Advertisement

ಅಂಧೇರಿ ಶ್ರೀ ಭ್ರಮರಾಂಬಿಕೆ ದೇವಸ್ಥಾನದ 37ನೇ ವಾರ್ಷಿಕ ಮಹಾಪೂಜೆ

05:28 PM Feb 23, 2017 | Team Udayavani |

ಮುಂಬಯಿ: ಅಂಧೇರಿ ಪೂರ್ವದ ಸಾಕಿನಾಕಾ-ಖೇರಾಣಿರೋಡ್‌ನ‌ ಗಣೇಶ್‌ ಚಾಳ್‌ನಲ್ಲಿರುವ ಶ್ರೀ ಭ್ರಮರಾಂಬಿಕೆ ದೇವಸ್ಥಾನದ 37ನೇ ವಾರ್ಷಿಕ ಮಹಾಪೂಜೆಯು ಫೆ. 17ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಪೂಜಾ ಕೈಂಕರ್ಯಗಳೊಂದಿಗೆ ಜರಗಿತು.

Advertisement

ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಶ್ರೀ ಸತ್ಯನಾರಾಯಣ ಮಹಾಪೂಜೆಯು ದೇವಸ್ಥಾನದ ಟ್ರಸ್ಟಿ ಕೆರ್ಗಲ್ಲು ಉದಯ ಶೆಟ್ಟಿ ದಂಯ ಯಜಮಾನಿಕೆಯಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಸಾಯಿ ಸಂತೋಷ್‌ ಭಟ್‌ ಪೌರೋಹಿತ್ಯದಲ್ಲಿ ನಡೆಯಿತು. ಬಳಿಕ ಮಹಾ ಪೂಜೆ, ಮಹಾಮಂಗಳಾರತಿ, ಅನ್ನದಾನವನ್ನು ಆಯೋಜಿಸಲಾಗಿತ್ತು.

ಮಧ್ಯಾಹ್ನ ದೇವಿ ದರ್ಶನ, ಸಂಜೆ ಶೋಭಾಯಾತ್ರೆ ನೆರವೇರಿತು. ಈ ಸಂದರ್ಭ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಕೃಷ್ಣ ಬಿ. ಶೆಟ್ಟಿ ದಂಪತಿ, ಕಾರ್ಯದರ್ಶಿ ದಿನೇಶ್‌ ಆರ್‌. ಕೆ., ಕೋಶಾಧಿಕಾರಿ ಗಣೇಶ್‌ ಬಲ್ಯಾಯ, ಉಪಾಧ್ಯಕ್ಷ ನೀಲೇಶ್‌ ಶೆಟ್ಟಿಗಾರ್‌, ಜತೆ ಕಾರ್ಯದರ್ಶಿ ಜಗಜೀವನ್‌ ಪೂಜಾರಿ, ಜತೆ ಕೋಶಾಧಿಕಾರಿ ಆಶಿಶ್‌ಶೆಟ್ಟಿ, ಟ್ರಸ್ಟಿಗಳಾದ ಮಾಧವ ಶೆಟ್ಟಿ, ಶ್ರೀನಿವಾಸ ಸಾಲ್ಯಾನ್‌, ರಾಜೇಂದ್ರ ಭಟ್‌, ವಿಶ್ವನಾಥ್‌ ಶೇರಿಗಾರ್‌, ಪರ್ವಿಂದರ್‌ ಸಿಂಗ್‌, ಸಂಧ್ಯಾಕಲಾ ಅಮೀನ್‌, ಪೂಜಾ ಸಮಿತಿಯ ಸತೀಶ್‌ ಕರ್ಕೇರ, ಭಾಸ್ಕರ ಸುವರ್ಣ ಸಸಿಹಿತ್ಲು, ನಾಗರಾಜ ಪೂಜಾರಿ, ಅಶೋಕ್‌ ಶೆಟ್ಟಿ ತೋಡಾರ್‌, ಅಂಧೇರಿ ಕರ್ನಾಟಕ ಸಂಘದ ಅಧ್ಯಕ್ಷ ಹ್ಯಾರಿ ಸಿ. ಸಿಕ್ವೇರಾ ಮೊದಲಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next