ಮುಂಬಯಿ: ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ವತಿಯಿಂದ ಜನಮನ ಜಾನಪದ ಸಾಂಸ್ಕೃತಿಕ ಸಂಸ್ಥೆ ಬೆಂಗಳೂರು ಇವರ ಸಹಯೋಗದಲ್ಲಿ ಗಡಿನಾಡ ಜಾನಪದ ಸಾಂಸ್ಕೃತಿಕ ಉತ್ಸವ ಮತ್ತು ಜಾದು ಪ್ರದರ್ಶನ ಹಾಗೂ ಮಂಡಳಿಯ ಮಾಜಿ ಪಾರುಪತ್ಯಗಾರರಿಗೆ ಸಮ್ಮಾನ ಕಾರ್ಯಕ್ರಮವು ಮಾ. 31 ರಂದು ಅಪರಾಹ್ನ 3.30ರಿಂದ ಅಂಧೇರಿಯ ಪ್ರತಿಷ್ಠಿತ ಮೊಗವೀರ ಭವನದ ಸಂಕುಲದಲ್ಲಿರುವ ಮಂಡಳಿಯ ಶ್ರೀಮತಿ ಶಾಲಿನಿ ಜಿ. ಶಂಕರ್ ಕನ್ವೆಶನ್ ಸೆಂಟರ್ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.
ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಅವರ ಸಹಕಾರದೊಂದಿಗೆ ಜನಮನ ಜಾನಪದ ಸಾಂಸ್ಕೃತಿಕ ಸಂಸ್ಥೆಯ ಸಹಯೋಗದಲ್ಲಿ ನಡೆಯಲಿರುವ ಈ ಕಾರ್ಯಕ್ರದ ಅಧ್ಯಕ್ಷತೆಯನ್ನು ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಕೃಷ್ಣಕುಮಾರ್ ಎಲ್. ಬಂಗೇರ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ನಿಕಟಪೂರ್ವ ಅಧ್ಯಕ್ಷ,
ಚಲನಚಿತ್ರ ನಟರಾದ ಮುಖ್ಯಮಂತ್ರಿ ಚಂದ್ರು ಅವರು ಜಾನಪದ ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸಿದರು. ಸಮಾರಂಭದಲ್ಲಿ ಮೊಗವೀರ ಮಂಡಳಿಯ ವಿಶ್ವಸ್ತ ಸದಸ್ಯ ಹರೀಶ್ ಕಾಂಚನ್ ಮತ್ತು ಗಣೇಶ್ ಎಸ್.ಪುತ್ರನ್ ಅವರನ್ನು ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿ ಅಭಿನಂದಿಸಿ ಗೌರಿವಿಸಲಾಯಿತು.
ಸಮಾರಂಭದಲ್ಲಿ ಅತಿಥಿಗಳಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ| ಕೆ. ಮುರಳೀಧರ, ರಂಗ ಕಲಾವಿದ, ಸಮಾಜ ಸೇವಕ ಡಾ| ಕಲಾರತ್ನ ರಾಮರೆಡ್ಡಿ, ಕನ್ನಡ ಸಂಘ ಬಂಗಾರಪೇಟೆ ಅಧ್ಯಕ್ಷೆ, ನಿವೃತ್ತ ಪ್ರಾಂಶುಪಾಲೆ ಡಾ| ಪಲ್ಲವಿ ಮಣಿ, ನಗರದ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ, ಸಮಾಜ ಸೇವಕರು ಮತ್ತು ಉದ್ಯಮಿಗಳಾದ ಶ್ರೀನಿವಾಸ ಎನ್. ಕಾಂಚನ್, ಎನ್‌ಆರ್‌ಎ ಫೋರಂ ಬಹರೇನ್ ಅಧ್ಯಕ್ಷ ಲೀಲಾಧರ್ ಬೈಕಂಪಾಡಿ ಉಪಸ್ಥಿತರಿದ್ದರು. ಜನಮನ
ಜಾನಪದ ಸಂಸ್ಥೆಯ ಸಂಸ್ಥಾಪಕ, ಗಾಯಕ ಗೋ. ನಾ. ಸ್ವಾಮಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಮೊಗವೀರ ವ್ಯವಸ್ಥಾಪಕ ಮಂಡಳಿಯ ಉಪಾಧ್ಯಕ್ಷ ಶ್ರೀನಿವಾಸ ಸುವರ್ಣ ಮತ್ತು ಅರವಿಂದ ಕಾಂಚನ್, ಗೌರವ ಪ್ರಧಾನ ಕಾರ್ಯದರ್ಶಿ ಸಂಜೀವ ಕೆ. ಸಾಲ್ಯಾನ್, ಕೋಶಾಧಿಕಾರಿ ದಿಲೀಪ್ ಕುಮಾರ್ ಮುಲ್ಕಿ ಅಲ್ಲದೆ ಮಂಡಳಿಯ ಪದಾಧಿಕಾರಿಗಳು, ಸಮಿತಿಯ ಸದಸ್ಯರು, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ರಾಜು ಶ್ರೀಯಾನ್, ಕಾರ್ಯದರ್ಶಿ ಧರ್ಮೇಶ್ ಪುತ್ರನ್, ಸಾಂಸ್ಕೃತಿಕ ಸಮಿತಿಯ ಸದಸ್ಯ ರಾದ ಸುರೇಶ್ ಶ್ರೀಯಾನ್, ಪ್ರೀತಿ ಶ್ರೀಯಾನ್, ಸುರೇಖಾ ಸುವರ್ಣ, ದೇವರಾಜ್ ಕುಂದರ್, ದಯಾನಂದ ಬಂಗೇರ ಮತ್ತು ಅಶೋಕ್ ಸುವರ್ಣ, ಮೊಗವೀರ ಬ್ಯಾಂಕಿನ ಕಾರ್ಯಾಧ್ಯಕ್ಷ ಸದಾನಂದ ಎ. ಕೋಟ್ಯಾನ್, ಗಿನ್ನಿಸ್ ರೆಕಾರ್ಡ್ ನೃತ್ಯ ನಿರ್ದೇಶಕಿ ಡಾ| ಮೀನಾಕ್ಷಿ
ರಾಜು ಶ್ರೀಯಾನ್, ಮಂಡಳಿಯ ಸಾಂಸ್ಕೃತಿಕ ಸಮಿತಿಯ ಸದಸ್ಯ
ರಾದ ಸುರೇಶ್ ಶ್ರೀಯಾನ್, ಸುರೇಖಾ ಸುವರ್ಣ, ಪ್ರೀತಿ ಶ್ರೀಯಾನ್, ದೇವ್‌ರಾಜ್ ಕುಂದರ್, ದಯಾನಂದ ಬಂಗೇರ ಹಾಗೂ ನಗರದ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ತುಳು-ಕನ್ನಡಿಗರು, ಕಲಾಭಿ ಮಾನಿಗಳು, ಕಲಾಪೋಷಕರು ಉಪಸ್ಥಿತರಿದ್ದರು.
ಚಿತ್ರ-ವರದಿ: ರೋನ್ಸ್ ಬಂಟ್ವಾಳ್