Advertisement
ಕಟ್ಟಡ ಕಟ್ಟಿ ಒಂದು ದಿನವೂ ಶೈಕ್ಷಣಿಕ ಚಟುವಟಿಕೆ ನಡೆಯದೆ ಸರಕಾರ ಅನುದಾನ ನಿಷ್ಪ್ರಯೋಜಕವಾಗಿ ಕಟ್ಟಡ ಕುಸಿಯುತ್ತಿರುವ ಬಗ್ಗೆ ಉದಯವಾಣಿ ಪತ್ರಿಕೆಯು 2018ರ ಜುಲೈ 2ರಂದು ಸಚಿತ್ರ ವರದಿ ಪ್ರಕಟಿಸಿತ್ತು. ವರದಿ ಗಮನಿಸಿದ ಶಿಕ್ಷಣ ಇಲಾಖೆಯ ಅಂದಿನ ಶಿಕ್ಷಣಾಧಿಕಾರಿ ಜುಲೈ 3ರಂದೇ ಕಟ್ಟಡದ ಬಗ್ಗೆ ವರದಿ ನೀಡುವಂತೆ ಸೂಚನೆ ನೀಡಿತ್ತು.
ಆದರೆ ವರದಿ ನೀಡಿ 8 ತಿಂಗಳು ಕಳೆದರೂ ಇಲಾಖೆ ಅಥವಾ ಸರಕಾರದಿಂದ ಯಾವುದೇ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಇದೀಗ ಶಾಲೆಯ ಹಳೆವಿದ್ಯಾರ್ಥಿ ಸಂಘ ಹಾಗೂ ಶಾಲಾಭಿವೃದ್ಧಿ ಸಮಿತಿಯ ನೇತೃತ್ವದಲ್ಲಿ ದಾನಿಗಳ ಸಹಕಾರದೊಂದಿಗೆ ಕಟ್ಟಡದ ಕುಸಿದ ಮೇಲ್ಛಾವಣಿ ದುರಸ್ತಿ ಕಾರ್ಯ ನಡೆಯುತ್ತಿದೆ. ಸರಕಾರದ ಲಕ್ಷಾಂತರ ರೂ. ವೆಚ್ಚದ ಅನುದಾನ ನಿಷ್ಪ್ರಯೋಜಕವಾಗುವುದನ್ನು ತಡೆಯುವಲ್ಲಿ ಹಳೆವಿದ್ಯಾರ್ಥಿ ಸಂಘ ಕಾರ್ಯೋನ್ಮುಖವಾಗಿದೆ.