ವಿಶಾಖಪಟ್ಟಣಂ: ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿ) ನಾಯಕಿ ಆರ್‌ಕೆ ರೋಜಾ ಅವರ ಕಾರಿನ ಮೇಲೆ ನಟ ಮತ್ತು ರಾಜಕಾರಣಿ ಪವನ್ ಕಲ್ಯಾಣ್ ಬೆಂಬಲಿಗರು ಶನಿವಾರ ವಿಶಾಖಪಟ್ಟಣಂ ವಿಮಾನ ನಿಲ್ದಾಣದ ಹೊರಗೆ ದಾಳಿ ನಡೆಸಿದ್ದಾರೆ.
ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷೆಯಾಗಿರುವ ರೋಜಾ ಅವರು, ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ಪ್ರಸ್ತಾಪಿಸಿದ ಯೋಜನೆಯನ್ನು ಬೆಂಬಲಿಸುವ ರ್‍ಯಾಲಿಯಲ್ಲಿ ಭಾಗವಹಿಸಲು ವೈಜಾಗ್‍ಗೆ ಬರುತ್ತಿದ್ದರು. ಈ ವೇಳೆ ಪವನ್ ಕಲ್ಯಾಣ್ ಬೆಂಬಲಿಗರು ರೋಜಾ ಅವರಿದ್ದ ಕಾರಿನ ಮೇಲೆ ದಾಳಿ ನಡೆಸಿದ್ದು, ಘಟನೆಯಲ್ಲಿ ರೋಜಾ ಅವರ ಚಾಲಕನ ತಲೆಗೆ ಗಾಯವಾಗಿದ್ದು, ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲದೆ ಜೋಗಿ ರಮೇಶ್ ಮತ್ತು ಟಿಟಿಡಿ ಅಧ್ಯಕ್ಷ ವೈ.ವಿ. ಸುಬ್ಬಾ ರೆಡ್ಡಿ ಅವರ ವಾಹನಗಳ ಮೇಲೂ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ.
ದಾಳಿ ನಡೆಸಿದವರು ಯಾರು ಎಂಬುದನ್ನು ಪತ್ತೆ ಹಚ್ಚಲು ವಿಮಾನ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿರುವುದಾಗಿ ಪೊಲಿಸರು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ರಾಜ್ಯ ಸಚಿವರು ಮತ್ತು ವೈಎಸ್‍ಆರ್‌ಸಿಪಿ ನಾಯಕರು ಪವನ್ ಕಲ್ಯಾಣ್ ವಿರುದ್ಧ ನೀಡಿದ್ದ ಹೇಳಿಕೆಯಿಂದ ರೊಚ್ಚಿಗೆದಿದ್ದ ಜನಸೇನಾ ಕಾರ್ಯಕರ್ತರು ಮತ್ತು ಪವನ್ ಕಲ್ಯಾಣ್ ಬೆಂಬಲಿಗರು ಈ ಕೃತ್ಯ ವೆಸಗಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಮಂಗಳೂರಿನಲ್ಲಿದ್ದ ಹೋವರ್‌ಕ್ರಾಫ್ಟ್ ಪಾಕ್ ಗಡಿಗೆ : ಕಮಾಂಡರ್ ಮನೋಜ್ ಬಾಡ್ಕರ್