Advertisement
ಅನಕಪಲ್ಲಿ ಜಿಲ್ಲೆಯ ಅಚ್ಯುತಪುರಂ ವಿಶೇಷ ಆರ್ಥಿಕ ವಲಯ (Achutapuram Special Economic Zone) ದಲ್ಲಿರುವ ಕಂಪನಿಯಲ್ಲಿ ಎಸ್ಸೆಂಟಿಯಾ ಫಾರ್ಮಾ ಕಂಪನಿಯ ಘಟಕದಲ್ಲಿ ಸ್ಫೋಟ ಸಂಭವಿಸಿತ್ತು. ಗಾಯಾಳುಗಳ ಚಿಕಿತ್ಸೆಗಾಗಿ ಎನ್‌ಟಿಆರ್ ಆಸ್ಪತ್ರೆಗೆ ರವಾನಿಸಲಾಗಿದೆ. ಮಧ್ಯಾಹ್ನ ಊಟದ ವೇಳೆ ಈ ಅವಘಡ ಸಂಭವಿಸಿದ್ದು, ಸ್ಫೋಟಕ್ಕೆ ಸೂಕ್ತ ಕಾರಣ ಏನೆಂಬುದು ತಿಳಿದು ಬಂದಿಲ್ಲ.
Related Articles
ಔಷಧ ಕಂಪನಿಯ ರಿಯಾಕ್ಟರ್ ಸ್ಫೋಟಗೊಂಡ ಸ್ಥಳಕ್ಕೆ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ನಾಳೆ ಭೇಟಿ ನೀಡುವ ಸಾಧ್ಯತೆ ಇದೆ. ಅವರು ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳ ಸಂಪರ್ಕಿಸಿ ಮಾತನಾಡಿದ್ದಾರೆ ಎನ್ನಲಾಗಿದೆ.
Advertisement
ಈ ಘಟನೆಯ ಬಗ್ಗೆ ಅನಕಪಲ್ಲಿ ಎಸ್‌ಪಿ ದೀಪಿಕಾ ಪಾಟೀಲ್ ಪ್ರತಿಕ್ರಿಯಿಸಿ ಸ್ಫೋಟದ ತೀವ್ರತೆಗೆ 15 ಮಂದಿ ಮೃತಪಟ್ಟಿದ್ದು, ಘಟನಾ ಸ್ಥಳದಲ್ಲಿ ಬೆಂಕಿ, ಹೊಗೆ ನಂದಿಸಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸ್ಫೋಟ ಸಂಭವಿಸಿದ್ದು ರಿಯಾಕ್ಟರ್ ಇರುವ ಪ್ರದೇಶದಲ್ಲಿ ಆಗಿದ್ದರೂ ರಿಯಾಕ್ಟರ್ ಸ್ಫೋಟಗೊಂಡಿಲ್ಲ. ಗಾಯಗೊಂಡವರ ಎನ್‌ಟಿಆರ್ ಆಸ್ಪತ್ರೆ ಹಾಗೂ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ತುರ್ತು ಸೇವೆ, ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಸುಮಾರು 10 ಮಂದಿಯ ಸಂಭವಿಸಬಹುದಾದ ಅಪಾಯದಿಂದ ರಕ್ಷಿಸಲಾಗಿದೆ ಎಂದು ಹೇಳಿದರು.
” 40 ಎಕರೆ ವಿಸ್ತೀರ್ಣದ ಫಾರ್ಮಾ ಕಂಪನಿಯಲ್ಲಿ 381 ಮಂದಿ ಕಾರ್ಮಿಕರು ಎರಡು ಪಾಳಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಊಟದ ವೇಳೆ ಸ್ಪೋಟಗೊಂಡಿದ್ದರಿಂದ ಹಲವು ಕಾರ್ಮಿಕರು ಅಪಾಯದಿಂದ ಪಾರಾದರು ಎಂದು ಅನಕಪಲ್ಲಿ ಜಿಲ್ಲಾಧಿಕಾರಿ ವಿಜಯ್ ಕೃಷ್ಣನ್ ಹೇಳಿದರು.