Advertisement

ಅಪಸ್ಮಾರದ ಬಗೆಗಿನ ತಪ್ಪು ಕಲ್ಪನೆಗಳು ಮತ್ತು ವಾಸ್ತವ

03:45 AM Jan 29, 2017 | |

ಅಪಸ್ಮಾರ ಅಥವಾ ಮೂರ್ಛೆ ರೋಗ (ಎಪಿಲೆಪ್ಸಿ) ಎಂದರೆ ಅದು ಮಾನಸಿಕ ಅಸ್ವಸ್ಥತೆ ಎಂಬ ತಪ್ಪು ಕಲ್ಪನೆ ಅಥವಾ ತಪ್ಪು ಅಭಿಪ್ರಾಯ ಜನಸಾಮಾನ್ಯರಲ್ಲಿ ಇದೆ.
 
ಆದರೆ ಕ್ಷಮಿಸಿ, ನನಗೆ ಇದನ್ನು ಹೇಳಲು ಬೇಸರವಿದೆ ಅಪಸ್ಮಾರ ಎಂದ ಕೂಡಲೆ ಅನೇಕ ಜನರು ಮಾನಸಿಕ ತಜ್ಞರಲ್ಲಿಗೆ ಚಿಕಿತ್ಸೆಗೆ ಹೋಗುತ್ತಾರೆ ಮತ್ತು ಅಲ್ಲಿ ಅನುಚಿತ ಪ್ರಮಾಣದಲ್ಲಿ, ಸಮಂಜಸವಲ್ಲದ ಔಷಧಿಯನ್ನು ತೆಗೆದುಕೊಳ್ಳುತ್ತಾರೆ. ಆದರೆ ತಪ್ಪು ಚಿಕಿತ್ಸೆಯ ಕಾರಣದಿಂದಾಗಿ ಅಪಸ್ಮಾರ ಅಥವಾ ಸೆಳವಿನ ಅಸ್ವಸ್ಥತೆಯು, ಔಷಧಿಗೆ ಪ್ರತಿರೋಧಕತೆಯನ್ನು ತೋರಿಸುವ ಸಾಧ್ಯತೆ ಇದೆ. ನಾನು ಇಲ್ಲಿ ಜನರಿಗೆ ಹೇಳಲು ಹೊರಟಿರುವುದು ಇಷ್ಟೇ, ಅಪಸ್ಮಾರ ಅನ್ನುವುದು ನರಸಂಬಂಧಿ ಅಸ್ವಸ್ಥತೆಯೇ ಹೊರತು ಅದು ಮಾನಸಿಕ ಅಸ್ವಸ್ಥತೆ ಅಲ್ಲ. 

Advertisement

ಅಪಸ್ಮಾರ ಇರುವ ಜನರು ಮದುವೆ ಆಗಬಾರದು ಮತ್ತು ಗರ್ಭಧರಿಸಬಾರದು.

ಇದು ನಮ್ಮ ಜನಗಳಲ್ಲಿ ಇರುವ ಮತ್ತೂಂದು ತಪ್ಪು ಕಲ್ಪನೆ. ಅಪಸ್ಮಾರ ಇರುವ ಜನರೂ ಸಹ ಮದುವೆ ಆಗಬಹುದು ಮತ್ತು ಸಾಂಸಾರಿಕ ಜೀವನ ನಡೆಸಬಹುದು.  ಆದರೆ ಗರ್ಭಧಾರಣೆಯ ಅವಧಿಯಲ್ಲಿ ನೀಡುವ ಔಷಧಿಯನ್ನು ಎಚ್ಚರಿಕೆಯಿಂದ ಗಮನಿಸಬೇಕು.  ಕೆಲವು ಔಷಧಿಗಳನ್ನು ಗರ್ಭಧಾರಣೆಯ ಅವಧಿಯಲ್ಲಿ ಕೊಡುವುದು ಅಷ್ಟೊಂದು ಸುರಕ್ಷಿತ ಅಲ್ಲ. 

ಅಪಸ್ಮಾರ ಅನ್ನುವುದು ದೆವ್ವದ ಕಾಟದಿಂದ ಬರುವ ತೊಂದರೆ- ಇದು ಹಳ್ಳಿಗರಲ್ಲಿ ಮತ್ತು ಗ್ರಾಮೀಣ ಜನರಲ್ಲಿ ಬಹಳ ಸಾಮಾನ್ಯವಾಗಿ ಇರುವಂತಹ ಒಂದು ತಪ್ಪು ಅಭಿಪ್ರಾಯ. 

ಯಾರಲ್ಲಿಯಾದರೂ ಅಪಸ್ಮಾರದ ಆಘಾತ ಕಂಡು ಬಂದರೆ ಆ ವ್ಯಕ್ತಿಯ ಮೈಯಲ್ಲಿ ದೇವರು ಬಂದಿದ್ದಾನೆ ಅಥವಾ ದೆವ್ವ ಹೊಕ್ಕಿದೆ ಎಂದು ಭಾವಿಸುವುದಿದೆ. ಜನರು ಆ ಅಸ್ವಸ್ಥ ವ್ಯಕ್ತಿಯನ್ನು ಆರಾಧಿಸಲು ತೊಡಗುತ್ತಾರೆ ಅಥವಾ ಮಂತ್ರವಾದಿ ಇತ್ಯಾದಿಗಳ ಬಳಿಗೆ ಅವರನ್ನು ಕರೆದುಕೊಂಡು ಹೋಗುತ್ತಾರೆ. ಜನರ ತಮ್ಮ ಮನಸ್ಸಿನಲ್ಲಿರುವ ಈ ತಪ್ಪು ಕಲ್ಪನೆಯನ್ನು ಬಿಟ್ಟು ಬಿಡಬೇಕು. ಅಪಸ್ಮಾರ ಅನ್ನುವುದು ಅದೊಂದು ನರಸಂಬಂಧಿ ಕಾಯಿಲೆಯೇ ಹೊರತು ದೆವ್ವದ ಕಾಟ ಅಲ್ಲ. 

Advertisement

ಯಾರಲ್ಲಿಯಾದರೂ ಅಪಸ್ಮಾರದ ಆಘಾತ ಕಂಡು ಬಂದರೆ ಒಂದು ತುಂಡು ಕಬ್ಬಿಣ ಅಥವಾ ಕೀ-ಗೊಂಚಲನ್ನು ಕೊಡುವುದು ಜನಸಾಮಾನ್ಯರಲ್ಲಿ ಮಾತ್ರವಲ್ಲ ವಿದ್ಯಾವಂತ ವರ್ಗದವರಲ್ಲಿಯೂ ಈ ನಡವಳಿಕೆ ಕಂಡು ಬರುತ್ತದೆ.
 
ಇದು ತಪ್ಪು$, ಯಾವ ವ್ಯಕ್ತಿಯಲ್ಲಿಯದರೂ ಅಪಸ್ಮಾರದ ಸೆಳವು ಅಥವಾ ಆಘಾತ ಕಂಡು ಬಂದರೆ, ಜನರು ಆ ವ್ಯಕ್ತಿಯ ಸುತ್ತಲೂ ಗುಂಪು ಕಟ್ಟುತ್ತಾರೆ, ಹಾಗೆ ಮಾಡಬಾರದು, ರೋಗಿಯತ್ತ ಶುದ್ಧ ಗಾಳಿ ಬೀಸುವಂತಾಗಲು ಸ್ಪಲ್ಪ ತೆರವು ಮಾಡಿಕೊಡಬೇಕು. ವ್ಯಕ್ತಿಗೆ ಮೊನಚಾದ ವಸ್ತುಗಳು ಅಥವಾ ಕಲ್ಲುಗಳಿಂದ ಗಾಯಗಳಾಗದಂತೆ ರಕ್ಷಣೆ ನೀಡಬೇಕು. ಕುತ್ತಿಗೆಯ ಸುತ್ತಲಿನ ಬಟ್ಟೆಯನ್ನು ಸಡಿಲಿಸಿ. ಮಿಡಾಝೊàಲಂ ಸ್ಪ್ರೆà (ಸ್ಪ್ರೆà ರೋಪದಲ್ಲಿಇರುವ ಅಪಸ್ಮಾರ ನಿರೋಧಕ ಔಷಧಿ) ಲಭ್ಯ ಇದ್ದರೆ ಅದನ್ನು ಮೂಗಿಗೆ ಸ್ಪ್ರೆà ಮಾಡಿ. ಮಿಡಾಝೊàಲಂ ಸ್ಪ್ರೆà ಮಾಡಿದ ನಂತರವೂ ವ್ಯಕ್ತಿಯಲ್ಲಿ ಸೆಳವು ಮತ್ತೆ ಮತ್ತೆ ಕಾಣಿಸಿಕೊಂಡರೆ ಅವರಿಗೆ ಆಸ್ಪತ್ರೆಯ ಆರೈಕೆಯನ್ನು ವ್ಯವಸ್ಥೆಗೊಳಿಸುವುದು ಸೂಕ್ತ.  

ಅಪಸ್ಮಾರದ ಸೆಳವು ಕಾಣಿಸಿಕೊಂಡ ವ್ಯಕ್ತಿಯ ಬಾಯಿಯಲ್ಲಿ ಏನನ್ನಾದರೂ ಹಾಕುವುದು (ರೋಗಿಯು ನಾಲಗೆಯನ್ನು ಕಚ್ಚಿಕೊಳ್ಳುತ್ತಾನೆ ಎಂಬ ಭಯಕ್ಕೆ) ಮತ್ತು ತೀಕ್ಷ್ಣ ವಾಸನೆ ಇರುವ ಈರುಳ್ಳಿ ಇತ್ಯಾದಿ ವಸ್ತುಗಳನ್ನು ಮೂಗಿಗೆ ಹಿಡಿಯುವ ತಪ್ಪು ಕಲ್ಪನೆಯೂ ಕೆಲವರಲ್ಲಿ ಇದೆ. ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಹಳ್ಳಿಗಳಲ್ಲಿ ತಪ್ಪಾಗಿ ಈ ಕ್ರಮವನ್ನು ಅನುಸರಿಸುತ್ತಾರೆ. ಯಾರಿಗಾದರೂ ಅಪಸ್ಮಾರದ ಸೆಳವು ಕಾಣಿಸಿಕೊಂಡರೆ ಈ ರೀತಿಯ ಅಸುರಕ್ಷಿತ ರೀತಿಯ ಆರೈಕೆ ನೀಡುವುದು ಸರಿಯಲ್ಲ. ಆ ರೋಗಿಗೆ ಆಸ್ಪತ್ರೆಯಲ್ಲಿ ಆರೈಕೆ ಪಡೆಯುವ ಆವಶ್ಯಕತೆ ಇರಬಹುದು. 

ಗರ್ಭಧಾರಣೆಯ ಅವಧಿಯಲ್ಲಿ ಎಲ್ಲಾ ರೀತಿಯ ಔಷಧಿಗಳು ಬಳಕೆಗೆ ಸುರಕ್ಷಿತ ಅಲ್ಲ ಎಂಬ ಭಾವನೆಯೂ ಸಹ ಜನರಲ್ಲಿ ಇದೆ.
ನಿಮಗೆ ಅಪಸ್ಮಾರ ಇದ್ದು, ನೀವು ಔಷಧಿ ತೆಗೆದುಕೊಳ್ಳದಿದ್ದರೆ ಅದರಿಂದ ನಿಮಗೆ ಹಾಗೂ ನಿಮ್ಮ ಗರ್ಭದಲ್ಲಿ ಬೆಳೆಯುತ್ತಿರುವ ಮಗು ಇಬ್ಬರಿಗೂ ಅಪಾಯವಾಗುವ ಸಾಧ್ಯತೆ ಇದೆ. ಸೋಡಿಯಂ ವಾಲೊøಯೆಟ್‌ನಂತಹ ಔಷಧಿಗಳು ಗರ್ಭಧಾರಣಾ ಅವಧಿಯಲ್ಲಿ ಪ್ರಯೋಜನಕಾರಿ. 

ಲ್ಯಾಮೋಟ್ರಿಗೈನ್‌ ಮತ್ತು ಲೆವಿಟೆರಿಸೆಟಂನಂತಹ ಹೊಸ ಔಷಧಿಗಳು ಗರ್ಭಧಾರಣಾ ಅವಧಿಯ ಬಳಕೆಗೆ ಬಹಳ ಸುರಕ್ಷಿತ. 

ಅಪಸ್ಮಾರ ಕಾಯಿಲೆ ಇರುವವರು ಮಗುವಿಗೆ ಹಾಲೂಡಿಸಬಾರದು- ಎನ್ನುವುದು ಮತ್ತೂಂದು ತಪ್ಪು ಕಲ್ಪನೆ.ಹೆಚ್ಚಿನ ಹಳೆಯ ಔಷಧಿಗಳಾದ ಫಿನೈಟಾಯಿನ್‌, ಕಾರ್ಬಮಾಝೆಫೈನ್‌, ಸೋಡಿಯಂ ವಾಲ್‌ಪ್ರೊಯೇಟ್‌ಗಳು  ಎದೆ ಹಾಲಿನ ಮೂಲಕ ಬಹಳ ಸಣ್ಣ ಪ್ರಮಾಣದಲ್ಲಿ ಸ್ರವಿಕೆ ಆಗುತ್ತವೆ. ಮಗುವಿಗೆ ಹಾಲೂಡಿಸುವ ಅವಧಿಯಲ್ಲಿಯೂ ಸಹ ಈ ಔಷಧಿಗಳು ಸುರಕ್ಷಿತ. 

ಅಪಸ್ಮಾರ ಅನ್ನುವುದು ಮಕ್ಕಳಲ್ಲಿ ಮಾತ್ರವೇ ಕಂಡು ಬರುವ ಕಾಯಿಲೆ ಎಂಬುದು ಜನಸಾಮಾನ್ಯರಲ್ಲಿ ಬಹಳ ಸಾಮಾನ್ಯವಾಗಿ ಇರುವಂತಹ ತಪ್ಪು ಕಲ್ಪನೆ.
 
ಅಪಸ್ಮಾರ ಎಂಬ ಕಾಯಿಲೆಯು ಮನುಷ್ಯನ ಯಾವ ವಯೋಮಾನದಲ್ಲಿ ಬೇಕಾದರೂ ಕಾಣಿಸಿಕೊಳ್ಳಬಹುದು; ಅಂದರೆ ಮನುಷ್ಯನ ಜೀವಿತದ ಮೊದಲ ದಿನ ಅಥವಾ ಮುದಿವಯಸ್ಸಿನಲ್ಲಿಯೂ ಕಾಣಿಸಿಕೊಳ್ಳಬಹುದು. ಆದರೆ ಬೇರೆ ಬೇರೆ ವಯಸ್ಸಿನಲ್ಲಿ ಕಾಣಿಸಿಕೊಳ್ಳುವ ಅಪಸ್ಮಾರದ ಕಾರಣಗಳಲ್ಲಿ ವ್ಯತ್ಯಾಸ ಇರಬಹುದು. 

– ಡಾ| ಶಿವಾನಂದ ಪೈ, 
ಅಸೋಸಿಯೇಟ್‌ ಪ್ರೊಫೆಸರ್‌,
ನ್ಯೂರಾಲಜಿ ವಿಭಾಗ. 
ಕಸ್ತೂರ್ಬಾ ಮೆಡಿಕಲ್‌ ಕಾಲೇಜು ಮಂಗಳೂರು.

Advertisement

Udayavani is now on Telegram. Click here to join our channel and stay updated with the latest news.

Next