Advertisement

ರಾಜ್ಯಾದ್ಯಂತ 33 ಬ್ರೈನ್‌ ಹೆಲ್ತ್‌ ಕ್ಲಿನಿಕ್‌; ನರಸಂಬಂಧಿ ರೋಗಗಳಿಗೆ ಉಚಿತ ಚಿಕಿತ್ಸೆ

01:05 AM Mar 12, 2024 | Team Udayavani |

ಬೆಂಗಳೂರು: ಆರೋಗ್ಯ ಇಲಾಖೆ, ನಿಮ್ಹಾನ್ಸ್‌ ಸಹಯೋಗದಲ್ಲಿ ಮಿದುಳಿನ ಆರೋಗ್ಯ ಮತ್ತು ಆರೈಕೆ ಸೇವೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಬ್ರೈನ್‌ ಹೆಲ್ತ್‌ ಇನಿಶಿಯೇಟ್‌ ಯೋಜನೆಯಡಿ ರಾಜ್ಯಾದ್ಯಂತ ಸ್ಥಾಪಿಸಲಾದ 33 ಬ್ರೈನ್‌ ಹೆಲ್ತ್‌ ಕ್ಲಿನಿಕ್‌’ಗೆ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ಸೋಮವಾರ ನಿಮ್ಹಾನ್ಸ್‌ನ ಸಮ್ಮೇಳನ ಸಭಾಂಗಣದಲ್ಲಿ ಚಾಲನೆ ನೀಡಿದರು.

Advertisement

ಬೆಂಗಳೂರು ಕೆಸಿ ಜನರಲ್‌, ಜಯನಗರ ಹಾಗೂ ಆನೇಕಲ್‌ ತಾಲೂಕಿನ ಆಸ್ಪತ್ರೆಯಲ್ಲಿ ಸೇರಿ ರಾಜ್ಯದ ಇತರ 30 ಜಿಲ್ಲೆಗಳಲ್ಲಿ ತಲಾ ಒಂದರಂತೆ ಒಟ್ಟು 33 ಬ್ರೈನ್‌ ಹೆಲ್ತ್‌ ಕ್ಲಿನಿಕ್‌ಗಳನ್ನು 25 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ನರ ಸಂಬಂಧಿಸಿದ ಕಾಯಿಲೆಗಳಾದ ಪಾರ್ಶ್ವವಾಯು, ತಲೆನೋವು, ಅಪಸ್ಮಾರ, ಇತರ ನರ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಉಚಿತವಾಗಿ ಗುಣಮಟ್ಟದ ಚಿಕಿತ್ಸೆ ಸಿಗಲಿದೆ.

ನರ ರೋಗಿಗಳಿಗೆ ಚಿಕಿತ್ಸೆ ನೀಡಲು ಅಗತ್ಯವಿರುವ ಎಂಆರ್‌, ಸಿಟಿ ಸ್ಕ್ಯಾನಿಂಗ್‌, ರಕ್ತ ಪರೀಕ್ಷೆ ಸೇರಿದಂತೆ ಇತರ ಆಯ್ದ ಲ್ಯಾಬೋರೇಟರಿ ಸೇವೆಗಳು ಸರಕಾರಿ ಜಿಲ್ಲಾಸ್ಪತ್ರೆಗಳಲ್ಲಿಯೇ ಇವೆ. ಇದರಿಂದಾಗಿ ರೋಗಿಗಳಿಗೆ ತುರ್ತು ಚಿಕಿತ್ಸೆ ಸಿಗುವುದರಿಂದ ಜೀವ ಉಳಿಸಲು ಸಾಧ್ಯವಿದೆ. ಇಲ್ಲಿ ರೋಗಿಗಳಿಗೆ ಅಗತ್ಯವಿರುವ ಸಮಾಲೋಚನೆ, ಫಿಸಿಯೋಥೆರಪಿ, ಸ್ಪೀಚ್‌ ಥೆರಪಿ, ಪುನರ್ವಸತಿ ಹಾಗೂ ಸಮಗ್ರ ಆರೈಕೆ ಲಭ್ಯವಿದೆ. ಇನ್ನೂ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟುವುದು ಸೇರಿ ಇತರ ಕ್ಲಿಷ್ಟಕರವಾದ ನರ ರೋಗದ ಚಿಕಿತ್ಸೆಗೆ ತೃತೀಯ ಹಂತ (ಸ್ಪೆಶಲಿಸ್ಟ್‌) ಆಸ್ಪತ್ರೆಗೆ ಕಳುಹಿಸಿಕೊಡಲಾಗುತ್ತದೆ.

 

Advertisement

Udayavani is now on Telegram. Click here to join our channel and stay updated with the latest news.

Next