Advertisement

ತೆಲಂಗಾಣದಲ್ಲಿ ಹೊಸ ಪಕ್ಷ ಕಟ್ಟಲು ಹೊರಟ ವೈಎಸ್ ಜಗನ್ ಮೋಹನ್ ರೆಡ್ಡಿ ಸಹೋದರಿ ವೈಎಸ್ ಶರ್ಮಿಳಾ

02:11 PM Apr 10, 2021 | Team Udayavani |

ಹೈದರಾಬಾದ್ : ತೆಲಂಗಾಣದಲ್ಲಿ ನೂತನ ಪಕ್ಷವೊಂದನ್ನು ಆರಂಭಿಸುವುದಾಗಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಸಹೋದರಿ ವೈ ಎಸ್ ಶರ್ಮಿಳಾ ಹೇಳುವುದರ ಮೂಲಕ ರಾಜ್ಯ ರಾಜಕಾರಣದಲ್ಲಿ ಬಹು ಕುತೂಹಲಕಾರಿ ಚರ್ಚಗೆ ವಿಷಯವಾಗಿದ್ದಾರೆ.

Advertisement

ಖಮ್ಮಂ ನಲ್ಲಿ ನಿನ್ನೆ(ಶುಕ್ರವಾರ,  ಏ 09) ನಡೆದ ಸಂಕಲ್ಪ ಸಭೆಯಲ್ಲಿ ಈ ವಿಚಾರವನ್ನು ಶರ್ಮಿಳಾ ಪ್ರಸ್ತಾಪಿಸಿದ್ದು, ಪಕ್ಷದ ಹೆಸರು, ಕಾರ್ಯಸೂಚಿ ಸೇರಿ ಇತ್ಯಾದಿ ವಿವರಗಳು ಇನ್ನಷ್ಟೇ ರಚಿಸಬೇಕಿದ್ದು, ಜುಲೈ 8 ರಂದು ಘೋಷಿಸುವುದಾಗಿ ತಿಳಿಸಿದ್ದಾರೆ.

ಓದಿ :  ನೈಟ್ ಕರ್ಫ್ಯೂ ಸಡಿಲಿಕೆ ಬಗ್ಗೆ ಸಿಎಂಗೆ ಮನವಿ ಸಲ್ಲಿಸಲಾಗುವುದು : ಶಾಸಕ ಡಾ.ಭರತ್ ಶೆಟ್ಟಿ

ಇನ್ನು, ಸರ್ಕಾರಿ ಉದ್ಯೋಗ ನೀಡುವುದಕ್ಕೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸದಿದ್ದಲ್ಲಿಏಪ್ರಿಲ್ 15 ರಿಂದ ಮೂರು ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಹೇಳಿದ್ದಾರೆ.

2023ರ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಶರ್ಮಿಳಾ ತೆಲಂಗಾಣ ರಾಜಕೀಯಕ್ಕೆ ಪ್ರವೇಶ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದು, ತೆಲಂಗಾಣ ರಾಜ್ಯದಲ್ಲಿ ರಾಜಕೀಯದ ಹೊಸ ಅಲೆಯ ಬಗ್ಗೆ ಕುತೂಹಲ ಹೆಚ್ಚಿಸಿದೆ.

Advertisement

ಇನ್ನು, ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶರ್ಮಿಳಾ,  ತೆಲಂಗಾಣದಲ್ಲಿ ಅಧಿಕಾರದಲ್ಲಿರುವ  ಚಂದ್ರಶೇಖರ್ ರಾವ್ ಅವರ ಸರ್ಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸುವುದಕ್ಕೆ ನಮ್ಮ ಪಕ್ಷದ ಅನಿವಾರ್ಯತೆ ಇದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ತೆಲಂಗಾಣ ರಾಜ್ಯದಲ್ಲಿ 2023ರಲ್ಲಿ 119 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

2018 ರ ವಿಧಾನಸಭಾ ಚುನಾವಣೆಯಲ್ಲಿ ತೆಲಂಗಾಣ ರಾಷ್ಟ್ರ ಸಮಿತಿಯು  88 ಸ್ಥಾನಗಳನ್ನು ಗಳಿಸುವ ಮೂಲಕ ವಿಜಯಶಾಲಿಯಾಗಿ ಹೊರಹೊಮ್ಮಿತ್ತು.

ಸದ್ಯ, ತೆಲಂಗಾಣ ರಾಜಕೀಯ ಪಡಸಾಲೆಯಲ್ಲಿ ಶರ್ಮಿಳಾ ಅವರ ನಡೆ ಅಚ್ಚರಿ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಏನೆಲ್ಲಾ ಬದಲಾವಣೆಯಾಗಬಹುದು ಎನ್ನುವುದರ ಬಗ್ಗೆ ಕುತೂಹಲ ಹೆಚ್ಚಿಸಿದೆ.

ಓದಿ : ಕುಂದಾಪುರ : ಬಸ್‌ ಚಲಾಯಿಸಿದ್ದಕ್ಕೆ ಚಾಲಕನಿಗೆ ಸಹೋದ್ಯೋಗಿಯಿಂದ ಜೀವ ಬೆದರಿಕೆ!

Advertisement

Udayavani is now on Telegram. Click here to join our channel and stay updated with the latest news.

Next