Advertisement

ಜ.1ರಿಂದ ಆಂಧ್ರ ಹೈಕೋರ್ಟ್‌

06:00 AM Nov 06, 2018 | Team Udayavani |

ಹೊಸದಿಲ್ಲಿ:  ಆಂಧ್ರಪ್ರದೇಶಕ್ಕೆ ಪ್ರತ್ಯೇಕ ಹೈಕೋರ್ಟ್‌ ಒದಗಿಸಲು ಸುಪ್ರೀಂ ಕೋರ್ಟ್‌ ಗ್ರೀನ್‌ಸಿಗ್ನಲ್‌ ನೀಡಿದೆ.

Advertisement

ಜನವರಿ 1ರಂದು ಆಂಧ್ರದಲ್ಲಿ ಹೊಸ ಹೈಕೋರ್ಟ್‌ ಕಾರ್ಯಾರಂಭ ಮಾಡುವಂತೆ ಅಧಿಸೂಚನೆ ಹೊರಡಿಸಲು  ಸುಪ್ರೀಂ ಕೋರ್ಟ್‌ ಒಪ್ಪಿಗೆ ನೀಡಿದೆ. ಅಂದು ಕೊಂಡಂತೆ ನಡೆದರೆ, ಇದು ದೇಶದ 25ನೇ ಹೈಕೋರ್ಟ್‌ ಆಗಲಿದೆ. ರಾಜಧಾನಿ ಅಮರಾವತಿಯಲ್ಲಿನ ಜಸ್ಟಿಸ್‌ ಸಿಟಿ ಕಾಂಪ್ಲೆಕ್ಸ್‌ನಲ್ಲಿ ನೂತನ ಹೈಕೋರ್ಟ್‌ ಕಟ್ಟಡ ನಿರ್ಮಾಣವಾಗುವವರೆಗೆ ತಾತ್ಕಾಲಿಕ ಕಟ‚rಡವೊಂದರಲ್ಲಿ ಕಾರ್ಯಕಲಾಪ ನಡೆಯಲಿದೆ ಎಂದೂ ಸುಪ್ರೀಂ ತಿಳಿಸಿದೆ. 2014ರ ಜೂನ್‌ 2ರಂದು ಆಂಧ್ರಪ್ರದೇಶ ರಾಜ್ಯ ವಿಭಜನೆಯಾದ ಬಳಿಕ, ಹೈದರಾಬಾದ್‌ನಲ್ಲಿರುವ ಹೈಕೋರ್ಟ್‌ ಅನ್ನೇ ಆಂಧ್ರ ಮತ್ತು ತೆಲಂಗಾಣ ಎರಡೂ ರಾಜ್ಯಗಳು ನೆಚ್ಚಿಕೊಂಡಿದ್ದವು. 
 

Advertisement

Udayavani is now on Telegram. Click here to join our channel and stay updated with the latest news.

Next