Advertisement

ಅಂಡಮಾನ್‌ ಕೋವಿಡ್ ಮುಕ್ತ ಪ್ರದೇಶ? ಹೊಸದಾಗಿ ದೃಢವಾಗದ ಸೋಂಕು ಪ್ರಕರಣ

08:45 PM Feb 03, 2021 | Team Udayavani |

ನವದೆಹಲಿ: ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪ ಸಮೂಹ ದೇಶದ ಮೊದಲ ಕೋವಿಡ್ ಸೋಂಕು ಮುಕ್ತ ಪ್ರದೇಶ ಎಂಬ ಹೆಗ್ಗಳಿಕೆಯತ್ತ ಸಾಗಿದೆ.

Advertisement

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನೀಡಿದ ಮಾಹಿತಿ ಪ್ರಕಾರ ಕೆಲ ದಿನಗಳ ಹಿಂದೆ ದೃಢಪಟ್ಟಿದ್ದ ನಾಲ್ಕು ಪ್ರಕರಣಗಳೂ ಚೇತರಿಕೆ ಕಂಡಿವೆ ಎಂದು “ದ ಟೈಮ್ಸ್‌ ಆಫ್ ಇಂಡಿಯಾ’ ವರದಿ ಮಾಡಿದೆ.

ಕೇಂದ್ರಾಡಳಿತ ಪ್ರದೇಶದಲ್ಲಿ ಒಟ್ಟು 4,932 ಕೇಸುಗಳು ಮತ್ತು 62 ಮಂದಿ ಅಸುನೀಗಿದ್ದರು.ಇದೇ ವೇಳೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಮೂರು ದಿನಗಳಿಂದ ಸೋಂಕು ಪತ್ತೆಯಾಗಿಲ್ಲ. ಇಂಥ ಬೆಳವಣಿಗೆ ಆ ರಾಜ್ಯದಲ್ಲಿ ಇದೇ ಮೊದಲು.

ಮತ್ತೆ ಏರಿಕೆ: ದೇಶದಲ್ಲಿ ಹೊಸತಾಗಿ 11,039 ಸೋಂಕು ಪ್ರಕರಣ ಮತ್ತು 110 ಮಂದಿ ಅಸುನೀಗಿದ್ದಾರೆ. 1,04,62,631 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಹೀಗಾಗಿ, ದೇಶದಲ್ಲಿ ಚೇತರಿಕೆ ಪ್ರಮಾಣ ಶೇ. 97.08ಆಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ದೇಶದಲ್ಲಿ ಸದ್ಯ 1,60,057 ಸಕ್ರಿಯ ಕೇಸುಗಳಿವೆ.

ಸಾಮರ್ಥ್ಯ ಇದೆ: ಇದೇ ವೇಳೆ, ಆಕ್ಸ್‌ಫ‌ರ್ಡ್‌ ವಿವಿ ಮತ್ತು ಆಸ್ಟಾಜೆನೆಕಾ ಸಿದ್ಧಪಡಿಸಿದ ಲಸಿಕೆಯಿಂದಾಗಿ ಶೇ.67ರಷ್ಟು ಪ್ರಮಾಣದಲ್ಲಿ ಸೋಂಕು ತಡೆಯಲು ಸಾಧ್ಯವಾಗಿದೆ. ಮೊದಲ ಎರಡು ಡೋಸ್‌ಗಳನ್ನು ನೀಡಿದ ಬಳಿಕ  ನಡೆಸಲಾಗಿರುವ ಅಧ್ಯಯನದಲ್ಲಿ ಈ ಅಂಶ ತಿಳಿದುಬಂದಿದೆ ಎಂದು ಆಕ್ಸ್‌ಫ‌ರ್ಡ್‌ ವಿವಿ ತಿಳಿಸಿದ್ದು, ಯು.ಕೆ. ಸರ್ಕಾರ ಈ ಅಂಶವನ್ನು “ಒಳ್ಳೆಯ ಸುದ್ದಿ’ ಎಂದು ಹೇಳಿದೆ.

Advertisement

20 ದೇಶಗಳಿಗೆ ನಿಷೇಧ: ಕೊರೊನಾ ನಿಯಂತ್ರಣ ನಿಟ್ಟಿನಲ್ಲಿ ಸೌದಿ ಅರೇಬಿಯಾ ಭಾರತ, ಅಮೆರಿಕ ಸೇರಿದಂತೆ 20 ದೇಶಗಳ ಪ್ರಯಾಣಿಕರಿಗೆ ನಿಷೇಧ ಹೇರಿದೆ. 2020 ಸೆಪ್ಟೆಂಬರ್‌ನಿಂದಲೇ ಸೌದಿಗೆ ದೇಶದಿಂದ ವಿಮಾನ ಯಾನ ರದ್ದಾಗಿದೆ. ಗಮನಾರ್ಹ ಅಂಶವೆಂದರೆ ಪಟ್ಟಿಯಲ್ಲಿ ಸೂಚಿಸಲಾಗಿರುವ 20 ದೇಶಕ್ಕೆ ಭೇಟಿ ನೀಡಿರುವ ಪ್ರಯಾಣಿಕರಿಗೂ ಸೌದಿ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.

ಇದನ್ನೂ ಓದಿ:ಟ್ವಿಟ್ಟರ್ ನಿಂದ ಮತ್ತೆ ಬ್ರೇಕ್ ಪಡೆಯಲಿದ್ದಾರೆ ಟೆಸ್ಲಾ, ಸ್ಪೇಸ್‌ ಎಕ್ಸ್ ಸಿಇಒ ಮಸ್ಕ್

ವುಹಾನ್‌ ಲ್ಯಾಬ್‌ಗ WHO ತಂಡ ಭೇಟಿ
ಕೋವಿಡ್ ಸೋಂಕು ಉದ್ಭವವಾಗಿದೆ ಎಂದು ಶಂಕಿಸಲಾಗಿರುವ ಚೀನಾದ ವುಹಾನ್‌ನ ಲ್ಯಾಬ್‌ಗೆ ವಿಶ್ವ ಆರೋಗ್ಯ ಸಂಸ್ಥೆಯ ತಂಡ ಭೇಟಿ ನೀಡಿದೆ. ತಂಡದ ಸದಸ್ಯ Peter Daszak‌ ಮಾತನಾಡಿ ಲ್ಯಾಬ್‌ನ ಪ್ರಮುಖ ಅಧಿಕಾರಿಗಳ ಜತೆಗೆ ಭೇಟಿಯಾಗಿ ಮಾಹಿತಿ ಸಂಗ್ರಹಿಸುವ ಉದ್ದೇಶವಿದೆ ಎಂದಿದ್ದಾರೆ. ವುಹಾನ್‌ ಇನ್ಟಿಟ್ಯೂಟ್‌ ಆಫ್ ವೈರಾಲಜಿಯ ಪ್ರಯೋಗ ಶಾಲೆಯಿಂದಲೇ ಸೋಂಕು ಹುಟ್ಟಿಕೊಂಡಿದೆ ಎಂಬ ಶಂಕೆ ಇದೆ. ಆದರೆ ಈ ಅಂಶವನ್ನು ಒಪ್ಪಿಕೊಳ್ಳಲು ಚೀನಾ ತಯಾರಿಲ್ಲ. 2003ರಲ್ಲಿ ಸಾರ್ಸ್‌ ಉಂಟಾಗಿದ್ದ ಸಂದರ್ಭದಲ್ಲಿಯೂ ಕೂಡ ಜೀನ್‌ಗಳ ಅಂಶ ಸಂಗ್ರಹಿಸಿಟ್ಟುಕೊಂಡಿತ್ತು ಎಂಬ ಆರೋಪ ಈ ಲ್ಯಾಬ್‌ ಮೇಲಿದೆ.

Advertisement

Udayavani is now on Telegram. Click here to join our channel and stay updated with the latest news.

Next