥಳೀಯ ಪಂಚಾಯಿತಿ ಗಮನಕ್ಕೆ ತಂದಿದ್ದಾರೆ. ಇವರಿಂದ ಮಾಹಿತಿ ಪಡೆದ ಮಕ್ಕಳ ಕಲ್ಯಾಣ ಇಲಾಖೆ ಆ ಬಾಲಕಿಯನ್ನು ರಕ್ಷಿಸಿದ್ದಾರೆ. ಜತೆಗೆ ಪ್ರಕರಣದ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next